Karnataka Hijab Controversy: ಕರ್ನಾಟಕದ (Karnataka) ಕಾಂಗ್ರೆಸ್ ನಾಯಕರೊಬ್ಬರು ಅತ್ಯಂತ ಆಕ್ಷೇಪಾರ್ಹ ಹೇಳಿಕೆಯೊಂದನ್ನು ನೀಡಿ ಪೇಚಿಗೆ ಸಿಲುಕಿದ್ದಾರೆ. ಹಿಜಾಬ್‌ಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್, ಮಹಿಳೆಯರು ಹಿಜಾಬ್ (Hijab) ಧರಿಸದಿದ್ದರೆ ಅತ್ಯಾಚಾರಕ್ಕೊಳಗಾಗುತ್ತಾರೆ ಎಂದಿದ್ದಾರೆ. ಜಮೀರ್ ಅಹಮದ್ ಅವರು, ಇಸ್ಲಾಂನಲ್ಲಿ ಹಿಜಾಬ್ (Hijab Controversy) ಎಂದರೆ ಪರದೆ ಎಂದಾಗುತ್ತದೆ ಎಂದಿದ್ದಾರೆ.
ಭಾರತದಲ್ಲಿ ಅತ್ಯಧಿಕ ಅತ್ಯಾಚಾರ ದರವಿದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ. ಯಾವುದೇ ಘೋಷಾ ಅಥವಾ ಹಿಜಾಬ್ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ. ಘೋಷಾ ಅಥವಾ ಹಿಜಾಬ್ ಎಂದರೆ ಹುಡುಗಿಯರ ಸೌಂದರ್ಯವನ್ನು ಮರೆಮಾಚುವುದು ಎಂದರ್ಥ. ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯವಲ್ಲ ಎಂಬ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಹೇಳಿಕೆಗೆ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.
#WATCH | Hijab means 'Parda' in Islam...to hide the beauty of women...women get raped when they don't wear Hijab: Congress leader Zameer Ahmed on #HijabRow in Hubli, Karnataka pic.twitter.com/8Ole8wjLQF
— ANI (@ANI) February 13, 2022
ಶನಿವಾರ ವಿವಾದಕ್ಕೆ ಸಂಬಂಧಿಸದಂತೆ ಮಾತನಾಡಿದ್ದ ಆರಿಫ್ ಮೊಹಮ್ಮದ್ ಖಾನ್ ಅವರು, ಸಿಖ್ ಧರ್ಮದಲ್ಲಿ ಪೇಟ ಇರುವಂತೆ, ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯವಲ್ಲಿ. ಮುಸ್ಲಿಂ ಹೆಣ್ಣುಮಕ್ಕಳು ಮುಂದೆ ಹೋಗದಂತೆ ಮಾಡುವ ಷಡ್ಯಂತ್ರ ಇದಾಗಿದೆ ಇದಾಗಿದೆ ಎಂದಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಪಾಲರು ತರಗತಿಗಳಿಗೆ ಹಿಂತಿರುಗಿ ಅಧ್ಯಯನ ಮಾಡಲು ವಿದ್ಯಾರ್ಥಿಗಳನ್ನು ಕೇಳಿಕೊಂಡಿದ್ದರು.
ಸುದ್ದಿ ಸಂಸ್ಥೆ ANI ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಕೇರಳ ರಾಜ್ಯಪಾಲರು (Kerala Governor), 'ಹಿಜಾಬ್ ಇಸ್ಲಾಂನ ಭಾಗವಲ್ಲ. ಕುರಾನ್‌ನಲ್ಲಿ 7 ಸ್ಥಳಗಳಲ್ಲಿ ಹಿಜಾಬ್ ಅನ್ನು ಉಲ್ಲೇಖಿಸಲಾಗಿದೆ. ಆದರೆ ಮಹಿಳೆಯರ ಡ್ರೆಸ್ ಕೋಡ್ ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಮುಸ್ಲಿಂ ಹೆಣ್ಣುಮಕ್ಕಳ ಪ್ರಗತಿಯನ್ನು ತಡೆಯುವ ಷಡ್ಯಂತ್ರ. ಹಿಜಾಬ್ ವಿವಾದವು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣವನ್ನು ನಿಲ್ಲಿಸುವ ಪಿತೂರಿಯಾಗಿದೆ. ಮುಸ್ಲಿಂ ಹೆಣ್ಣುಮಕ್ಕಳು ಈಗ ಓದಿ ಏನನ್ನು ಬೇಕಾದರೂ ಸಾಧಿಸುತ್ತಿದ್ದಾರೆ. ತರಗತಿಗೆ ಹಿಂತಿರುಗಿ ಅಧ್ಯಯನ ಮಾಡಲು ನಾನು ವಿದ್ಯಾರ್ಥಿಗಳನ್ನು ಕೋರುತ್ತೇನೆ' ಎಂದಿದ್ದರು.
ಇದನ್ನೂ ಓದಿ-Facebook ದಾರಿ ತುಳಿದ WhatsApp, ಇನ್ಮುಂದೆ DP ಜೊತೆಗೆ ಕವರ್ ಫೋಟೋ ಕೂಡ ಪ್ರದರ್ಶಿಸಬಹುದು
ಕರ್ನಾಟಕದಲ್ಲಿ ಹಿಜಾಬ್ ವಿವಾದದ ನಡುವೆ, ದಕ್ಷಿಣ ಕನ್ನಡ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ವಿದ್ಯಾರ್ಥಿಗಳು ಶುಕ್ರವಾರ ಸರ್ಕಾರಿ ಶಾಲೆಗಳಲ್ಲಿ 'ನಮಾಜ್' ಮಾಡುತ್ತಿರುವಂತೆ ಇರುವ ಎರಡು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ನಮಾಝ್ ಅರ್ಪಿಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮತ್ತೊಂದು ವಿವಾದ ಭುಗಿಲೆದ್ದಿದೆ. ಫೆಬ್ರವರಿ 4 ರಂದು ಈ ಘಟನೆ ನಡೆದಿದ್ದು, ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ದೂರಿನ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಶುಕ್ರವಾರ ಶಾಲೆಗೆ ಆಗಮಿಸಿದ್ದು, ತರಗತಿಯಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ವಿದ್ಯಾರ್ಥಿಗಳಿಗೆ ಆದೇಶ ನೀಡಲಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಇದನ್ನೂ ಓದಿ-'ನಾನು ನನ್ನ ಸಹೋದರನಿಗಾಗಿ ಪ್ರಾಣ ಕೂಡ ಕೊಡಬಲ್ಲೆ' Priyanka Vadra ಹೀಗೆ ಹೇಳಿದ್ದಾದರೂ ಏಕೆ?
ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಮಾನತೆ ಮತ್ತು ಭ್ರಾತೃತ್ವವನ್ನು ಉತ್ತೇಜಿಸಲು ಮತ್ತು ರಾಷ್ಟ್ರೀಯ ಸಮಗ್ರತೆಗಾಗಿ ನೋಂದಾಯಿತ ಶಿಕ್ಷಣ ಸಂಸ್ಥೆಗಳಲ್ಲಿ ನೌಕರರು ಮತ್ತು ವಿದ್ಯಾರ್ಥಿಗಳಿಗೆ ಏಕರೂಪದ ಡ್ರೆಸ್ ಕೋಡ್ (Uniform Dress Code) ಅನ್ನು ಜಾರಿಗೆ ತರುವಂತೆ ಕೋರಿ ಶನಿವಾರ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-ಆನ್ಲೈನ್ ಡೇಟಿಂಗ್ ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲದಿದ್ರೆ ಭಾರಿ ಹಾನಿ ಎದುರಿಸಬೇಕಾಗಬಹುದು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.