ಬೆಂಗಳೂರು:  Convert Petrol Scooter To Electric - ಒಂದು ವೇಳೆ ನಿಮ್ಮ ಬಳಿಯೂ ಕೂಡ ಹಳೆ ಪೆಟ್ರೋಲ್ ಚಾಲಿತ ವಾಹನವಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ. ವಿಶ್ವಾದ್ಯಂತ ಇಲೆಕ್ಟ್ರಿಕ್ ವಾಹನಗಳ ಬಂಬಾಟ್ ಮಾರಾಟದ ನಡುವೆ, ಬೆಂಗಳೂರಿನ ಕೆಲ ಸ್ಟಾರ್ಟ್ ಅಪ್ ಕಂಪನಿಗಳು ಹಳೆ ಸ್ಕೂಟರ್ ಅನ್ನು ಇಲೆಕ್ಟ್ರಿಕ್ ಸ್ಕೂಟರ್ ವನ್ನಾಗಿ ಪರಿವರ್ತಿಸಲು ವಿಶಿಷ್ಟ ಉಪಕ್ರಮವನ್ನು ಆರಂಭಿಸಿವೆ. ಇದಕ್ಕಾಗಿ ನೀವು ಹೆಚ್ಚು ಹಣ ವ್ಯಯಿಸುವ ಅವಶ್ಯಕತೆ ಕೂಡ ಇಲ್ಲ.


COMMERCIAL BREAK
SCROLL TO CONTINUE READING

ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ
ಬೆಂಗಳೂರಿನಲ್ಲಿ ರೈಡ್ ಶೇರಿಂಗ್ ಸೇವೆ ಒದಗಿಸುವ ಸ್ಟಾರ್ಟ್ ಅಪ್ ಕಂಪನಿ  Bounce ಯೋಜನೆಯೊಂದನ್ನು ಆರಂಭಿಸಿದೆ. ಈ ಕಂಪನಿ ಯಾವುದಾದರೊಂದು ಹಳೆ ಕಂಬಸ್ಚನ್ ಇಂಜಿನ್ (Petrol) ಸ್ಕೂಟರ್ ನಲ್ಲಿ ಇಲೆಕ್ಟ್ರಿಕ್ ಮೋಟರ್ (Electric Scooter) ಹಾಗೂ ಬ್ಯಾಟರಿ ಅಳವಡಿಸಿ ಅದನ್ನು ಇಲೆಕ್ಟ್ರಿಕ್ ಸ್ಕೂಟರ್ ಪರಿವರ್ತಿಸುವಲ್ಲಿ ತೊಡಗಿಸಿಕೊಂಡಿದೆ. ಇದಕ್ಕಾಗಿ ಕಂಪನಿ ಕೇವಲ ರೂ.20 ಸಾವಿರ ಜಾರ್ಚ್ ಮಾಡುತ್ತಿದೆ.


ಇದನ್ನೂ ಓದಿ-Simple One Electric Scooter: ಆಗಸ್ಟ್ 15 ರಂದು 13 ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ವಿಶೇಷತೆ ಏನೆಂದು ತಿಳಿಯಿರಿ


ಸಿಂಗಲ್ ಚಾರ್ಜ್ ನಲ್ಲಿ ಎಷ್ಟು ಮೈಲೇಜ್ ?
ಈ ಕುರಿತು ಹೇಳಿಕೆ ನೀಡಿರುವ ಬೌನ್ಸ್‌ನ ಸಹ-ಸಂಸ್ಥಾಪಕ ವಿವೇಕಾನಂದ ಹಳ್ಳೇಕರೆ, "ಇದುವರೆಗೆ ನಾವು 1000 ಕ್ಕೂ ಅಧಿಕ ಹಳೆಯ ಸ್ಕೂಟರ್‌ಗಳನ್ನು ವಿದ್ಯುತ್ ಸ್ಕೂಟರ್‌ಗಳಾಗಿ ಪರಿವರ್ತಿಸಿದ್ದೇವೆ. ಈ ಸ್ಕೂಟರ್ ಮಾಲೀಕರಿಗಾಗಿ ಕಂಪನಿಯು ಸೇವಾ ಕೇಂದ್ರಗಳನ್ನು ತೆರೆಯುತ್ತಿದೆ. ಈ ಸ್ಕೂಟರ್‌ನಲ್ಲಿ ಬರುವ ಬ್ಯಾಟರಿ ಕಿಟ್‌ನೊಂದಿಗೆ, ಒಮ್ಮೆ ಸ್ಕೂಟರ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಸ್ಕೂಟರ್ 65 ಕಿಮೀ ವರೆಗೆ ಚಲಿಸಬಲ್ಲದು. ಈ ಕಿಟ್ ಅನ್ನು ಆಟೋಮೋಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ ಪ್ರಮಾಣೀಕರಿಸಿದೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ- Piaggio One ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ತಿಳಿಯಿರಿ ಇದರ ವೈಶಿಷ್ಟ್ಯ


ಪೆಟ್ರೋಲ್ ಅಥವಾ ಎಲೆಕ್ಟ್ರಿಕ್ ಹೇಗೆ ಬೇಕಾದರೂ ಚಲಾಯಿಸಬಹುದು
ಆದರೆ ಇದೀಗ, ಬೌನ್ಸ್ ನಂತರ, ಅನೇಕ ಕಂಪನಿಗಳು ಉದಾಹರಣೆಗೆ  Etrio ಮತ್ತು Meladath ಆಟೋಕಾಂಪೊನೆಂಟ್‌ಗಳನ್ನು ಒಳಗೊಂಡ ಕಿಟ್‌ಗಳನ್ನು (Retrofit Kit) ತಂದಿವೆ. ವರದಿಯ ಪ್ರಕಾರ, ಯಾವುದೇ ಹಳೆಯ ಪೆಟ್ರೋಲ್ ಸ್ಕೂಟರ್ ಅನ್ನು ಸುಲಭವಾಗಿ ಎಲೆಕ್ಟ್ರಿಕ್/ಹೈಬ್ರಿಡ್ ಸ್ಕೂಟರ್ ಆಗಿ ಪರಿವರ್ತಿಸಬಲ್ಲ ಈಜಿ ಹೈಬ್ರಿಡ್ ಕಿಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು Meladath ಸಿದ್ಧತೆ ನಡೆಸುತ್ತಿದೆ. ಇದು ಸಂಭವಿಸಿದಲ್ಲಿ, ಸ್ಕೂಟರ್ ಅನ್ನು ಯಾವುದೇ ಮೋಡ್ ಅಂದರೆ ಪೆಟ್ರೋಲ್ ಅಥವಾ ಎಲೆಕ್ಟ್ರಿಕ್, ಅಗತ್ಯಕ್ಕೆ ತಕ್ಕಂತೆ ಓಡಿಸಬಹುದು.


ಇದನ್ನೂ ಓದಿ-OLA Electric Scooter: ಭಾರತದಲ್ಲಿ ಶೀಘ್ರವೇ ಲಾಂಚ್ ಆಗಲಿದೆ OLA ಎಲೆಕ್ಟ್ರಿಕ್ ಸ್ಕೂಟರ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.