Piaggio One ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ತಿಳಿಯಿರಿ ಇದರ ವೈಶಿಷ್ಟ್ಯ

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ, ಪಿಯಾಜಿಯೊನ  ವೆಸ್ಪಾ  ಮತ್ತು ಏಪ್ರಿಲಿಯಾ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ, ಪಿಯಾಜಿಯೊ ಒನ್ ಕಂಪನಿಯ ಮೂರನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.    

Written by - Ranjitha R K | Last Updated : May 31, 2021, 03:33 PM IST
  • ಎಲೆಕ್ಟ್ರಿಕ್ ಸ್ಕೂಟರ್ ಪಿಯಾಜಿಯೊ ಒನ್ ಬಿಡುಗಡೆ
  • ಬೀಜಿಂಗ್ ಮೋಟಾರ್ ಶೋನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಲಾಂಚ್
  • ಫುಲ್ ಚಾರ್ಜ್ ಮಾಡಿದರೆ ಕ್ರಮಿಸಲಿದೆ 90 ಕಿಮೀ
Piaggio One ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ;  ತಿಳಿಯಿರಿ ಇದರ ವೈಶಿಷ್ಟ್ಯ title=
ಎಲೆಕ್ಟ್ರಿಕ್ ಸ್ಕೂಟರ್ ಪಿಯಾಜಿಯೊ ಒನ್ ಬಿಡುಗಡೆ (photo zee news)

ನವದೆಹಲಿ : Piaggio One Launch: ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಭಾರೀ ಬೇಡಿಕೆ ಇದೆ. ಈ ಮಧ್ಯೆ ಪಿಯಾಜಿಯೊ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಪಿಯಾಜಿಯೊ ಒನ್ (Piaggio One Launch) ಅನ್ನು ಬಿಡುಗಡೆ ಮಾಡಿದೆ. ಮೇ 28 ರಂದು ನಡೆದ ಬೀಜಿಂಗ್ ಮೋಟಾರ್ ಶೋನಲ್ಲಿ ಪಿಯಾಜಿಯೊ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಲಾಂಚ್ ಮಾಡಿದೆ. 

ಫುಲ್ ಚಾರ್ಜ್ ಮಾಡಿದರೆ ಕ್ರಮಿಸಲಿದೆ 90 ಕಿಮೀ : 
ಎಲೆಕ್ಟ್ರಿಕ್ ಸ್ಕೂಟರ್ (Electric scooter) ವಿಭಾಗದಲ್ಲಿ, ಪಿಯಾಜಿಯೊನ  ವೆಸ್ಪಾ (Vespa)  ಮತ್ತು ಏಪ್ರಿಲಿಯಾ (Aprilia) ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ, ಪಿಯಾಜಿಯೊ ಒನ್ (Piaggio One) ಕಂಪನಿಯ ಮೂರನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.  ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ,  90 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸಲಿದೆ ಎಂದು ಕಂಪನಿ ಹೇಳಿದೆ. ಈ ಸ್ಕೂಟರ್ ದೈನಂದಿನ ಬಳಕೆಗೆ ಬಹಳ ಅನುಕೂಲಕಾರಿಯಾಗಲಿದೆ ಎನ್ನುವುದು ಕಂಪನಿಯ ಹೇಳಿಕೆ. . ಭಾರತದಲ್ಲಿ,  ಈಗಾಗಲೇ ಮಾರುಕಟ್ಟೆಯಲ್ಲಿರುವ ಬಜಾಜ್ ಚೇತಕ್ (Bajaj Chetak) ಮತ್ತು ಟಿವಿಎಸ್ ಐಕ್ಯೂಬ್‌ನಂತಹ (TVS iQube) ಸ್ಕೂಟರ್‌ಗಳೊಂದಿಗೆ, ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಸ್ಪರ್ಧಿಸಲಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಪಿಯಾಜಿಯೊ ಒನ್ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ.  

ಇದನ್ನೂ ಓದಿ : EPFO Alerts: ಪಿಎಪ್‌ಗೆ ಸಂಬಂಧಿಸಿದ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ ನಿಮ್ಮ ಹಣ ಸಿಲುಕಬಹುದು

ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದು : 
ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಸ್ಕೂಟರ್ (Scooter) ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಬಳಸಲಾಗಿದೆ. ಈ ಬ್ಯಾಟರಿಯನ್ನು ತೆಗೆಯುವುದು, ಮತ್ತೆ ಹಾಕುವುದು ಬಹಳ ಸುಲಭ.  ಇದರ ಬ್ಯಾಟರಿಯನ್ನು  ಮನೆ ಅಥವಾ ಕಚೇರಿಯಲ್ಲಿ ಸುಲಭವಾಗಿ ಚಾರ್ಜ್ (charge) ಮಾಡಿಕೊಳ್ಳಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಪಿಯಾಜಿಯೊ ಒನ್‌ನ ವೈಶಿಷ್ಟ್ಯಗಳು : 
Piaggio One ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ಇತ್ತೀಚಿನ ವೈಶಿಷ್ಟ್ಯಗಳನ್ನು ಹೊಂದಿದೆ. Keyles ಸ್ಟಾರ್ಟ್ ಸಿಸ್ಟಮ್, USB ಚಾರ್ಜಿಂಗ್ ಸಿಸ್ಟಮ್, ಫುಲ್ ಎಲ್ಇಡಿ ಹೆಡ್ ಲೈಟ್ಸ್, ಡಿಜಿಟಲ್ ಕಲರ್ ಇನ್ಸ್ಟ್ರುಮೆಂಟ್ ಪ್ಯಾನಲ್ ಮತ್ತು ಎರಡು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ.  ಈ  ಸ್ಕೂಟರ್‌ನ ಎರಡೂ ಟೈರ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಇದರ ಎತ್ತರವನ್ನು ಕಡಿಮೆ ಇಡಲಾಗಿದ್ದು, ಕಡಿಮೆ ಎತ್ತರವನ್ನು ಹೊಂದಿರುವವರು ಅದನ್ನು ಸುಲಭವಾಗಿ ಚಲಾಯಿಸಬಹುದು. 

ಇದನ್ನೂ ಓದಿ : 7th Pay Commission: ತಂದೆ ತಾಯಿ ಸಾವಿನ ನಂತರ ಮಕ್ಕಳಿಗೆ ಪ್ರತಿ ತಿಂಗಳು 1.25 ಲಕ್ಷ ಪಿಂಚಣಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News