ಬೆಂಗಳೂರು : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಭೇಟಿಯಲ್ಲಿ ಕುತೂಹಲ ಏನಿಲ್ಲ. ಬೆಂಗಳೂರಿಗೆ ಬಂದಾಗ ಭೇಟಿಯಾಗ್ತೇನೆ. ಅವರು ಹಿರಿಯರು,ನಮ್ಮ ಸಮಾಜದ ಮುಖಂಡರು. ಇವತ್ತು ಗುರುಪೂರ್ಣಿಮೆ ಬೇರೆ. ಹಿರಿಯರ ಆಶೀರ್ವಾದ ಪಡೆಯೋಣ ಎಂದು ಬಂದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಬೇರೆ ರೀತಿ ಏನೂ ಇಲ್ಲ. ಇದೊಂದು ಸೌಹಾರ್ಧಯುತ ಭೇಟಿ. ಅವರ ಮಾರ್ಗದರ್ಶನ ಪಡೆದಿದ್ದೇನೆ. ಅವರ ಜೊತೆ ರಾಜಕಾರಣದ ಚರ್ಚೆ ಮಾಡಿಲ್ಲ. ಅವರಿಗೆ ಗೌರವ ಕೊಡ್ತಾನೇ ಬಂದಿದ್ದೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ


ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲು ವಿಚಾರವಾಗಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ಕೊಡಬೇಕು ಎಂಬ ಆಸಕ್ತಿ ಇತ್ತು ಯಡಿಯೂರಪ್ಪ ಅವರಿಗೆ ಇತ್ತು. ಕೆಲವು ಕಾರಣಾಂತರಗಳಿಂದ ಕೊಡಲು ಆಗಲಿಲ್ಲ. ನಮಗೆ ಸಿಗುವ ಭರವಸೆ ಇದೆ. ಬೊಮ್ಮಾಯಿ ಸಾಹೇಬ್ರು ಮೇಲೆ ಭರವಸೆ ಇದೆ. ಎಲ್ಲಾ ಅಡೆತಡೆ ನಿವಾರಣೆ ಮಾಡಿ ಕೊಡ್ತಾರೆ. 2-ಎ ಮೀಸಲಾತಿಯನ್ನ ಕೊಡ್ತಾರೆಂಬ ಭರವಸೆ ಇದೆ. ಬೇರೆ ಸಮುದಾಯಕ್ಕೆ ತೊಂದರೆಯಾಗದಂತೆ ನೀಡಬೇಕು ಎಂದರು. 


ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಉತ್ಸವಕ್ಕೆ ಬೆಂಬಲಿಗರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಉತ್ಸವ ಮಾಡ್ತಾರೆ. ಆ ಕಮಿಟಿಯಲ್ಲಿ ನಾನು ಇದ್ದೇನೆ. ಇವತ್ತು ಸಭೆ ಇದೆ, ಭಾಗವಹಿಸುತ್ತೇನೆ. 75 ವರ್ಷ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದಾರೆ. ಮನುಷ್ಯನ ಜೀವನದಲ್ಲಿ ಅದೊಂದು ಸಾರ್ಥಕತೆ. ಅವರು ಉತ್ಸವ ಮಾಡಿ ಎಂದು ಹೇಳಿಲ್ಲ. ನಾವೆಲ್ಲ ಸೇರಿ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : Today Vegetable Price: ಇಂದು ತರಕಾರಿ ಹಾಗೂ ಹಣ್ಣಿನ ಬೆಲೆ ಹೀಗಿದೆ ನೋಡಿ..


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ