Contractor Santosh Patil : ಗುತ್ತಿಗೆದಾರ ಸಂತೋಷ ಪಾಟೀಲ್ ಪ್ರಕರಣ : ರಾಜ್ಯಪಾಲರ ಮೊರೆ ಹೋದ ಕುಟುಂಬಸ್ಥರು
ಈ ಬಗ್ಗೆ ಮೃತ ಸಂತೋಷ ಪತ್ನಿ ರೇಣುಕಾ ಪಾಟೀಲ್ ಅವರು ರಾಜ್ಯಪಾಲರಿಗೆ ಪತ್ರದ ಮೂಲಕ ಆತ್ಮಹತ್ಯೆ ಪ್ರಕರಣದ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ, ಈ ಪ್ರಕರಣದ ತನಿಖೆ ಪ್ರಮುಖ ಆರೋಪಿ ಈಶ್ವರಪ್ಪ ನಿರ್ದೇಶನದಂತೆ ನಡೆಯುತ್ತಿದೆಯಂತೆ.
ಬೆಳಗಾವಿ : ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನ ಪಾರದರ್ಶಕ ತನಿಖೆಗೆ ಒತ್ತಾಯಿಸಿ ಅವರ ಕುಟುಂಬಸ್ಥರು ರಾಜ್ಯಪಾಲರ ಮೊರೆ ಹೋಗಿದ್ದಾರೆ.
ಈ ಬಗ್ಗೆ ಮೃತ ಸಂತೋಷ ಪತ್ನಿ ರೇಣುಕಾ ಪಾಟೀಲ್ ಅವರು ರಾಜ್ಯಪಾಲರಿಗೆ ಪತ್ರದ ಮೂಲಕ ಆತ್ಮಹತ್ಯೆ ಪ್ರಕರಣದ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ, ಈ ಪ್ರಕರಣದ ತನಿಖೆ ಪ್ರಮುಖ ಆರೋಪಿ ಈಶ್ವರಪ್ಪ ನಿರ್ದೇಶನದಂತೆ ನಡೆಯುತ್ತಿದೆಯಂತೆ.
ಇದನ್ನೂ ಓದಿ : Vegetable Price: ಈರುಳ್ಳಿ ಇಳಿಕೆ-ಟೊಮೆಟೋ ಏರಿಕೆ: ಮತ್ತೆ ಏರಿಳಿತವಾಗುತ್ತಿದೆ ತರಕಾರಿ ದರ!
ಕೇವಲ 15ದಿನದಲ್ಲಿ ಕೇಸ್ ನಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆಂದು ಕೆಎಸ್ ಈಶ್ವರಪ್ಪ ಹೇಳಿಕೆ. ಈಶ್ವರಪ್ಪ ಮಾಜಿ ಉಪಮುಖ್ಯಮಂತ್ರಿ, ಮಾಜಿ ಸಚಿವ,ಬಿಜೆಪಿ ಮಾಜಿ ರಾಜಾಧ್ಯಕ್ಷ, ಪ್ರಭಾವಿ ಶಾಸಕರಾಗಿದ್ದಾರೆ. ತಮ್ಮ ಹಣಬಲ,ರಾಜಕೀಯ ಬಲ ಬಳಿಸಿ ಆತ್ಮಹತ್ಯೆ ಪ್ರಕರಣ ತನಿಖೆ ದಿಕ್ಕು ತಪ್ಪಿಸಿರುವ ಅನುಮಾನ ಹುಟ್ಟಿಕೊಂಡಿದೆ. ಪೊಲೀಸ್ ಅಧಿಕಾರಿಗಳು ಈ ಕೇಸ್ ನ ಪ್ರತಿ ಹಂತದ ತನಿಖೆ ಸೋರಿಕೆ ಮಾಡುತ್ತಿದ್ದಾರೆ. ಈ ಮೂಲಕ ಈಶ್ವರಪ್ಪಗೆ ಅನುಕೂಲ ಮಾಡಿ ಕೇಸ್ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ. ಇದೇ ಕಾರಣಕ್ಕಾಗಿ ಈಶ್ವರಪ್ಪ ಅವರ ಬಹಿರಂಗವಾಗಿ ಪ್ರಕರಣದಿಂದ ಹೊರಬರುವ ಮಾತು ಆಡುತ್ತಿದ್ದಾರೆ. ಮಾಜಿ ಸಚಿವರ ಮಾತು ಗಮನಿಸಿದರೆ ಅವರ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ ಅನಿಸುತ್ತಿದೆ. ಕಾನೂನಿನ ಮುಂದೆ ಎಷ್ಟೇ ಪ್ರಭಾವಿಯಾದರೂ ಒಂದೇ ಸಾಭೀತುಪಡಿಸಬೇಕಿದೆ. ಪಾರದರ್ಶಕ ತನಿಖೆ ನಡೆಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಲು ಮನವಿ ಈ ಪಾತ್ರದ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದು ರಾಜ್ಯಪಾಲರಿಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ