ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಸಂಬಂಧಿತ ಸಾವುಗಳು ಶುಕ್ರವಾರದಂದು 50 ರಿಂದ ಶನಿವಾರದವರೆಗೆ 70 ಕ್ಕೆ ಏರಿದೆ. ಇನ್ನೊಂದೆಡೆಗೆ 33,337 ಹೊಸ COVID-19 ಪ್ರಕರಣಗಳು ಮತ್ತು ಸಾವುಗಳಿಂದಾಗಿ ಕ್ರಮವಾಗಿ ಒಟ್ಟು ಸಂಖ್ಯೆ 37,57,031 ಮತ್ತು 38,874 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: UP Assembly election 2022: ಕುಸ್ತಿಪಟು ಬಬಿತಾ ಫೋಗಟ್ ವಿರುದ್ಧ ಎಫ್‌ಐಆರ್


69,902 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ, ಒಟ್ಟು ಚೇತರಿಕೆಯ ಸಂಖ್ಯೆಯನ್ನು 34,65,995 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,52,132 ಕ್ಕೆ ತಲುಪಿದೆ ಎಂದು ಇಲಾಖೆ ತನ್ನ ಬುಲೆಟಿನ್‌ನಲ್ಲಿ ತಿಳಿಸಿದೆ.


ಬೆಂಗಳೂರು ನಗರ ಜಿಲ್ಲೆ 16,586 ಸೋಂಕುಗಳು ಮತ್ತು 13 ಸಾವುಗಳನ್ನು ದಾಖಲಿಸಿದರೆ, ಮೈಸೂರಿನಲ್ಲಿ 2,431, ಧಾರವಾಡದಲ್ಲಿ 1,278, ತುಮಕೂರಿನಲ್ಲಿ 1,192, ಹಾಸನದಲ್ಲಿ 1,039, ಮಂಡ್ಯದಲ್ಲಿ 986 ಮತ್ತು ಬೆಳಗಾವಿಯಲ್ಲಿ 798 ಸೇರಿದಂತೆ ಹೊಸ ಪ್ರಕರಣಗಳು ದಾಖಲಾಗಿವೆ.


ಇದನ್ನೂ ಓದಿ: "ಹಿಂದು-ಮುಸ್ಲಿಂ ಧ್ರುವೀಕರಣ ರಾಜಕೀಯ ಉತ್ತರ ಪ್ರದೇಶದಲ್ಲಿ ನಡೆಯಲ್ಲ"


ಮೈಸೂರಿನಲ್ಲಿ ಒಂಬತ್ತು, ದಕ್ಷಿಣ ಕನ್ನಡ, ಕಲಬುರಗಿ ಮತ್ತು ಉಡುಪಿಯಲ್ಲಿ ತಲಾ ಐದು, ಬಳ್ಳಾರಿಯಲ್ಲಿ ನಾಲ್ಕು ಸೇರಿದಂತೆ 26 ಜಿಲ್ಲೆಗಳಲ್ಲಿ ಸಾವು ಸಂಭವಿಸಿದೆ.ಐದು ಜಿಲ್ಲೆಗಳಲ್ಲಿ ಶೂನ್ಯ ಸಾವು ಸಂಭವಿಸಿವೆ.ದಿನದ ಧನಾತ್ಮಕತೆಯ ದರವು ಶೇ 19.37 ಮತ್ತು ಪ್ರಕರಣದ ಸಾವಿನ ಪ್ರಮಾಣವು ಶೇ 0.20 ರಷ್ಟಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.