ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆಗೆ ಒತ್ತಾಯ, ನಾಳೆಯಿಂದ ಸದನದಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ

ಇಂದು ಉಭಯ ಸದನಗಳಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ವಿರೋಧಿಸಿ ವಿಪಕ್ಷ ಕಾಂಗ್ರೆಸ್ ಪ್ರತಿಭಟನೆ ನಡೆಸಿ, ಇವರನ್ನ ಮಂತ್ರಿಮಂಡಲದಿಂದ ವಜಾಗೊಳಿಸಿ ಮತ್ತು ದೇಶದ್ರೋಹ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದೆ.

Written by - Prashobh Devanahalli | Edited by - Manjunath N | Last Updated : Feb 16, 2022, 08:57 PM IST
  • ಇಂದು ಉಭಯ ಸದನಗಳಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ವಿರೋಧಿಸಿ ವಿಪಕ್ಷ ಕಾಂಗ್ರೆಸ್ ಪ್ರತಿಭಟನೆ ನಡೆಸಿ, ಇವರನ್ನ ಮಂತ್ರಿಮಂಡಲದಿಂದ ವಜಾಗೊಳಿಸಿ ಮತ್ತು ದೇಶದ್ರೋಹ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದೆ.
ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆಗೆ ಒತ್ತಾಯ, ನಾಳೆಯಿಂದ ಸದನದಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ title=

ಬೆಂಗಳೂರು: ಇಂದು ಉಭಯ ಸದನಗಳಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ವಿರೋಧಿಸಿ ವಿಪಕ್ಷ ಕಾಂಗ್ರೆಸ್ ಪ್ರತಿಭಟನೆ ನಡೆಸಿ, ಇವರನ್ನ ಮಂತ್ರಿಮಂಡಲದಿಂದ ವಜಾಗೊಳಿಸಿ ಮತ್ತು ದೇಶದ್ರೋಹ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದೆ.

ಗದ್ದಲ ಹೆಚ್ಚಾಗುತ್ತಿದಂತೆ ವಿಧಾನ ಪರಿಷತ್ ಸಭಾಪತಿ ಹಾಗೂ ವಿಧಾನಸಭೆ ಸ್ಪೀಕರ್ ಕಲಾಪವನ್ನ ನಾಳೆ ಬೆಳಿಗ್ಗೆ 10:30 (ಪರಿಷತ್), 11ಕ್ಕೆ (ವಿಧಾನಸಭೆ) ಮುಂದೂಡಿದರು. ಬೆಳಗಿನ ವಿಧಾನ ಸಭೆಯ ಕಲಾಪದಲ್ಲಿ ಸಂತಾಪ ಸೂಚಿಸಿ ಕೆಲ ಪ್ರಶ್ನೋತ್ತರ ಆಲಿಸಿತು, ನಂತರ ಕಾಂಗ್ರೆಸ್ ನ ನಿಲುವಳಿ ಸೂಚನೆಯ ಪ್ರಾಥಮಿಕ ಮಂಡನೆಯನ್ನು ಕೈಗೆಟ್ಟುಕೊಂಡ ಸ್ಪೀಕರ್ ಕಾಗೇರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು.

ಇದನ್ನೂ ಓದಿ: Karnataka Hijab row: "ಪ್ರತಿಭಟನೆ ಮುಂದುವರಿದರೆ ಕಠಿಣ ಕ್ರಮ"- ಗೃಹ ಸಚಿವರ ಎಚ್ಚರಿಕೆ

ಇದೆ ವೇಳೆ ಸಿದ್ಧರಾಮಯ್ಯ ಮಾತನಾಡಿ 'ರಾಷ್ಟ್ರ ಧ್ವಜದ ಬಗ್ಗೆ ಸಾಕಷ್ಟು ಇತಿಹಾಸ ಇದೆ, ಸಂವಿಧಾನ,ರಾಷ್ಟ್ರಧ್ವಜ, ರಾಷ್ಟ್ರಗೀತೆ ವಿಚಾರಗಳಲ್ಲಿ ಯಾರು ಅಪಮಾನ ಮಾಡಬಾರದು.ಇವೆಲ್ಲವೂ ನಮ್ಮ ಅಸ್ತಿತ್ವದ ಪ್ರಶ್ನೆಯಾಗಿರುತ್ತದೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದರೆ ಕಾನೂನು ಅಡಿಯಲ್ಲಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಬಹುದು. ಹೀಗಾಗಿ ಕೂಡಲೇ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಮಂತ್ರಿಮಂಡಲದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು,

ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಸಿಟಿ ರವಿ ಮಾತನಾಡಿ, ಕೈಯಲ್ಲಿ ಬಂದೂಕು ಕೊಟ್ಟು ಕಾಶ್ಮೀರದಲ್ಲಿ ಬಾವುಟ ಹಾರಿಸಬೇಡಿ ಎಂದಾಗ ಬಿಜೆಪಿಯವರು ತ್ರಿವರ್ಣ ಧ್ವಜವನ್ನು ಹಾರಿಸಿದ್ದು ದಾಖಲೆ ಇದೆ ಎಂದರು.

ಇನ್ನೊಂದೆಡೆಗೆ ಸಚಿವ ಕೆ ಎಸ್ ಈಶ್ವರಪ್ಪ ಅವರ ಬೆಂಬಲಕ್ಕೆ ಬಂದ ಜೆ ಸಿ ಮಾಧುಸ್ವಾಮಿ, ಹುಬ್ಬಳ್ಳಿಯಿಂದ ಕಾಶ್ಮೀರದವರೆಗೆ ಬಾವುಟ ಹಾರಿಸಿದ ಪಕ್ಷ ಬಿಜೆಪಿ. ಈಶ್ವರಪ್ಪ ಹೇಗೆ ದೇಶ ದ್ರೋಹಿ ಆಗ್ತಾರೆ…? ಅವರು ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಅಷ್ಟೇ. ಇದು ನಿಲುವಳಿ ಸೂಚನೆ ವ್ಯಾಪ್ತಿಗೆ ಬರಲ್ಲ, ಆದ್ದರಿಂದ ಇದನ್ನು ತಿರಸ್ಕಾರ ಮಾಡಿ ಎಂದು ಮನವಿ ಮಾಡಿದರು.ಮಾಧುಸ್ವಾಮಿ ಮಾತಿಗೆ ಕಾಂಗ್ರೆಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದರು. ಆಗ ಸದನದಲ್ಲಿ ಗದ್ದಲ ಉಂಟಾಯಿತು.

ಇದನ್ನೂ ಓದಿ: DK Shivakumar vs KS Eshwarappa: ಏಕವಚನದಲ್ಲಿ ಬೈದಾಡಿಕೊಂಡ ಡಿಕೆಶಿ ಮತ್ತು ಈಶ್ವರಪ್ಪ

ಡಿಕೆಶಿ vs ಕೆ ಎಸ್ ಈಶ್ವರಪ್ಪ ಫೈಟ್:

ಕಲಾಪದ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಬಳಿ ಬಂದು (ಈಶ್ವರಪ್ಪ) ಅವರನ್ನ ಮಾತನಾಡಲು ಬಿಡಬೇಡಿ ಎಂದರು. ಅಲ್ಲಿಯವರೆಗೆ ಸುಮ್ಮನೆ ಆಸಿನರಾಗಿದ್ದ ಈಶ್ವರಪ್ಪ ಕೆಂಡಾಮಂಡಲರಾಗಿ, ನೀನು ಇನ್ನು ಬೈಲ್ ನಲ್ಲಿ ಇದ್ಯಾ, ಯಾವಾಗ ಬೇಕಾದ್ರೂ ಜೈಲಿಗೆ ಹೋಗಬಹುದು, ಎಂದು ಏಕವಚನದಲ್ಲೇ ಮಾತನಾಡಿದರು.ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಡಿಕೆ ಶಿವಕುಮಾರ್ ಏನು ಮಾಡುವುದಕ್ಕೆ ಆಗಲ್ಲ ಎಂದರು.ಈಶ್ವರಪ್ಪಗೆ ದೇಶದ್ರೋಹಿ ಎಂದು  ಅವರು ಸಂಬೋಧಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ನಿಮ್ಮಪ್ಪ ದೇಶದ್ರೋಹಿ ಎಂದರು.

ಗದ್ದಲ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಸ್ಪೀಕರ್ ಕಾಗೇರಿ ಈಗ ಮಾತನಾಡುತ್ತಿರುವ ಯಾವ ಹೇಳಿಕೆಗಳು ಕಡತಕ್ಕೆ ಹೋಗುವುದಿಲ್ಲ ಹಾಗೂ ಅಧಿವೇಶನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.ಆದರೆ ಕಲಾಪವನ್ನು ಮುಂದೂಡಿದರೂ ಸಹ ವಿಧಾನಸಭೆಯಲ್ಲಿ ಗದ್ದಲ ಮಾತ್ರ ತಿಳಿಯಾಗಲಿಲ್ಲ, ಈ ಸಂದರ್ಭದಲ್ಲಿ ಗದ್ದಲ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಆಕ್ರೋಶಗೊಂಡ ಡಿಕೆಶಿನವರು ಈಶ್ವರಪ್ಪ ಕುಳಿತುಕೊಳ್ಳುವ ಸ್ಥಳಕ್ಕೆ ಧಾವಿಸಿದರು. ಈ‌ ಹಂತದಲ್ಲಿ ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ನಂತರ ಮಾರ್ಷಲ್ ಗಳು ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು.

ಇದನ್ನೂ ಓದಿ: ಕೊತ್ವಾಲ್ ಶಿಷ್ಯನೆಂಬ ಮಾತ್ರಕ್ಕೆ ಸದನದಲ್ಲೂ ಅದೇ ರೀತಿ ವರ್ತಿಸುವುದು ತರವೇ?: ಡಿಕೆಶಿಗೆ ಬಿಜೆಪಿ ಪ್ರಶ್ನೆ

3:00 ಗಂಟೆಗೆ ವಿಧಾನಸಭೆ ಕಲಾಪ ಪ್ರಾರಂಭವಾಗುವ ಮುನ್ನ ಸ್ಪೀಕರ್ ಅಧ್ಯಕ್ಷತೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆ ಉಪನಾಯಕ ಯುಟಿ ಖಾದರ್ ಸಮ್ಮುಖದಲ್ಲಿ ಸಂಧಾನ ಸಭೆಯನ್ನು ನಡೆಸಲಾಯಿತು. ಸಂಧಾನ ಸಭೆ ಹೊರತಾಗಿಯೂ ಕೂಡ ಕಲಾಪವೂ ಗದ್ದಲದ ಗೂಡಾಗಿತ್ತು,

ಕಲಾಪಕ್ಕೆ ಪ್ರತಿಭಟನೆ ಮಾಡುವ ಪೂರ್ವ ತಯಾರಿಯಲ್ಲಿ ಬಂದಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರು, ಸದನದ ಬಾವಿಗಿಳಿದು ರಾಷ್ಟ್ರಧ್ವಜ ಪ್ರದರ್ಶನ ಮಾಡುವ ಮೂಲಕ ಸಚಿವ ಕೆ ಎಸ್ ಈಶ್ವರಪ್ಪ ಅವರ ರಾಜೀನಾಮೆ ಮತ್ತು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವುದಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಷ್ಟ್ರಧ್ವಜ ಹೇಗೆ ಬಳಸಬೇಕು ಅಂತ ನೀತಿ ಸಂಹಿತೆ ಇದೆ, ಈ ರೀತಿಯಲ್ಲಿ ಧ್ವಜ ಬಳಸುವುದು ಧ್ವಜ ಸಂಹಿತೆ ಉಲ್ಲಂಘನೆ ಆಗಲಿದೆ.ರಾಷ್ಟ್ರಧ್ವಜಕ್ಕೆ ಎಂದೂ ಇವರು ಗೌರವ ಕೊಟ್ಟಿಲ್ಲ, ಹುಬ್ಬಳ್ಳಿಯಲ್ಲಿ ಆರು ಜನರನ್ನ ಕೊಲೆ ಮಾಡಿದ್ದಾರೆ.ಗೋಲಿಬಾರ್ ಮಾಡಿ ಕಗ್ಗೋಲೆ ಮಾಡಿದ್ದಾರೆ ಎಂದರು.

ಇದೆ ವೇಳೆ ಸ್ಪೀಕರ್ ಕಾಗೇರಿ ಮಧ್ಯಪ್ರವೇಶಿಸಿ ಕಾಂಗ್ರೆಸ್ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದರು.ಕಲಾಪ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾಳೆಯವರೆಗೆ ಕಾಯ್ದು ನೊಡುತ್ತೇವೆ.ಸಚಿವ ಸ್ಥಾನದಿಂದ ವಜಾ ಮಾಡ್ತಾರ ಇಲ್ಲವೋ ನಾವು ನೊಡ್ತೆವೆ, ಒಂದು ವೇಳೆ ವಜಾ ಮಾಡದೆ ಹೊದ್ರೆ ಮುಂದಿನ ತೀರ್ಮಾನ ಮಾಡ್ತೆವೆ.ಅಹೋರಾತ್ರಿ ಧರಣಿ ಮಾಡುವ ಚಿಂತನೆ ಇದೆ, ನಾಳೆಯ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ: ಸಂಪುಟದಿಂದ ಈಶ್ವರಪ್ಪರನ್ನು ಕೈಬಿಡುವಂತೆ ಸಿದ್ದರಾಮಯ್ಯ ಆಗ್ರಹ

ಈಶ್ವರಪ್ಪ ಹಿಂದೆ ಆರ್, ಎಸ್, ಎಸ್ ಬೆಂಬಲ ಇದೆ, ಪಾಪ ಬೊಮ್ಮಾಯಿ ಅಲ್ಲಿ ಸಿಕ್ಕಾಕಿಕೊಂಡಿದ್ದಾರೆ.ಹಾಗಾಗಿ ವಜಾ ಮಾಡಲು ಸಿಎಂ ಬೊಮ್ಮಾಯಿ ಅವರಿಗೆ ಆಗುತಿಲ್ಲ.ನಾಳೆ ಧರಣಿ ಮಾಡುವ ಬಗ್ಗೆ ನಿರ್ಧಾಕ್ಕೆ ಬರ್ತೇವೆ.ಕ್ಷಮೆ ಕೇಳಿದ್ರೂ ಬಿಡುವ ಪ್ರಶ್ನೇಯೆ ಇಲ್ಲ, ಮರ್ಡರ್ ಮಾಡಿ ಕ್ಷಮೆ ಕೇಳಿದ್ರೆ ಬಿಡ್ತಾರ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಒಟ್ಟಾರೆ ನಾಳೆಯೂ ಉಭಯ ಸದನಗಳಲ್ಲಿ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆ ಕುರಿತಾಗಿ ಪ್ರತಿಭಟನೆ ನಡೆಸಲು ವಿಪಕ್ಷ ಕಾಂಗ್ರೆಸ್ ಪೂರ್ವ ತಯಾರಿ ನಡೆಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News