Hijab Controversy: ಅಲ್ಪಸಂಖ್ಯಾತ ಸಮುದಾಯದ ಪರ ಕೈ ಬ್ಯಾಟಿಂಗ್!
ಸಭೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಮ್ಮ ಪಕ್ಷ ಮೊದಲಿನಿಂದಲೂ ಅಲ್ಪಸಂಖ್ಯಾತ ಪರವಾಗಿಯೇ ಇದೆ. ಸಂವಿಧಾನಕ್ಕೆ, ಅಲ್ಪಸಂಖ್ಯಾತರಿಗೆ ಗೌರವ ನೀಡುತ್ತಾ ಬಂದಿದ್ದೇವೆ. ಜಾತ್ಯತೀತದ ಬಗ್ಗೆ ಸಂವಿಧಾನದ ಆಶಯಗಳನ್ನು ಪಾಲಿಸುವುದು ಪಕ್ಷದ ಕರ್ತವ್ಯ.
ಬೆಂಗಳೂರು: ಕಾಂಗ್ರೆಸ್ ಕೊನೆಗೂ ಹಿಜಾಬ್ ವಿಚಾರದಲ್ಲಿ ತನ್ನ ರಾಜಕೀಯ ನಿಲುವನ್ನು ಪ್ರಕಟಿಸಿದ್ದು, ಅಲ್ಪಸಂಖ್ಯಾತ ಸಮುದಾಯದ ಪರ ನಿಲ್ಲಲು ನಿರ್ಧರಿಸಿದೆ.
ಹಿಜಾಬ್ ಪ್ರಕರಣ (Hijab Controversy) ಪ್ರಾರಂಭವಾಗಿ ಕೆಲವು ದಿನಗಳೇ ಕಳೆದಿದ್ದರೂ ಕಾಂಗ್ರೆಸ್ ತನ್ನ ರಾಜಕೀಯ ನಿಲುವನ್ನು ತೆಗೆದುಕೊಂಡಿರಲಿಲ್ಲ. ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರ ಜತೆ ಸಭೆ ನಡೆಸಿ, ಎಲ್ಲಾ ಜಾತಿ ಧರ್ಮ ಆಚರಣೆಗಳಿಗೆ ಸಂವಿಧಾನ ಅವಕಾಶ ನೀಡಿದೆ. ಹೀಗಾಗಿ ಕಾಂಗ್ರೆಸ್ ಆಚರಣೆ ಈ ಹಿಂದೆ ಹೇಗೆ ನೆಡೆಯುತ್ತಿತ್ತು ಅದೇ ರೀತಿ ನಡೆಯಬೇಕು ಎಂಬ ವಿಚಾರವನ್ನು ಅಳವಡಿಸಿಕೊಂಡಿದೆ.
ಸಭೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ನಮ್ಮ ಪಕ್ಷ ಮೊದಲಿನಿಂದಲೂ ಅಲ್ಪಸಂಖ್ಯಾತ ಪರವಾಗಿಯೇ ಇದೆ. ಸಂವಿಧಾನಕ್ಕೆ, ಅಲ್ಪಸಂಖ್ಯಾತರಿಗೆ ಗೌರವ ನೀಡುತ್ತಾ ಬಂದಿದ್ದೇವೆ. ಜಾತ್ಯತೀತದ ಬಗ್ಗೆ ಸಂವಿಧಾನದ ಆಶಯಗಳನ್ನು ಪಾಲಿಸುವುದು ಪಕ್ಷದ ಕರ್ತವ್ಯ. ಪಕ್ಷದ ಸ್ಟ್ಯಾಂಡ್ ಕ್ಲಿಯರ್ ಇರಲಿಲ್ಲ, ಪಕ್ಷದ ಹಿರಿಯರ ಜೊತೆ ಚರ್ಚೆ ಮಾಡಿ ಒಂದು ನಿಲುವು ತೆಗೆದುಕೊಂಡಿದ್ದೇವೆ ಎಂದರು.
ಇದನ್ನೂ ಓದಿ- ಹಿಜಾಬ್ ವಿವಾದ ಕೆಲವರಿಗೆ ತಿರುಗುಬಾಣ ಆಗುವುದು ಖಚಿತ: ಹೆಚ್.ಡಿ.ಕುಮಾರಸ್ವಾಮಿ
ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಮೊದಲಿಂದಲೂ ಎಲ್ಲಾ ಧರ್ಮಗಳಲ್ಲಿ ಅವರದ್ದೆ ಆದ ಪಾಲನೆ ಇದೆ. ಯಾವ ರೀತಿ ವಸ್ತ್ರ ಧರಿಸಬೇಕು, ಏನು ಮಾಡಬೇಕು ಎಂದು ಸಂವಿಧಾನದಲ್ಲಿದೆ. ಇದಕ್ಕಾಗಿ ಸಂವಿಧಾನ ಹಕ್ಕನ್ನು ಕೊಟ್ಟಿದೆ.
ಫೆಬ್ರವರಿ 05ರ ಮೊದಲು ಎಲ್ಲ ಸರಿಯಿತ್ತು, ಇದಾದ ಬಳಿಕ ಸರ್ಕಾರದ ಬದಲಾವಣೆ ಮಾಡಿದೆ. ರಾಜ್ಯದಲ್ಲಿ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನೊಂದ ಸಮಾಜಕ್ಕೆ ಧ್ವನಿ ಆಗಬೇಕು, ಇದರ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುತ್ತದೆ. ಇದು ಕಾಂಗ್ರೆಸ್ ಪಕ್ಷದ ಸ್ಪಷ್ಟ ನಿಲುವು ಎಂದು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಹಿರಿಯರ ಸಭೆಯಲ್ಲಿ ಪಕ್ಷದ ನಿಲುವನ್ನು ತೀರ್ಮಾನಿಸಿದ್ದು, ಸದ್ಯ ಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಬಾಲಿಷ ಹೇಳಿಕೆಗಳನ್ನು ಯಾವುದೇ ನಾಯಕರು ಹೇಳಬಾರದು. ಪಕ್ಷ ಕೆಲ ನಾಯಕರನ್ನು ಹಿಜಾಬ್ ವಿಚಾರಕ್ಕೆ ಮಾತನಾಡಲು ಸೂಚಿಸುತ್ತದೆ. ಅವರೇ ಮಾತನಾಡಬೇಕು ಎಂಬ ಸೂಚನೆಯನ್ನು ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.