Karnataka Hijab Controversy - ಕರ್ನಾಟಕದಲ್ಲಿ (Karnataka) ಹಿಜಾಬ್ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಕುರಿತು ಹೈಕೋರ್ಟ್ (Karnataka High Court) ಸೋಮವಾರ ವಿಚಾರಣೆ ನಡೆಸಿದೆ. ಸರ್ಕಾರದ (Government Of Karnataka) ಆದೇಶವನ್ನು ಪ್ರಶ್ನಿಸಿರುವ ಬಾಲಕಿಯರು ಶಾಲೆಯು ಸೂಚಿಸಿದ ಉಡುಗೆಯ ಬಣ್ಣದಲ್ಲಿ ಇಸ್ಲಾಮಿಕ್ ಶಿರಸ್ತ್ರಾಣವನ್ನು (Hijab) ಧರಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಬಟ್ಟೆಗಳನ್ನು ಬಳಸಬಾರದು ಎಂಬ ಸರ್ಕಾರದ ಆದೇಶಕ್ಕೆ ಈ ಹುಡುಗಿಯರು ಸವಾಲು ಹಾಕಿದ್ದಾರೆ ಎಂದೇ ಹೇಳಬಹುದು.
ಬಾಲಕಿಯರು ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆಎಂ ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಂ ದೀಕ್ಷಿತ್ ಅವರ ಮುಂದೆ ತಮ್ಮ ಈ ಅರ್ಜಿ ಸಲ್ಲಿಸಿದ್ದಾರೆ. ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಪರ ವಾದ ಮಂಡಿಸಿದ ನ್ಯಾಯವಾದಿ ದೇವದತ್ ಕಾಮತ್, ‘ಸರ್ಕಾರದ ಆದೇಶವನ್ನು ತಾನು ಪ್ರಶ್ನಿಸುವುದು ಮಾತ್ರವಲ್ಲದೆ, ಸಮವಸ್ತ್ರದ ಬಣ್ಣದ ಸ್ಕಾರ್ಫ್ ಧರಿಸಲು ಅವಕಾಶ ನೀಡುವ ಸಕಾರಾತ್ಮಕ ಮ್ಯಾಂಡೆಟ್ ಅನ್ನು ನಾನು ಕೋರುತ್ತೇನೆ' ಎಂದಿದ್ದಾರೆ.
ಇದನ್ನೂ ಓದಿ-Zameer Ahmed : ಕೆಪಿಸಿಸಿಯಿಂದ ಶಾಸಕ ಜಮೀರ್ ಅಹಮದ್ ಗೆ ಬಿಗ್ ಶಾಕ್!
ಕೇಂದ್ರೀಯ ಶಾಲೆಗಳು ಮುಸ್ಲಿಂ ಹೆಣ್ಣುಮಕ್ಕಳಿಗೆ ಶಾಲಾ ಉಡುಗೆಯ ಬಣ್ಣವನ್ನು ಧರಿಸಲು ಅವಕಾಶ ನೀಡುತ್ತವೆ ಮತ್ತು ಅದೇ ರೀತಿ ಇಲ್ಲಿಯೂ ಮಾಡಬಹುದು ಎಂದು ಕಾಮತ್ ಹೇಳಿದ್ದಾರೆ. ಅವರ ಪ್ರಕಾರ, ಸ್ಕಾರ್ಫ್ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಮತ್ತು ಅದರ ಬಳಕೆಯನ್ನು ನಿಷೇಧಿಸುವುದು ಭಾರತೀಯ ಸಂವಿಧಾನದ 25 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದ್ದಾರೆ.
ಇದನ್ನೂ ಓದಿ-Hijab Controversy: 'ದೇಶದಲ್ಲಿ ಹಿಜಾಬ್ ಪದ್ಧತಿ ಇಲ್ಲದಿರುವುದರಿಂದ ಅತ್ಯಾಚಾರ ದರ ಹೆಚ್ಚಾಗಿದೆ'
25 ನೇ ವಿಧಿಯು (Article 25 Of Constitution) ಎಲ್ಲಾ ವ್ಯಕ್ತಿಗಳಿಗೆ ಆತ್ಮಸಾಕ್ಷಿಯ ಸ್ವಾತಂತ್ರ್ಯಕ್ಕೆ ಸಮಾನವಾಗಿಮತ್ತು ಸ್ವತತ್ರ ರೂಪದಲ್ಲಿ ಧರ್ಮದ ಆಚರಣೆ, ಅಭ್ಯಾಸ ಹಾಗೂ ಪ್ರಚಾರದ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳುತ್ತದೆ. ಇದು ಧಾರ್ಮಿಕ ನಂಬಿಕೆ (ಸಿದ್ಧಾಂತ) ಮಾತ್ರವಲ್ಲದೆ ಧಾರ್ಮಿಕ ಆಚರಣೆಗಳನ್ನೂ (ಅನುಷ್ಠಾನ) ಒಳಗೊಳ್ಳುತ್ತದೆ. ಈ ಹಕ್ಕುಗಳು (Constitutional Right) ಎಲ್ಲಾ ವ್ಯಕ್ತಿಗಳಿಗೆ-ನಾಗರಿಕರಿಗೆ ಮತ್ತು ನಾಗರಿಕರಲ್ಲದವರಿಗೆ ಲಭ್ಯವಿದೆ ಎಂದು ಹೇಳುತ್ತದೆ.
ಇದನ್ನೂ ಓದಿ-Congress : ಜಮೀರ್ ಹೇಳಿಕೆಗೆ ಕೈ ಪಾಳೆಯ ಗರಂ; ಸೆಟ್ ಬ್ಯಾಕ್ ಆಗುತ್ತಾ ಹಿಜಾಬ್-ರೇಪ್ ಹೇಳಿಕೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.