Crocodile Fish Viral Video: ಬೇಟೆಯಾಡಿದ ಹಸಿದ ಮೊಸಳೆಗೆ 860 ವೋಲ್ಟ್‌ಗಳ ಶಾಕ್ ನೀಡಿದ ಮೀನು! ವಾಚ್ ವೈರಲ್ ವಿಡಿಯೋ

Crocodile Fish Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚಿಗೆ ಮೊಸಳೆ ಮತ್ತು ಮೀನಿನ ಅಪರೂಪದ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಇದನ್ನು ನೋಡಿದ ನಂತರ ನೀವು ಆಶ್ಚರ್ಯಚಕಿತರಾಗುತ್ತೀರಿ.  

Written by - Yashaswini V | Last Updated : Dec 20, 2021, 10:38 AM IST
  • ಬೇಟೆಯಲ್ಲಿ ಕೆಟ್ಟದಾಗಿ ಸಿಕ್ಕಿಬಿದ್ದ ಮೊಸಳೆ
  • ಮೊಸಳೆಗೆ 860 ವೋಲ್ಟ್ ಶಾಕ್ ನೀಡಿದ ಮೀನು
  • ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
Crocodile Fish Viral Video: ಬೇಟೆಯಾಡಿದ ಹಸಿದ ಮೊಸಳೆಗೆ 860 ವೋಲ್ಟ್‌ಗಳ ಶಾಕ್ ನೀಡಿದ ಮೀನು! ವಾಚ್ ವೈರಲ್ ವಿಡಿಯೋ title=
Crocodile Fish Viral Video

Crocodile Fish Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳು ಹೆಚ್ಚು ಆಕರ್ಷಿಸುತ್ತವೆ. ತಾವೇ ತೋಡಿದ ಹಳ್ಳಕ್ಕೆ ತಾವೇ ಬಿದ್ದರು ಎಂಬಂತೆ ಹಲವು ವೇಳೆ  ಕೆಲವು ಪ್ರಾಣಿಗಳು ಬೇಟೆಯ ಅನ್ವೇಷಣೆಯಲ್ಲಿ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತಹ ಒಂದು ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ, ಅದನ್ನು ನೋಡಿ ನೀವೂ ಸಹ ಒಂದು ಕ್ಷಣ ಅಬ್ಬಾ! ಎಂದು ಬಾಯಿ ಮೇಲೆ ಬೆರಳಿಡುತ್ತೀರಿ. 

ನೀವು ಆಗಾಗ್ಗೆ 440 ವೋಲ್ಟ್‌ಗಳ ಆಘಾತವನ್ನು ಕೇಳಿದ್ದೀರಿ, ಆದರೆ ಯಾವುದೇ ಪ್ರಾಣಿ ಅಥವಾ ಸಸ್ತನಿ ಅದರ ಎರಡು ಪಟ್ಟು ಆಘಾತವನ್ನು ನೀಡುವ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ವಾಸ್ತವವಾಗಿ, ಈಲ್ ಹೆಸರಿನ (Eel Fish) ಮೀನು 860 ವೋಲ್ಟ್‌ಗಳ ಪ್ರವಾಹವನ್ನು ಹೊಂದಿದೆ ಮತ್ತು ಅದನ್ನು ತನ್ನ ರಕ್ಷಣೆಗಾಗಿ ಬಳಸುತ್ತದೆ. 

ಬೇಟೆಯಲ್ಲಿ ಕೆಟ್ಟದಾಗಿ ಸಿಕ್ಕಿಬಿದ್ದ ಮೊಸಳೆ:
ಈಲ್ ಮೀನು (Eel Fish) ತನ್ನ ಜೀವ ಉಳಿಸಲು 860 ವೋಲ್ಟ್ ಕರೆಂಟ್ ಬಳಸಿದಾಗ... ಏನಾಗಬಹುದು ಎಂಬ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವಾಸ್ತವವಾಗಿ, ಹಸಿದ ಮೊಸಳೆಯು (Crocodile) ಬೇಟೆಯಾಡಲು ನದಿಯ ದಡದಲ್ಲಿ ಈಲ್ ಮೀನನ್ನು ಹಿಡಿಯಲು ಬಯಸಿತು, ಬಹಳ ಸಮಯ ಹೊಂಚು ಹಾಕಿ ನಂತರ ಮೊಸಳೆ ನೇರವಾಗಿ ಈಲ್ ಮೀನಿನ ಮೇಲೆ ದಾಳಿ ಮಾಡಿತು. ಮೊಸಳೆಯು ತನ್ನ ದವಡೆಯಿಂದ ಮೀನನ್ನು ಹಿಡಿಯಲು ಅದರ ಬಾಯಿಯಲ್ಲಿ ತುಂಬಿದ ತಕ್ಷಣ, ಈಲ್ 860 ವೋಲ್ಟ್‌ಗಳ ಪ್ರವಾಹವನ್ನು ಬಿಡುಗಡೆ ಮಾಡಿತು. ಇದಾದ ನಂತರ ಕೆಲವು ಸೆಕೆಂಡುಗಳ ಕಾಲ ಕರೆಂಟ್ ನಿಂದಾಗಿ ಮೊಸಳೆ ನರಳುತ್ತಲೇ ಇತ್ತು. ಇಷ್ಟು ರಭಸದ ಪ್ರವಾಹಕ್ಕೆ ಮೊಸಳೆ ಮಾತ್ರವಲ್ಲದೆ ಮೀನು ಕೂಡ ಅದೇ ಸಮಯದಲ್ಲಿ ಸಾವನ್ನಪ್ಪಿದೆ. ಮೀನು ಮೊಸಳ ಎರಡೂ ಒಟ್ಟಿಗೆ ಸಾವನ್ನಪ್ಪಿವೆ.

ಇದನ್ನೂ ಓದಿ-  Snake Viral Video: ಹಾವು ಹಿಡಿಯಲು ಹೋದ ವ್ಯಕ್ತಿಗೆ ಕಚ್ಚಿದ ವಿಷ ನಾಗರ!

ಮೊಸಳೆಗೆ 860 ವೋಲ್ಟ್ ಶಾಕ್ ನೀಡಿದ ಮೀನು:
ಇಂತಹ ಘಟನೆಯನ್ನು ಸ್ಥಳದಲ್ಲೇ ನೋಡುವುದು ಬಹಳ ಅಪರೂಪ. ವ್ಯಕ್ತಿಯೊಬ್ಬ ಘಟನೆಯ ಸಂಪೂರ್ಣ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿಬಿಟ್ಟಿದ್ದಾನೆ. ಜುಬಿನ್ ಅಶ್ರಾ ಎಂಬ ಹೆಸರಿನ ಖಾತೆಯಿಂದ ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. 

भूखे मगरमच्छ ने जैसे दबोचा तो मछली ने मारा 860 वोल्ट का झटका, ऑन द स्पॉट हुआ ऐसा हादसा; देखें Video

ಇದನ್ನೂ ಓದಿ- Viral Video- ಹಿಡಿಯಲು ಬಂದವನ ಗುಂಡಿಗೆಯನ್ನೇ ನಡುಗಿಸಿದ ಕಿಂಗ್ ಕೋಬ್ರಾ! ಹೃದಯ ಸಂಬಂಧಿತ ಕಾಯಿಲೆಯಿರುವವರು ಇದನ್ನು ನೋಡಬೇಡಿ

'ಮೊಸಳೆ ತನ್ನ ದವಡೆಯಲ್ಲಿ ಈಲ್ ಎಂಬ ಮೀನನ್ನು ತುಂಬಿಕೊಳ್ಳುತ್ತದೆ. ಈಲ್ 860 ವೋಲ್ಟ್ ವಿದ್ಯುತ್ ಉತ್ಪಾದಿಸುತ್ತದೆ. ಪರಿಣಾಮವಾಗಿ, ಮೊಸಳೆ ತನ್ನ ದವಡೆಗಳನ್ನು ತೆರೆಯದೆ ಆಘಾತದಿಂದ ಸಾಯುತ್ತದೆ ಮತ್ತು ಈಲ್ ಕೂಡ ದವಡೆಯಲ್ಲಿ ಸಿಕ್ಕಿ ಸಾಯುತ್ತದೆ. ಇಂತಹ ವಿಡಿಯೋಗಳು ಅಪರೂಪಕ್ಕೆ ಕಾಣಸಿಗುತ್ತವೆ ಎಂದು ಅವರು ಈ ಘಟನೆಯ ಕುರಿತು ಬರೆದುಕೊಂಡಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋವನ್ನು 10 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News