Crime News: 45 ಪ್ರಕರಣಗಳಲ್ಲಿ ಬೇಕಾಗಿದ್ದ ಮುಂಬೈನ ಕುಖ್ಯಾತ ಗ್ಯಾಂಗ್ಸ್ಟರ್ ಅರೆಸ್ಟ್!
ಬಂಧಿತ ಗ್ಯಾಂಗ್ಸ್ಟರ್ ಬಳಿ ಪಿಸ್ತೂಲ್, 4 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. 15 ಸಿಮ್ ಕಾರ್ಡ್ಗಳು, 6 ಮೊಬೈಲ್ ಫೋನ್ಗಳು ಜಪ್ತಿ ಮಾಡಲಾಗಿದೆ.
ಬೆಂಗಳೂರು: ಕೊಲೆ, ದರೋಡೆ, ಬೆದರಿಕೆ, ಡ್ರಗ್ಸ್ ದಂಧೆ ಸೇರಿದಂತೆ ಒಟ್ಟು 45 ಪ್ರಕರಣಗಳಲ್ಲಿ ಬೇಕಾಗಿದ್ದ ಮುಂಬೈನ ಕುಖ್ಯಾತ ಗ್ಯಾಂಗ್ಸ್ಟರ್(Mumbai Gangster)ನನ್ನು ಬಂಧಿಸಲಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದ ಗ್ಯಾಂಗ್ಸ್ಟರ್ ಕೊನೆಗೂ ಖಾಕಿಬಲೆಗೆ ಬಿದ್ದಿದ್ದಾನೆ.
ಮುಂಬೈ ಪೊಲೀಸರ ಮಾಹಿತಿ ಮೇರೆಗೆ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಬೆಂಗಳೂರಿನ ಅತ್ತಿಬೆಲೆ ಪೊಲೀಸರು ಗ್ಯಾಂಗ್ಸ್ಟರ್(Gangster Arrested) ಇಲಿಯಾಸ್ ಅಬ್ದುಲ್ ಆಸಿಫ್ @ ಬಚ್ಕಾನಾನನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ ತಾಲೂಕಿನ ಅತ್ತಿಬೆಲೆಯಲ್ಲಿ 3 ದಿನಗಳ ಹಿಂದೆಯೇ ಆರೋಪಿಯನ್ನು ಬಂಧಿಸಲಾಗಿದ್ದು, ತಡವಾಗಿ ಬೆಳಕಿಗೆ ಬಂಧಿದೆ.
ಇದನ್ನೂ ಓದಿ: Kolar Crime News: ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಕಳ್ಳನಾದ ತಂದೆ..!
ತಮಿಳುನಾಡಿನ ಹೊಸೂರು ಸಮೀಪದ ಟಾಲ್ ಏರ್ಪೋರ್ಟ್ ರನ್ ವೇ ಯಲ್ಲಿ ಬೈಕ್ ರೇಸ್(Bike Race) ಆಯೋಜಿಸಲಾಗಿತ್ತು. ಬೈಕ್ ರೇಸ್ ವೀಕ್ಷಣೆಗೆ ಆಗಮಿಸಿದ್ದ ಆರೋಪಿ ಹಿಡಿಯಲು ಪೊಲೀಸರು ಪ್ರಯತ್ನಿಸಿದ್ದರು. ಅತ್ತಿಬೆಲೆ ರೆಸ್ಟೋರೆಂಟ್ ನಲ್ಲಿ ಅಡಗಿ ಕುಳಿತಿದ್ದ ವೇಳೆ ದಾಳಿ ಮಾಡಿ ಸೆರೆ ಹಿಡಿಯಲಾಗಿದೆ.
ಬಂಧಿತ ಗ್ಯಾಂಗ್ಸ್ಟರ್(Gangster)ಬಳಿ ಪಿಸ್ತೂಲ್, 4 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. 15 ಸಿಮ್ ಕಾರ್ಡ್ಗಳು, 6 ಮೊಬೈಲ್ ಫೋನ್ಗಳು ಜಪ್ತಿ ಮಾಡಲಾಗಿದೆ. ಭೂಗತ ಲೋಕದ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಇಲಿಯಾಸ್ ಮುಂಬೈ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ. ಕೊನೆಗೂ ಆರೋಪಿಯನ್ನು ಬಂಧಿಸಿದ ಅತ್ತಿಬೆಲೆ ಪೊಲೀಸರು ಮುಂಬೈ ಪೊಲೀಸರಿಗೆ(Mumbai Police)ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಶವಾಗಾರದಲ್ಲಿ ನವೀನ್ ಮೃತ ದೇಹ, ಶೆಲ್ ದಾಳಿ ನಿಂತ ನಂತರ ಭಾರತಕ್ಕೆ ತರುವ ಕ್ರಮ: ಸಿಎಂ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.