CT Ravi: ದೇಶ ತುಂಡು ಮಾಡುವುದು ಹುಚ್ಚುತನ ಎಂದಿದ್ದ ನೆಹರು, ಮೋಸ ಮಾಡಿಲ್ವಾ? : ಸಿಟಿ ರವಿ
ಹಿಜಾಬ್ (Hijab) ವಿಚಾರವನ್ನು ವಿಷ್ಯಾಂತರ ಮಾಡಲು ಕಾಂಗ್ರೆಸ್ ಹೊರಟಿದೆ. ರಾಷ್ಟ್ರಧ್ವಜಕ್ಕೆ ಏನು ಗೌರವ ಕೊಡಬೇಕು ಅದಕ್ಕೆ ಗೌರವ ಕೊಟ್ಟಿದ್ದೇವೆ. ನಮಗೆ ಅಖಂಡ ಭಾರತದ ಅಶಯ ಇದೆ.
ಬೆಂಗಳೂರು: ದೇಶ ವಿಭಜನೆ ಮಾಡುವ ಸಂದರ್ಭದಲ್ಲಿ , ಜವಾಹರಲಾಲ್ ನೆಹರು ವಿಭಜನೆ ಕುರಿತು ಇದು ಹುಚ್ಚುತನ ಎಂದ್ದಿದರು, ಅವರು ಯಾಕೆ ಮೋಸ ಮಾಡಿದರು ಎಂದು ಶಾಸಕ ಸಿಟಿ ರವಿ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಟಿ ರವಿ (CT Ravi), ಅಂದಿನ ಕಾಂಗ್ರೆಸ್ ನಾಯಕರಾದ ಜವಹಾರ್ ಲಾಲ್ ನೆಹರು (Jawaharlal Nehru) ಅವರು ನನ್ನ ದೇಹ ತುಂಡಾದರು, ದೇಶ ತುಂಡಾಗುವುದಕ್ಕೆ ಬಿಡಲ್ಲ. ದೇಶ ತುಂಡುಮಾಡುವ ಬಗ್ಗೆ ಮಾತನಾಡುವರನ್ನು ತುಂಡು ಮಾಡಿ, ದೇಶವನ್ನು ಉಳಿಸುತ್ತೇವೆ ಎಂದು ಸರ್ದಾರ್ ವಲ್ಲಭಯ್ ಪಟೇಲ್ (Sardar Vallabhai Patel) ಹೇಳಿದ್ದರು, ಇವರು ಏಕೆ ಮೋಸ ಮಾಡಿದರು ಎಂದು ಪ್ರಶ್ನಿಸಿದರು.
ಇದನ್ನೂ ಓದಿ- 'ಸಂವಿಧಾನ ವಿರೋಧಿಸುವವರು, ರಾಷ್ಟ್ರಧ್ವಜವನ್ನು ಒಪ್ಪದವರು ಎಂದೂ ದೇಶಪ್ರೇಮಿಯಾಗಲು ಸಾಧ್ಯವಿಲ್ಲ'
ಹಿಜಾಬ್ (Hijab) ವಿಚಾರವನ್ನು ವಿಷ್ಯಾಂತರ ಮಾಡಲು ಕಾಂಗ್ರೆಸ್ ಹೊರಟಿದೆ. ರಾಷ್ಟ್ರಧ್ವಜಕ್ಕೆ ಏನು ಗೌರವ ಕೊಡಬೇಕು ಅದಕ್ಕೆ ಗೌರವ ಕೊಟ್ಟಿದ್ದೇವೆ. ನಮಗೆ ಅಖಂಡ ಭಾರತದ ಅಶಯ ಇದೆ. ರಾಷ್ಟ್ರಧ್ವಜ ಕೆಳಗಿಳಿಸಿ ಭಾಗಧ್ವಜ ಹಾರಿಸಿದ್ರೆ ತಪ್ಪು, ರಾಷ್ಟ್ರಧ್ವಜದ ಕೆಳಗಡೆ ಭಾಗಧ್ವಜ ಹಾರಿಸಿಸಿದ್ರೆ ತಪ್ಪಲ್ಲ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಕಾಂಗ್ರೆಸ್‌ಗೆ ಭಾಗಧ್ವಜ ಕಂಡ್ರೆ ಆಗೋದಿಲ್ಲ ಅದಕ್ಕೆ ಅವರಿಗೆ ಉರಿ.ಅಖಂಡ ಭಾರತ ಅಗಬೇಕು ಅನ್ನೋದು ನಮ್ಮ ಅಶಯ. ಸ್ವತಂತ್ರ ಬಂದ ಮೇಲೆ ತ್ರಿವರ್ಣ ಧ್ವಜ ಬಂದಿದೆ. ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಆದರೆ ಅಖಂಡ ಭಾರತದ ಅಶಯ ನಮಗಿದೆ. ಅಖಂಡ ಭಾರತ ಆಗಬೇಕು ಅಖಂಡ ಭಾರತದದಲ್ಲಿ ತ್ರಿವರ್ಣ ಧ್ವಜ ಹಾರಬೇಕು ಎಂದರು.
ಇದನ್ನೂ ಓದಿ- ಪೀಣ್ಯ ಫ್ಲೈಓವರ್ ಕಳಪೆ ಕಾಮಗಾರಿ : ನಗರದ ಎಲ್ಲಾ ಸೇತುವೆ ಮೌಲ್ಯಮಾಪನಕ್ಕೆ ಕಾಂಗ್ರೆಸ್ ಆಗ್ರಹ
ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಸಮರ್ಥನೆ:
ಕೆ ಎಸ್ ಈಶ್ವರಪ್ಪ (Eshwarappa) ಅವರು ರಾಷ್ಟ್ರ ಧ್ವಜ ತೆಗೆದು ಭಾಗವಧ್ವಜ ಹಾರಿಸ್ತೀವಿ ಎಂದು ಹೇಳಿಲ್ಲ, ಎಲ್ಲಾ ಸಂಘ ಸಂಸ್ಥೆಗಳಿಗೆ ಅದರದ್ದೇ ಆದ ಧ್ವಜಗಳಿವೆ. ಹಾಗಂತ ಅವರ ರಾಷ್ಟ್ರ ಧ್ವಜಕ್ಕೆ ಗೌರವ ಕೊಡೋದು ಬಿಟ್ಟಿದಾರಾ.? ರಾಣಿ ಚೆನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸೋಕೆ ಹೋದವರ ಮೇಲೆ ಗುಂಡು ಹಾರಿಸಿರೋದು ಕಾಂಗ್ರೆಸ್. ಗುಂಡು ಹಾರಿಸಿ 11 ಜನರನ್ನು ಕೊಂದಿದ್ದು ಕಾಂಗ್ರೆಸ್ ಎಂದು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.