ಕಾರವಾರ: ಜನವಸತಿ ಪ್ರದೇಶಕ್ಕೆ ಬಂದ ಬೃಹತ್ ಮೊಸಳೆ (Crocodile) ಬಂದು ಆತಂಕ ಸೃಷ್ಟಿಸಿತ್ತು.


COMMERCIAL BREAK
SCROLL TO CONTINUE READING

ನದಿಯಿಂದ ನಾಡಿನೆಡೆಗೆ ಬಂದು ಆತಂಕ ಸೃಷ್ಟಿಸಿದ್ದ ಬೃಹತ್ ಮೊಸಳೆಯೊಂದನ್ನು ಅರಣ್ಯ ಇಲಾಖೆ (Forest) ಸಿಬ್ಬಂದಿ ಹಾಗೂ ಸ್ಥಳೀಯ ಯುವಕರು ಸೆರೆ ಹಿಡಿದು, ಮರಳಿ ನದಿಗೆ ಬಿಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ದೇಶಪಾಂಡೆ ನಗರದ ಕೆಎಸ್‌ಆರ್‌ಟಿಸಿ (KSRTC) ಡಿಪೋ ಬಳಿ ನಡೆದಿದೆ. 


ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ-ಸಿಎಂ ಬೊಮ್ಮಾಯಿ ವಿಶ್ವಾಸ


ಬೆಳ್ಳಂಬೆಳಿಗ್ಗೆ ಪಟ್ಟಣದ ಜನವಸತಿ ಪ್ರದೇಶದತ್ತ ಆಗಮಿಸಿದ್ದ ಬೃಹತ್ ಮೊಸಳೆಯನ್ನು ಕಂಡ ಸ್ಥಳೀಯರು ಆತಂಕಗೊಂಡಿದ್ದು ತಕ್ಷಣ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು. 


ಬಳಿಕ ಸ್ಥಳೀಯ ಯುವಕರು ಹಗ್ಗದ ಸಹಾಯದಿಂದ ಮೊಸಳೆಯ ಬಾಯಿ, ದೇಹವನ್ನು ಬಿಗಿದು ಕಟ್ಟಿ ಹಾಕಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ವಾಹನದ ಮೂಲಕ ಪುನಃ ಕಾಳಿ ನದಿಗೆ (Kali River) ಕೊಂಡೊಯ್ದು ಬಿಟ್ಟಿದ್ದಾರೆ. 


ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ : ರೈತರ ಕಾಯಿದೆ ಬಿಜೆಪಿಗೆ ಮುಳುವಾಯ್ತಾ? ನಳಿನ್ ಕುಮಾರ್ ಪ್ರಶ್ನೆ


ಕಳೆದ ಕೆಲ ದಿನಗಳಿಂದ ದಾಂಡೇಲಿ ನಗರದಲ್ಲಿ ಆಗಾಗ ಮೊಸಳೆಗಳು ಪತ್ತೆಯಾಗುತ್ತಿರುವುದರಿಂದ ಸ್ಥಳೀಯರು ತೀವ್ರ ಆತಂಕಗೊಂಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ‌ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.