Kolar Crime News: ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಕಳ್ಳನಾದ ತಂದೆ..!

ಮಕ್ಕಳಿಗೆ ಏನೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದ ಸಂತೋಷ್ ತಾನು ಕಳ್ಳತನ ಮಾಡಿ ಬಂದ ಹಣದಿಂದ ಕೇಳಿದ ಪ್ರತಿಯೊಂದನ್ನು ಅವರಿಗೆ ಕೊಡಿಸುತ್ತಿದ್ದ ಎಂದು ತಿಳಿದುಬಂದಿದೆ.

Written by - Zee Kannada News Desk | Last Updated : Mar 7, 2022, 09:40 PM IST
  • ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಹೋಗಿ ಕಳ್ಳನಾದ ತಂದೆ
  • ಮಕ್ಕಳ ಐಷಾರಾಮಿ ಜೀವನಕ್ಕೆ ಮನೆಗಳ್ಳತನವೇ ವೃತ್ತಿ ಮಾಡಿಕೊಂಡಿದ್ದ
  • ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದ ಆರೋಪಿ ಖಾಕಿಬಲೆಗೆ
Kolar Crime News: ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಕಳ್ಳನಾದ ತಂದೆ..! title=
ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಕಳ್ಳನಾದ ತಂದೆ

ಕೋಲಾರ: ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಹೋಗಿ ತಂದೆಯೊಬ್ಬ ಕಳ್ಳನಾಗಿದ್ದಾನೆ. ತನ್ನ ಮಕ್ಕಳಿಗೆ ಬಡತನದ ಅರಿವಾಗದಂತೆ ನೋಡಿಕೊಳ್ಳಲು ಕೋಲಾರ(Kolar) ಮೂಲದ ಸಂತೋಷ್ ಕಳ್ಳತಕ್ಕೆ ಕೈಹಾಕಿ ಸಿಕ್ಕಿಬಿದ್ದಿದ್ದಾನೆ.

ಸಂತೋಷ್ ಗೆ ಇಬ್ಬರು ಮಕ್ಕಳಿದ್ದಾರೆ. ಈ ಮಕ್ಕಳ ಐಷಾರಾಮಿ ಜೀವನ(Rich Lifestyle)ಕ್ಕೆ ಸಂತೋಷ್ ಮನೆಗಳ್ಳತನವನ್ನೇ ತನ್ನ ವೃತ್ತಿ ಮಾಡಿಕೊಂಡಿದ್ದ. ರಾತ್ರಿ ಊಟ ಮುಗಿಸಿಕೊಂಡು ಏರಿಯಾದಲ್ಲಿ ಆರೋಪಿ ಬೀಟ್ ಹಾಕಿ ಕಳ್ಳತನಕ್ಕೆ ಮಾಸ್ಟರ್ ಪ್ಲಾನ್ ಮಾಡುತ್ತಿದ್ದ.   

ಇದನ್ನೂ ಓದಿ: ಡಿಯೋ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಖದೀಮರ ಬಂಧನ

ರಾತ್ರಿ 9 ಗಂಟೆಗೆ ಯಾವ ಮನೆಯಲ್ಲಿ ಲೈಟ್ ಆಫ್ ಆಗಿದೆ ಎಂದು ಆರೋಪಿ ಪರಿಶೀಲಿಸುತ್ತಿದ್ದ. ಬಳಿಕ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಸಂತೋಷ್ ಸಕಲ ಸಿದ್ಧತೆ ಮಾಡಿಕೊಂಡೇ ರೋಡಿಗಿಳಿಯುತ್ತಿದ್ದ.

ಬೆಳಗಿನ ಜಾವ ಪೊಲೀಸ್ ಬೀಟ್ ಮುಗಿಯೋದನ್ನೇ ಆರೋಪಿ ಕಾಯುತಿದ್ದ. ಖಾಕಿಪಡೆ(Kolar Police)ಯ ಬೀಟ್ ಮುಗಿದ ಬಳಿಕ ಮನೆಯಲ್ಲಿ ಕಳ್ಳತನ ಮಾಡಿರುವ ಚಿನ್ನ-ಬೆಳ್ಳ, ಹಣ ಸೇರಿದಂತೆ ಬೆಲೆ ಬಾಳುವ ವಸ್ತುಗಳೊಂದಿಗೆ ಆರೋಪಿ ಎಸ್ಕೇಪ್ ಆಗುತ್ತಿದ್ದ. ಹೀಗೆ ಕಳ್ಳತನ ಮಾಡಿದ ಬೆಲೆಬಾಳುವ ವಸ್ತುಗಳನ್ನು ತನ್ನ ಸಂಬಂಧಿಗಳಿಗೆ ನೀಡುತ್ತಿದ್ದ.   

ಇದನ್ನೂ ಓದಿ: ಶ್ರೀಗಂಧದ ಮರ ಮಂಗಮಾಯ!: CCTVಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ

ಆರೋಪಿ ಸಂತೋಷ ಕದ್ದ ಮಾಲುಗಳನ್ನು ಮೋಹನ್ ಹಾಗೂ ಸಾವಿತ್ರಿ ಎಂಬುವರ ಮೂಲಕ ಮಾರಾಟ ಮಾಡಿಸುತ್ತಿದ್ದ. ಬಳಿಕ ಬಂದ ಹಣದಲ್ಲಿ ಮಕ್ಕಳಿಗೆ ಐಷಾರಾಮಿ ಜೀವನದ ಬದುಕು ತೋರಿಸುತ್ತಿದ್ದ. ಮಕ್ಕಳಿಗೆ ಏನೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದ ಸಂತೋಷ್ ತಾನು ಕಳ್ಳತನ ಮಾಡಿ ಬಂದ ಹಣದಿಂದ ಕೇಳಿದ ಪ್ರತಿಯೊಂದನ್ನು ಅವರಿಗೆ ಕೊಡಿಸುತ್ತಿದ್ದ ಎಂದು ತಿಳಿದುಬಂದಿದೆ. ಇಷ್ಟುದಿನ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ಈತನ ಬಂಧನದಿಂದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News