ಧಾರವಾಡ: ಪ್ರವಿಡೆಂಟ್ ಫಂಡ್ ಇಲಾಖೆ ಹುಬ್ಬಳ್ಳಿಯವರು ತನ್ನ ನಿವೃತ್ತಿ ನಂತರದ ಪಿಂಚಣಿ ನಿಗದಿಪಡಿಸುವಾಗ ತಪ್ಪು ಲೆಕ್ಕ ಹಾಕಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹುಬ್ಬಳ್ಳಿಯ ಉಣಕಲ್‍ನ ಸಾಯಿನಗರ ನಿವಾಸಿ ಎಸ್. ಸಿದ್ದಪ್ಪ ಎಂಬುವವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Narendra Modi : ಕೇದಾರನಾಥ ದರ್ಶನಕ್ಕೆ ವಿಶೇಷ ಉಡುಪು ಧರಿಸಿದ ಪ್ರಧಾನಿ ಮೋದಿ!


ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಎ.ಬೋಳಶೆಟ್ಟಿ, ಪಿ.ಸಿ.ಹಿರೇಮಠ ಅವರು ದೂರಿಗೆ ಸಂಬಂಧಿಸಿದ ಪಿಂಚಣಿ ವ್ಯಾಜ್ಯವನ್ನು ಪಿ.ಎಫ್ ಇಲಾಖೆಯಿಂದ ಪ್ರತಿ ತಿಂಗಳು ನಡೆಸುವ ಪಿಂಚಣಿ ಲೋಕ್ ಅದಾಲತ್‍ನಲ್ಲಿ ದೂರುದಾರ ಭಾಗವಹಿಸಿ ಪರಿಹಾರ ಕಂಡುಕೊಳ್ಳದೇ ಅನಗತ್ಯವಾಗಿ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದು ತಪ್ಪು ಅಂತಾ ಹೇಳಿ ಈ ದೂರನ್ನು ವಜಾಗೊಳಿಸಬೇಕು ಎಂದು ಪಿ.ಎಫ್ ಇಲಾಖೆಯವರು ವಾದಿಸಿದ್ದರು.ಡ್ರಿಪ್‍ನಲ್ಲಿ ರಕ್ತದ ಬದಲು ಮೊಸಂಬಿ ಜ್ಯೂಸ್, ಡೆಂಗ್ಯೂ ರೋಗಿ ಸಾವು..!


ಅವರ ವಾದವನ್ನು ತಳ್ಳಿಹಾಕಿದ ಆಯೋಗ, ದೂರುದಾರನ ಪಿಂಚಣಿ ನಿಗದಿಪಡಿಸುವಲ್ಲಿ ಪಿ.ಎಫ್. ಇಲಾಖೆ ತಪ್ಪೆಸಗಿ ಸೇವಾ ನ್ಯೂನ್ಯತೆ ಎಸಗಿದೆ ಅಂತಾ ಅಭಿಪ್ರಾಯಪಟ್ಟು ದೂರುದಾರನಿಗೆ ಅವನ ಪಿಂಚಣಿ ನಿಗದಿಪಡಿಸಿದ ದಿನಾಂಕದಿಂದ ಆಯೋಗ ಆದೇಶ ಹೊರಡಿಸಿದ ದಿನಾಂಕದವರೆಗೆ ಒಟ್ಟು ರೂ.64,938/- ನೀಡುವಂತೆ ಆದೇಶಿಸಿದೆ. ಜೊತೆಗೆ ಮಾನಸಿಕ ತೊಂದರೆಗಾಗಿ ರೂ.20 ಸಾವಿರ ಪರಿಹಾರ ಹಾಗೂ ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚ ಅಂತ ಒಂದು ತಿಂಗಳ ಒಳಗಾಗಿ ನೀಡುವಂತೆ ತಪ್ಪಿದ್ದಲ್ಲಿ ಶೇ.10 ರಂತೆ ಬಡ್ಡಿ ಸಮೇತ ನೀಡಲು ಆಯೋಗ ಆದೇಶಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.