ಪಾರಿವಾಳ ಹಿಡಿಯಲೋದ ಮಕ್ಕಳಿಗೆ ಕರೆಂಟ್ ಶಾಕ್ - ಇಬ್ಬರು ಬಾಲಕರ ಸ್ಥಿತಿ ಚಿಂತಾಜನಕ
ಬೆಂಗಳೂರಿನ ನಂದಿನಿ ಲೇಔಟ್ ವಿಜಯಾನಂದ ನಗರದಲ್ಲಿ ನಿನ್ನೆ ಸಂಜೆ 6:30 ರ ಸುಮಾರಿಗೆ ಚಂದ್ರು(10), ಸುಪ್ರೀತ್ (12) ಎಂಬ ಮಕ್ಕಳು ಹೈಟೆನ್ಷನ್ ವೈರ್ ಮೇಲೆ ಕುಳಿತಿದ್ದ ಪಾರಿವಾಳನ್ನು ಹಿಡಿಯೋಕೆ ಹೋಗಿದ್ದ ಸಂದರ್ಭದಲ್ಲಿ ಹೈಟೆನ್ಷನ್ ತಂತಿ ತಗುಲಿದ ಪರಿಣಾಮ ಕರೆಂಟ್ ಶಾಕ್ ಹೊಡೆದಿದ್ದು, ಇಬ್ಬರೂ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು: ಪಾರಿವಾಳ ಹಿಡಿಯಲೆಂದು ಹೋದ ಮಕ್ಕಳಿಗೆ ಹೈಟೆನ್ಷನ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದಿದೆ. ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನಂದಿನಿ ಲೇಔಟ್ ವಿಜಯಾನಂದ ನಗರದಲ್ಲಿ ನಿನ್ನೆ (ಗುರುವಾರ, 01 ಡಿಸೆಂಬರ್ 2022) ಈ ದುರ್ಘಟನೆ ನಡೆದಿದೆ.
ಬೆಂಗಳೂರಿನ ನಂದಿನಿ ಲೇಔಟ್ ವಿಜಯಾನಂದ ನಗರದಲ್ಲಿ ನಿನ್ನೆ ಸಂಜೆ 6:30 ರ ಸುಮಾರಿಗೆ ಚಂದ್ರು(10), ಸುಪ್ರೀತ್ (12) ಎಂಬ ಮಕ್ಕಳು ಹೈಟೆನ್ಷನ್ ವೈರ್ ಮೇಲೆ ಕುಳಿತಿದ್ದ ಪಾರಿವಾಳನ್ನು ಹಿಡಿಯೋಕೆ ಹೋಗಿದ್ದ ಸಂದರ್ಭದಲ್ಲಿ ಹೈಟೆನ್ಷನ್ ತಂತಿ ತಗುಲಿದ ಪರಿಣಾಮ ಕರೆಂಟ್ ಶಾಕ್ ಹೊಡೆದಿದ್ದು, ಇಬ್ಬರೂ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ- ಚಿರತೆ ದಾಳಿಗೆ ಮತ್ತೊಂದು ಬಲಿ!!
ಕರೆಂಟ್ ಶಾಕ್ ನಿಂದಾಗಿ ಚಂದ್ರು ಮತ್ತು ಸುಪ್ರೀತ್ ಎಂಬ ಇಬ್ಬರೂ ಬಾಲಕರ ಮೈಯೆಲ್ಲಾ ಸುಟ್ಟು ಹೋಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಗಂಭೀರಸ್ಥಿತಿಯಲ್ಲಿರುವ ಇಬ್ಬರೂ ಬಾಲಕರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಫೇಸ್ ಬುಕ್ ನಲ್ಲಿ ಮಾಯಾಂಗಣೆಯ ಬೆನ್ನತ್ತಿದ ಯುವಕನಿಗೆ 40 ಲಕ್ಷ ರೂ ಪಂಗನಾಮ..!
ಬಾಲಕರ ಚಿಕಿತ್ಸೆಗೆ ಸಚಿವರ ಸಹಾಯ ಹಸ್ತ:
ಕರೆಂಟ್ ಶಾಕ್ ನಿಂದಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಮಕ್ಕಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಚಿವ ಗೋಪಾಲಯ್ಯ, ಮಕ್ಕಳ ಚಿಕಿತ್ಸೆಗೆ ಬೇಕಾದ ಅಗತ್ಯ ನೆರವು ಒದಗಿಸುವುದಾಗಿ ಪೋಷಕರಿಗೆ ಭರವಸೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.