RSS ಮೆಚ್ಚಿಸಲು ಬಿಜೆಪಿ ಸರ್ಕಾರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ: ಕಾಂಗ್ರೆಸ್
ಜಾತ್ಯತೀತ ತತ್ವ ಮರೆಮಾಚುವ ಹಾಗೂ ಕಂದಾಚಾರ ಪುಷ್ಠಿಕರಿಸುವ RSS ಪ್ರಣೀತ ಪಠ್ಯದಿಂದ ಮುಂದಿನ ತಲೆಮಾರು ವೈಚಾರಿಕತೆಯನ್ನು ಕಳೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಬೆಂಗಳೂರು: RSS ಎಂಬ ವಿಧ್ವಂಸಕ ಸಂಘಟನೆಯನ್ನು ಮೆಚ್ಚಿಸಲು ಮಕ್ಕಳ ಭವಿಷ್ಯದ ಜೊತೆ ಬಿಜೆಪಿ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಗುರುವಾರ ಸರಣಿ ಟ್ವೀಟ್ ಮಾಡಿದ್ದು, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದೆ.
ಬಿಜೆಪಿ ಸರ್ಕಾರ RSS ಎಂಬ ವಿಧ್ವಂಸಕ ಸಂಘಟನೆಯನ್ನು ಮೆಚ್ಚಿಸಲು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವುದರ ಜೊತೆಗೆ ಖಜಾನೆಗೆ ಹೊರೆಯನ್ನೂ ಹೊರಿಸುತ್ತಿದೆ. ಸರ್ಕಾರದ ಹಠಕ್ಕೆ ನಷ್ಟವಾಗುತ್ತಿರುವ 2.5 ಕೋಟಿ ರೂ.ಗೆ ಹೊಣೆ ಯಾರು? ಜನರ ಹಣವನ್ನು ಪೋಲು ಮಾಡಿದರೂ ಸರಿಯೇ, ತಮ್ಮ ಸಿದ್ದಾಂತ ತೂರಿಸುವ ಹಠವೇಕೆ?’ ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ: ಬಿಜೆಪಿ ಟೀಕೆ
‘ಪರಿಷ್ಕರಣೆಯ ಪಠ್ಯವನ್ನು ಪ್ರಶ್ನಿಸಿದಾಗ ಇನ್ನೂ ಪಠ್ಯ ಪುಸ್ತಕ ಪ್ರಿಂಟ್ ಆಗಿಲ್ಲ, ಅಂತಿಮ ಕಾಪಿ ಬಂದಾಗ ನೋಡಿ ಎನ್ನುತ್ತಾರೆ. ಪಠ್ಯಪುಸ್ತಕ ವಿತರಣೆಯ ವಿಳಂಬ ಪ್ರಶ್ನಿಸಿದಾಗ ಪ್ರಿಂಟ್ ಆಗುತ್ತಿದೆ ಎನ್ನುತ್ತಾರೆ. ವರದಿಗಳು ಪುಸ್ತಕ ಪ್ರಿಂಟ್‌ಗೆ ಟೆಂಡರ್ ಆಗಿಲ್ಲ ಎನ್ನುತ್ತವೆ. ಬಿಜೆಪಿಯ ಸುಳ್ಳರ ಸಾಮ್ರಾಜ್ಯ ಸತ್ಯವನ್ನೇ ಒದ್ದೋಡಿಸುತ್ತಿದೆ’ ಎಂದು ಕಾಂಗ್ರೆಸ್ ಕುಟುಕಿದೆ.
ಇಂಗ್ಲಿಷ್ ಓದಲು ಕಷ್ಟವಾಗುತ್ತೆ ಎಂದು 7 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ
‘ಕಳ್ಳನರಿಯೊಂದು ಕಬ್ಬಿನಗದ್ದೆಗೆ ಹೊಕ್ಕಂತಾಗಿದೆ’
‘ಬಿಜೆಪಿಗೆ ದಲಿತರ, ತಳ ಸಮುದಾಯದ, ಬಡವರ ಮಕ್ಕಳು ಶಿಕ್ಷಿತರಾಗುವುದು ಸುತಾರಾಂ ಇಷ್ಟವಿಲ್ಲ. ಹಿಜಾಬ್ ಇರಬಾರದು ಸಮವಸ್ತ್ರವೇ ಮುಖ್ಯ ಎಂದವರಿಗೆ ಸಮವಸ್ತ್ರ ಕೊಡಲಾಗದಿರುವುದು ನಾಚಿಕೆಗೇಡಿನ ವಿಷಯವಲ್ಲವೇ? ಮೊಟ್ಟೆ, ಸೈಕಲ್, ಪುಸ್ತಕ ನೀಡಲು ಯೋಚಿಸದ ಬಿ.ಸಿ.ನಾಗೇಶ್ ಶಿಕ್ಷಣ ಸಚಿವರಾಗಿರುವುದು. ಕಳ್ಳನರಿಯೊಂದು ಕಬ್ಬಿನಗದ್ದೆಗೆ ಹೊಕ್ಕಂತಾಗಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.