Covishield ಹಾಗೂ Covaxin ಲಸಿಕೆಗಳ Mix And Match ಅಧ್ಯಯನಕ್ಕೆ DCGI ಅನುಮತಿ

DCGI Nod For Vaccine Mix And Match: ಕರೋನಾ ವೈರಸ್‌ನ (Coronavirus) ಎರಡು ಲಸಿಕೆಗಳನ್ನು ಬೆರೆಸುವಲ್ಲಿ ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇದೀಗ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (DCGI) ಸಹ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ಮಿಶ್ರಣವನ್ನು ಅಧ್ಯಯನ (Vaccine Mix And Match) ಮಾಡಲು ತನ್ನ ಅನುಮೋದನೆಯನ್ನು ನೀಡಿದೆ.

Written by - Nitin Tabib | Last Updated : Aug 11, 2021, 09:54 AM IST
  • ಕೊರೊನಾ ವಿರೋಧಿ ಲಸಿಕೆಗಳ ಬೆರಕೆ ಅಧ್ಯಯನಕ್ಕೆ DCGI ಅನುಮೋದನೆ.
  • ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಈ ಅಧ್ಯಯನ ಮತ್ತು ಕ್ಲಿನಿಕಲ್ ಟ್ರಯಲ್ ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
  • 300 ಆರೋಗ್ಯವಂತ ಸ್ವಯಂಸೇವಕರ ಮೇಲೆ ಕೋವಾಕ್ಸಿನ್ ಮತ್ತು ಕೋವಿಡ್‌ಶೀಲ್ಡ್ ಲಸಿಕೆಗಳನ್ನು ನೀಡಿ ಫಲಿತಾಂಶ ಪರಿಶೀಲನೆ.
Covishield ಹಾಗೂ Covaxin ಲಸಿಕೆಗಳ Mix And Match ಅಧ್ಯಯನಕ್ಕೆ DCGI ಅನುಮತಿ title=
DGCI Nod For Vaccine Mix And Match

DCGI Nod For Vaccine Mix And Match: ಕರೋನಾ ವೈರಸ್‌ನ (Coronavirus) ಎರಡು ಲಸಿಕೆಗಳನ್ನು ಬೆರೆಸುವಲ್ಲಿ ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇದೀಗ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (DCGI) ಸಹ ಕೊವ್ಯಾಕ್ಸಿನ್  ಮತ್ತು ಕೋವಿಶೀಲ್ಡ್ ಲಸಿಕೆಯ ಮಿಶ್ರಣವನ್ನು ಅಧ್ಯಯನ (Vaccine Mix And Match) ಮಾಡಲು ತನ್ನ ಅನುಮೋದನೆಯನ್ನು ನೀಡಿದೆ. ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಈ ಅಧ್ಯಯನ ಮತ್ತು ಕ್ಲಿನಿಕಲ್ ಟ್ರಯಲ್ ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಆಂಗ್ಲ ಮಾಧ್ಯಮದಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಸೆಂಟ್ರಲ್ ಡ್ರಗ್ಸ್ ರೆಗ್ಯುಲೇಟರಿಯ ವಿಷಯ ತಜ್ಞರ (SEC) ಸಮಿತಿಯು ಈ ಅಧ್ಯಯನವನ್ನು ನಡೆಸಲು ಜುಲೈ 29ರಂದೇ ಅನುಮತಿ ನೀಡಿದೆ ಎನ್ನಲಾಗಿದೆ. 

ಸಭೆಯಲ್ಲಿ, ತಜ್ಞರ ಸಮಿತಿಯು ಸಿಎಮ್‌ಸಿ, ವೆಲ್ಲೂರಿನಲ್ಲಿ ನಾಲ್ಕನೇ ಹಂತದ  IV ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಅನುಮತಿ ನೀಡಲು ಸಲಹೆ ನೀಡಿತ್ತು. ಈ ಪ್ರಯೋಗದಲ್ಲಿ, 300 ಆರೋಗ್ಯವಂತ ಸ್ವಯಂಸೇವಕರ ಮೇಲೆ ಕೋವಿಡ್ -19 ರ ಕೋವಾಕ್ಸಿನ್ ಮತ್ತು ಕೋವಿಡ್‌ಶೀಲ್ಡ್ ಲಸಿಕೆಗಳನ್ನು ನೀಡಿ ಅವುಗಳ ಪರಿಣಾಮ ಪರೀಕ್ಷಿಸಲಾಗುವುದು.

ಸಂಪೂರ್ಣ ವ್ಯಾಕ್ಸಿನೆಶನ್ ನಲ್ಲಿ ಒಬ್ಬ ವ್ಯಕ್ತಿಗೆ ಒಂದು ಡೋಸ್ ಕೋವಾಕ್ಸಿನ್ ಮತ್ತು ಇನ್ನೊಂದು ಡೋಸ್ ಕೋವಿಶೀಲ್ಡ್ ನೀಡಬಹುದೇ ಎಂಬುದನ್ನು ಅರಿಯುವುದೇ  ಈ ಅಧ್ಯಯನದ ಉದ್ದೇಶವಾಗಿದೆ.

ಇದನ್ನೂ ಓದಿ-Tips To Relieve Stress: ಈ ಸಿಂಪಲ್ ಟಿಪ್ಸ್ ಅನುಸರಿಸಿ ನಿಮಿಷಗಳಲ್ಲಿ ನಿಮ್ಮ ಒತ್ತಡ ನಿವಾರಿಸಿ

ಈ ಪ್ರಸ್ತಾವಿತ ಅಧ್ಯಯನವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ನಡೆಸಿದ ಇತ್ತೀಚಿನ ಅಧ್ಯಯನಕ್ಕಿಂತ ಭಿನ್ನವಾಗಿದೆ. ICMR ಎರಡು ವಿಭಿನ್ನ ಕರೋನಾ ವಿರೋಧಿ ಲಸಿಕೆಗಳನ್ನು ತಪ್ಪಾಗಿ ನೀಡಿದ ಉತ್ತರ ಪ್ರದೇಶದ ಜನರ ಮೇಲೆ ಸಂಶೋಧನೆ ನಡೆಸಿತ್ತು ಎಂಬುದು ಇಲ್ಲಿ ಗಮನಾರ್ಹ.

ತಾನು ಕೈಗೊಂಡ ಅಧ್ಯಯನದ ಆಧಾರದ ಮೇಲೆ ಹೇಳಿಕೆ ನೀಡಿದ್ದ ICMR ಓರ್ವ ವ್ಯಕ್ತಿಗೆ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ನ ಒಂದೊಂದು ಲಸಿಕೆ ನೀಡುವುದರ ಫಲಿತಾಂಶಗಳು ಸಕಾರಾತ್ಮಕ ಮತ್ತು ಉತ್ತಮವಾಗಿವೆ ಎಂದು ಹೇಳಿತ್ತು. ಅಷ್ಟೇ ಅಲ್ಲ ಇದರಿಂದ ಕೊವಿಡ್-19 ವಿರುದ್ಧ ಅತ್ಯುತ್ತಮ ಇಮ್ಯೂನಿಟಿ ಸಾಧಿಸಬಹುದು ಎಂದಿತ್ತು. ಈ ಅಧ್ಯಯನ ಮೇ ಹಾಗೂ ಜೂನ್ ಮಧ್ಯೆ ಉತ್ತರ ಪ್ರದೇಶದ ಲಾಭಾರ್ಥಿಗಳ ಮೇಲೆ ನಡೆಸಲಾಗಿತ್ತು.

ಇದನ್ನೂ ಓದಿ-ಮಳೆಗಾಲದಲ್ಲಿ ನಿಮ್ಮ ಆಹಾರದಲ್ಲಿ ಅವಶ್ಯವಾಗಿರಲಿ ಈ ವಸ್ತುಗಳು

ಸಂಸತ್ತಿನಲ್ಲಿ ಸರ್ಕಾರ ಹೇಳಿದ್ದೇನು?
ಇದಕ್ಕೂ ಮೊದಲು ಈ ಕುರಿತು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಸರ್ಕಾರ ಕೊರೊನಾ ವೈರಸ್ ವಿರೋಧಿ ಲಸಿಕೆಗಳ ಎರಡು ವಿಭಿನ್ನ ಪರಿಣಾಮಗಳನ್ನು ನೀಡುವ ಕುರಿತು ಇದುವರೆಗೆ ಯಾವುದೇ ಶಿಫಾರಸ್ಸು ಬಂದಿಲ್ಲ. ಈ ಕುರಿತು ರಾಜ್ಯಸಭೆಯಲ್ಲಿ ಕೇಳಲಾಗಿರುವ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ಕೊವಿಡ್-19 ಲಸಿಕೆಗಳನ್ನು ಇತ್ತೀಚೆಗಷ್ಟೇ ಅಭಿವೃದ್ದಿಗೊಳಿಸಲಾಗಿದೆ. ವಿಭಿನ್ನ ಲಸಿಕೆಗಳನ್ನು ಬೆರೆಸುವ ಹಾಗೂ ಮಿಶ್ರ ಲಸಿಕೆಗಳ ಕುರಿತಾದ ಅಧ್ಯಯನ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ-Foods to stop Hair Fall: ಕೂದಲು ಉದುರುವುದನ್ನು ನಿಲ್ಲಿಸಲು ನಿತ್ಯ ಈ ಸಮಯದಲ್ಲಿ 1 ಟೀಸ್ಪೂನ್ ಬೆಣ್ಣೆ ಸೇವಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News