ನವದೆಹಲಿ: ಓಲಾ ಎಲೆಕ್ಟ್ರಿಕ್ (OLA Electric) ಈ ವರ್ಷದ ಜುಲೈ ವೇಳೆಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಇದರೊಂದಿಗೆ ಕಂಪನಿಯು 'ಹೈಪರ್‌ಚಾರ್ಜರ್ ನೆಟ್‌ವರ್ಕ್'ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರ ಅಡಿಯಲ್ಲಿ ದೇಶದ 400 ನಗರಗಳಲ್ಲಿ ಒಂದು ಲಕ್ಷ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.
1 ವರ್ಷದಲ್ಲಿ 20 ಲಕ್ಷ ಸ್ಕೂಟರ್ ನಿರ್ಮಾಣದ ಗುರಿ:
ತಮಿಳುನಾಡಿನಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಕಾರ್ಖಾನೆ ಸ್ಥಾಪಿಸಲು ಓಲಾ ಕಳೆದ ವರ್ಷ 2,400 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಈ ಕಾರ್ಖಾನೆಗಳು ಸಿದ್ಧವಾದ ನಂತರ 10,000 ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಇದು ವಿಶ್ವದ ಅತಿದೊಡ್ಡ ಸ್ಕೂಟರ್ ಉತ್ಪಾದನಾ ಘಟಕವಾಗಲಿದ್ದು, ವಾರ್ಷಿಕ 2 ಮಿಲಿಯನ್ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ - Bajaj Chetak Electric Scooter ಬುಕಿಂಗ್ ಆರಂಭ, ಹೊಸ ಅವತಾರದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್
ಜುಲೈನಲ್ಲಿ ಸ್ಕೂಟರ್ ಮಾರಾಟ ಪ್ರಾರಂಭವಾಗಲಿದೆ:
ಓಲಾ (OLA) ಅಧ್ಯಕ್ಷ ಮತ್ತು ಸಿಇಒ ಭಾವೀಶ್ ಅಗರ್‌ವಾಲ್ ಮಾತನಾಡಿ, 'ನಾವು ಜೂನ್ ವೇಳೆಗೆ ಈ ಕಾರ್ಖಾನೆಯನ್ನು ಸ್ಥಾಪಿಸುತ್ತೇವೆ. ಇದೀಗ ಮೊದಲ 1 ವರ್ಷದಲ್ಲಿ ಕೇವಲ 20 ಲಕ್ಷ ಸ್ಕೂಟರ್‌ಗಳನ್ನು ತಯಾರಿಸಲಾಗುವುದು, ಆದರೆ ಮುಂದಿನ 12 ತಿಂಗಳಲ್ಲಿ ನಾವು ಉತ್ಪಾದನೆಯನ್ನು ಹೆಚ್ಚಿಸುತ್ತೇವೆ. ಕಾರ್ಖಾನೆ ಪ್ರಾರಂಭವಾದ 1 ತಿಂಗಳ ನಂತರ ಅಂದರೆ ಜುಲೈನಲ್ಲಿ ಸ್ಕೂಟರ್ ಮಾರಾಟ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ - ಪೆಟ್ರೋಲ್ ದರ ಏರಿಕೆ ನಡುವೆ ನಿಮ್ಮ ಟೆನ್ಶನ್ ಕಡಿಮೆ ಮಾಡಲಿರುವ 5 ಅಗ್ಗದ Electric Scooters
1 ಲಕ್ಷ ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಿಸಲು ಮುಂದಾದ ಓಲಾ:
ಓಲಾದ ಹೈಪರ್ ಚಾರ್ಜರ್ ನೆಟ್‌ವರ್ಕ್ (Hyper Charger Network) ವಿಶ್ವದ ಅತ್ಯಂತ ವಿಸ್ತಾರವಾದ ದ್ವಿಚಕ್ರ ವಾಹನ ಚಾರ್ಜಿಂಗ್ ನೆಟ್‌ವರ್ಕ್ ಆಗಲಿದೆ ಎಂದು ಕಂಪನಿ ಹೇಳಿದೆ. ಇದರ ಅಡಿಯಲ್ಲಿ 400 ನಗರಗಳಲ್ಲಿ ಒಂದು ಲಕ್ಷ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಲಾಗುವುದು. ಮೊದಲ ವರ್ಷದಲ್ಲಿ, ದೇಶದ 100 ನಗರಗಳಲ್ಲಿ 5,000 ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗುವುದು, ಇದು ಕೇವಲ 18 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಸ್ಕೂಟರ್ ಅನ್ನು ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಇದು ದೇಶದಲ್ಲಿ ಚಾರ್ಜಿಂಗ್ ರಚನೆಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.