ಬೆಂಗಳೂರು: Coronavirus Third Wave -  ಕರ್ನಾಟಕದಲ್ಲಿ ಕಳೆದ ಐದು ದಿನಗಳಲ್ಲಿ ಕನಿಷ್ಠ 242 ಮಕ್ಕಳು ಕೊರೊನಾವೈರಸ್ (Coronavirus) ಸೋಂಕಿಗೆ ಒಳಗಾಗಿದ್ದಾರೆ. ಸರ್ಕಾರದ ಅಂಕಿಅಂಶಗಳಿಂದ ಈ ಮಾಹಿತಿಯನ್ನು ಕಲೆಹಾಕಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ  ಇನ್ನೂ ಹೆಚ್ಚಾಗಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕೋವಿಡ್ -19 (Covid-19 In Kids) ರ ಎರಡನೇ ಅಲೆಯ ಸಮಯದಲ್ಲಿ, ತಜ್ಞರು ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ನಿರೀಕ್ಷಿಸುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಈ ಅಂಕಿಅಂಶಗಳು ಮತ್ತೊಮ್ಮೆ ಇದೀಗ ಆತಂಕ ಹೆಚ್ಚಿಸಿವೆ.


COMMERCIAL BREAK
SCROLL TO CONTINUE READING

ಕಳೆದ ಐದು ದಿನಗಳಲ್ಲಿ, 19 ವರ್ಷಕ್ಕಿಂತ ಕಡಿಮೆ ವಯಸ್ಸಿನ 242 ಮಕ್ಕಳ ವರದಿಗಳು ಸಕಾರಾತ್ಮಕ ಹೊರಬಂದಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೇಳಿದೆ. ಕೋವಿಡ್ -19 ರ ಮೂರನೇ ಅಲೆ ಆರಂಭವಾಗಿದೆ (Coronavirus Third Wave In Karnataka) ಎಂಬುದರ ಸೂಚನೆ ಇದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇವರಲ್ಲಿ 106 ಮಕ್ಕಳು 9 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಅಂಕಿ-ಅಂಶಗಳು ತೋರಿಸುತ್ತವೆ. ಆದರೆ, 136 ಮಕ್ಕಳು 9 ರಿಂದ 19 ವರ್ಷದೊಳಗಿನವರಾಗಿದ್ದಾರೆ. ಮಂಗಳವಾರ, ರಾಜ್ಯದಲ್ಲಿ 1 ಸಾವಿರದ 338 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಸಮಯದಲ್ಲಿ 31 ರೋಗಿಗಳು ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ. 


ಇದನ್ನೂ ಓದಿ-Covishield ಹಾಗೂ Covaxin ಲಸಿಕೆಗಳ Mix And Match ಅಧ್ಯಯನಕ್ಕೆ DCGI ಅನುಮತಿ


ಹೆಚ್ಚಾಗಲಿವೆ ಪ್ರಕರಣಗಳು
ಈ ಕುರಿತು ಕೇಳಿಕೆ ನೀಡಿರುವ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, ಕೆಲವೇ ದಿನಗಳಲ್ಲಿ ಪ್ರಕರಣಗಳ (Covid-19) ಸಂಖ್ಯೆ ಮೂರು ಪಟ್ಟು ಹೆಚ್ಚಾಗಲಿದ್ದು, ಇದು ದೊಡ್ಡ ಅಪಾಯವೇ ಎಂದರೆ ತಪ್ಪಾಗಲಾರರು ಎಂದಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ಘೋಷಿಸಿದೆ. ಇದಲ್ಲದೆ ಕೇರಳ-ಕರ್ನಾಟಕ, ಮಹಾರಾಷ್ಟ್ರ-ಕರ್ನಾಟಕ ಗಡಿಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಕೇವಲ RT-PCR ಸರ್ಟಿಫಿಕೆಟ್ ಹೊಂದಿರುವ ಯಾತ್ರಿಗಳ ಪ್ರಯಾಣಕ್ಕೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಅದೂ ಕೂಡ ಈ ಸರ್ಟಿಫಿಕೆಟ್ 72ಗಂಟೆಗಳಿಗಿಂತ ಹಳೆಯದಾಗಿರಬಾರದು ಎಂಬ ಷರತ್ತು ವಿಧಿಸಲಾಗಿದೆ.


ಇದನ್ನೂ ಓದಿ-Vaccine Mixing And Matching - Covishield ಹಾಗೂ Covaxin ಮಿಕ್ಸ್ ಲಸಿಕೆ ಹಾಕಿಸಿಕೊಂಡವರಲ್ಲಿ ಉತ್ತಮ ಪರಿಣಾಮ ಗಮನಿಸಲಾಗಿದೆ: ICMR


ಕಳೆದ ತಿಂಗಳು ರಾಜ್ಯದಲ್ಲಿ ಪ್ರತಿ ನಿತ್ಯ 1500 ಕ್ಕೂ ಅಧಿಕ ಪ್ರಕರಣಗಳು ಮುಂದೆ ಬಂದಿದ್ದವು. ಇತ್ತೀಚೆಗಷ್ಟೇ ರಾಜ್ಯದಲ್ಲಿ ಹೊಸದಾಗಿ ಮುಖ್ಯಮಂತ್ರಿಯ (CM Basavaraj Bommai) ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವ್ಯಾಕ್ಸಿನ್ ಪ್ರಮಾಣಗಳನ್ನು 65 ಲಕ್ಷದಿಂದ 1 ಕೋಟಿ ಪ್ರತಿ ತಿಂಗಳು ಹೆಚ್ಚಿಸುವುದಾಗಿ ಹೇಳಿದ್ದಾರೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಆಗಸ್ಟ್ 16 ರಿಂದ ಭಾಗಶಃ ಲಾಕ್ ಡೌನ್ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಇದುವರೆಗೆ ಕೊವಿಡ್ 19ನ 29 ಲಕ್ಷ 21  ಸಾವಿರ 049 ಪ್ರಕರಣಗಳು ವರದಿಯಾಗಿವೆ ಇವುಗಳಲ್ಲಿ 36 ಸಾವಿರದ 88 ರೋಗಿಗಳು ಮೃತಪಟ್ಟಿದ್ದಾರೆ. ಪ್ರಸ್ತುತ 22 ಸಾವಿರ 702 ರೋಗಿಗಳ ಮೇಲೆ ಚಿಕಿತ್ಸೆ ಮುಂದುವರೆದಿದೆ.


ಇದನ್ನೂ ಓದಿ-Johnson and Johnson ಕಂಪನಿಯ Single Dose Vaccine ಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ