ಕೇಂದ್ರ & ರಾಜ್ಯ ಸರ್ಕಾರಗಳಲ್ಲಿ ಖಾಲಿಯಿರುವ 65 ಲಕ್ಷ ಹುದ್ದೆ ತುಂಬಿ: ಕಾಂಗ್ರೆಸ್
ಸೈನಿಕರನ್ನು ಗುತ್ತಿಗೆ ಅವಧಿಗೆ ನೇಮಕ ಮಾಡಿಕೊಳ್ಳುವುದು ದೇಶದ ಆತ್ಮಹತ್ಯಾ ಹಾದಿಯೇ ಸರಿ. ‘ಅಗ್ನಿಪಥ’ ಯೋಜನೆ ಈ ದೇಶದ ಸರ್ವನಾಶದ ಯೋಜನೆ ಎಂದು ಟ್ವೀಟ್ ಮಾಡಿದೆ.
ಬೆಂಗಳೂರು: 2014ರ ಬಿಜೆಪಿ ಪ್ರಣಾಳಿಕೆಯಲ್ಲಿ 2 ಕೋಟಿ ಉದ್ಯೋಗ ಭರವಸೆ ನೀಡಿ ದೇಶದ ಯುವಕರ ಹಾದಿ ತಪ್ಪಿಸಿದ ಮೋದಿ ಅವರೇ, ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮಂಜೂರಾಗಿ ಖಾಲಿಯಿರುವ 65 ಲಕ್ಷ ಹುದ್ದೆ ತುಂಬಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
‘ಸಾರ್ವಜನಿಕ ಉದ್ದಿಮೆಗಳ 30 ಲಕ್ಷ ಹುದ್ದೆ, ಸರ್ಕಾರದ ಅನುದಾನದಲ್ಲಿ ಇರುವ ಖಾಸಗಿ ಕಂಪೆನಿಗಳ 50 ಲಕ್ಷ ಹುದ್ದೆ, ಅರೆ ಸರ್ಕಾರಿಯ 20 ಲಕ್ಷ ಹುದ್ದೆ ತುಂಬಿ ಹಸಿದ ಹೊಟ್ಟೆಗಳ ತುಂಬುವ ಕೆಲಸ ಮಾಡಿ. ದೇಶದಲ್ಲಿ ಅಗ್ನಿವೀರ್ ಹುದ್ದೆ ಪೂರ್ಣ ಪ್ರಮಾಣದಲ್ಲಿ ಪೂರ್ಣ ಅವಧಿಗೆ ತುಂಬುವ ಕೆಲಸ ಮಾಡಿ. ಭಾರತೀಯ ಯುವಕರಿಗೆ ಕೆಲಸ ನೀಡಿ.. ಸಂಘದ ಸ್ವಯಂ ಸೇವಕರ ಮಾಡುವ ಹುನ್ನಾರ ನಿಲ್ಲಿಸಿ!’ ಎಂದು ಕಾಂಗ್ರೆಸ್ ಟೀಕಿಸಿದೆ.
ರಾಜಕೀಯ ದ್ವೇಷದಿಂದ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಡಿಕೆಶಿ
‘ಬಿಜೆಪಿಯವರೇ ಸೈನಿಕರಿಗೆ ನೀಡುವ ಸಂಬಳ, ಭತ್ಯೆ, ಪೆನ್ಶನ್ ಹಣವನ್ನು ಉಳಿಸಲು ದೇಶದ ರಕ್ಷಣೆಯ ವಿಚಾರದಲ್ಲಿ ರಾಜಿ ಮಾಡಿಕೊಂಡು ಸೇನೆಯ ವಿಚಾರದಲ್ಲಿ ತಪ್ಪು ಹೆಜ್ಜೆ ಇಟ್ಟಿದ್ದೀರಿ. ಸೈನಿಕರನ್ನು ಗುತ್ತಿಗೆ ಅವಧಿಗೆ ನೇಮಕ ಮಾಡಿಕೊಳ್ಳುವುದು ದೇಶದ ಆತ್ಮಹತ್ಯಾ ಹಾದಿಯೇ ಸರಿ. ‘ಅಗ್ನಿಪಥ’ ಯೋಜನೆ ಈ ದೇಶದ ಸರ್ವನಾಶದ ಯೋಜನೆ’ ಎಂದು ಟ್ವೀಟ್ ಮಾಡಿದೆ.
ಬೆಂಗಳೂರಿನಲ್ಲೊಂದು ಹೃದಯಸ್ಪರ್ಶಿ ಘಟನೆ: ತಾಯಿ-ಮಗಳನ್ನು ಒಂದು ಮಾಡಿದ ಪೊಲೀಸರು
‘ಪ್ರಧಾನಿ ಶಿಲಾನ್ಯಾಸ ಮಾಡಿದ 33 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ಎಂಬುದು ಮತ್ತೊಂದು ಜುಮ್ಲಾ ಅಷ್ಟೇ! ಇದೊಂದು ಚುನಾವಣಾ ಪ್ರಚಾರದ ಪೂರ್ವಸಿದ್ಧತಾ ಭೇಟಿಯಾಗಿದ್ದು, ಮೋದಿ ಭೇಟಿಯಿಂದ ರಾಜ್ಯಕ್ಕೆ 24 ಕೋಟಿ ರೂ. ಖರ್ಚಾಗಿದ್ದು ಬಿಟ್ಟರೆ ನ್ಯಾಯಾಪೈಸೆ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಬೇಕಾದ ಯಾವ ಕೆಲಸಗಳ ಪ್ರಗತಿಯೂ ಕಂಡುಬಂದಿಲ್ಲ’ವೆಂದು ಕಾಂಗ್ರೆಸ್ ಟೀಕಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.