ಫೇಸ್ ಬುಕ್ ನಲ್ಲಿ ಮಾಯಾಂಗಣೆಯ ಬೆನ್ನತ್ತಿದ ಯುವಕನಿಗೆ 40 ಲಕ್ಷ ರೂ ಪಂಗನಾಮ..!

ತಾನು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ ಹಣದ ಅವಶ್ಯಕತೆ ಇದೆ ಮುಂದೆ ನಾನು ಡಿಸಿ ಆಗುವೆ ಎಂದೆಲ್ಲ ಈತನಿಗೆ ಹೇಳಿ ಬರೊಬ್ಬರಿ 40 ಲಕ್ಷದಷ್ಟು ಹಣ ದೋಚಿದ್ದಾಳೆ.

Written by - Zee Kannada News Desk | Last Updated : Dec 1, 2022, 06:57 PM IST
  • ಕೊನೆಗೂ ಅಂದರ ಆದ ಮಾಯಾಂಗನಿ
  • ಫೆಸ್ ಬುಕ್ ಮೂಲಕ‌ ಪರಿಚಯವಾಗಿ ಲಕ್ಷಾಂತರ ಹಣ ವಂಚಿಸಿದ ಫೇಸ್ ಬುಕ್ ಗೆಳತಿ‌ ಕೊನೆಗೂ ಅಂದರ,
  • ಫೇಸ್ ಬುಕ್ ಗೆಳತಿಗೆ ವಂಚಿಸಲು ಸಾಥ್ ನೀಡಿದ್ದು ಆಕೆಯ ಗಂಡನೇ...
ಫೇಸ್ ಬುಕ್ ನಲ್ಲಿ ಮಾಯಾಂಗಣೆಯ ಬೆನ್ನತ್ತಿದ ಯುವಕನಿಗೆ 40 ಲಕ್ಷ ರೂ ಪಂಗನಾಮ..! title=

ವಿಜಯಪುರ  : ಅವಳು ಆತನಿಗೆ‌ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದಳು, ಅವಳ ಫೇಸ್ ಬುಕ್ ಪೊಟೋ ನೋಡಿ ಅವಳೊಂದಿಗೆ ಮುಂದೆ ಚಾಟಿಂಗ್ ಮಾಡಲು ಕೂಡಾ ಆರಂಭಿಸಿದ. ಇವರ ಚಾಟಿಂಗ್ ಎಷ್ಟರ ಮಟ್ಟಿಗೆ ಮುಂದುವರೆಯಿತು ಎಂದರೆ ಮದುವೆಯಾಗುವ ಹಂತಕ್ಕೂ ಹೋಯಿತು. ತಾನು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ ಹಣದ ಅವಶ್ಯಕತೆ ಇದೆ ಮುಂದೆ ನಾನು ಡಿಸಿ ಆಗುವೆ ಎಂದೆಲ್ಲ ಈತನಿಗೆ ಹೇಳಿ ಬರೊಬ್ಬರಿ 40 ಲಕ್ಷದಷ್ಟು ಹಣ ದೋಚಿದ್ದಾಳೆ.

ಬಳಿಕ ಈತನ ಬೆತ್ತಲೆ ಸ್ನಾನ ಮಾಡುವ ವಿಡಿಯೋ, ವಿಡಿಯೋ ಕಾಲ್ ಮೂಲಕ‌ ರಿಕಾರ್ಡ  ಮಾಡಿಕೊಂಡು ಮತ್ತಷ್ಟು ಹಣಕ್ಕೆ ಬ್ಲ್ಯಾಕ್ ಮೆಲ್ ಮಾಡಲು ಆರಂಭಿಸಿದಳು. ಕೊನೆಗೂ ಯುವಕ ಪೋಲಿಸ್ ಠಾಣೆ ಮೆಟ್ಟಿಲೇರಿದ ಪರಿಣಾಮ ಬೆಳದಿಂಗಳ ಬಾಲೆ ಅಂದರ್ ಆಗಿದ್ದಾಳೆ. ಇನ್ನೂ ಇವಳ ಇಷ್ಟೆಲ್ಲ ಆಟಕ್ಕೆ ಸಪೋರ್ಟ ಮಾಡಿದ್ದು ಸ್ವತಃ ಆಕೆಯ ಗಂಡ ಎಂಬುದು ವಿಶೇಷ ಏನಿದು ಪ್ರಕಟಣ ಎಂಬುದರ ಕುರಿತು ಕಂಪ್ಲೀಟ್ ‌ಡಿಟೇಲ್ಸ ಇಲ್ಲಿದೆ ನೋಡಿ...

ಇದನ್ನೂ ಓದಿ : Rahul Dravid-Rohit Sharma Meeting: ದ್ರಾವಿಡ್- ರೋಹಿತ್ ಶರ್ಮಾಗೆ ಬಿಸಿಸಿಐ ಬಿಗ್ ರಿಲೀಫ್! ಸಭೆ ಮುಂದೂಡಿದ ಮಂಡಳಿ

ಹೌದು‌, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕನ ಪರಶುರಾಮ‌ ಎಂಬಾತ ಹೈದ್ರಾಬಾದ್ ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದ ಅವನಿಗೆ 30 ಸಾವಿರ ಸಂಬಳ ಬರುತ್ತಿತ್ತು. ಆತ ಮನಸಾರೆ ಪ್ರೀತಿಸುತ್ತಿದ್ದ ಹುಡುಗಿ ಕೇಂದ್ರ ಸರಕಾರದ ಪರೀಕ್ಷೆಗೆ ತಯಾರಿ ನಡೆಸಿದ್ದರಿಂದ ಡಿಸಿ ಆಗುತ್ತಾಳೆ ಎನ್ನುವ ಕನಸು ಕಂಡಿದ್ದ. ಆದರೆ ಆ ಕನಸು ಬಹುದೊಡ್ಡ ದೋಖಾ ತಂದೊಡ್ಡಿದೆ. ಆನ್ಲೈನ್ ನಲ್ಲಿ ಪರಿಚಯವಾಗಿದ್ದ ಹಾಸನ ಮೂಲದ ಹುಡುಗಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕ ಪರಶುರಾಮ ನಡುವೆ ಸಲುಗೆ ಬೆಳೆದಿತ್ತು. ಈ ಸಲುಗೆ ಪ್ರೀತಿಗೆ ತಿರುಗಿತ್ತು. ಇಬ್ಬರೂ ಒಬ್ಬರನೊಬ್ಬರು ನೋಡದೆಯೇ  ಮನಸಾರೆ ಪ್ರೀತಿಸುತ್ತಿದ್ದರು. ಅವಳ ಫೇಸ್ ಬುಕ್ ಡಿಪಿ ನೋಡಿ ಮಾರುಹೋಗಿದ್ದ ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ನಗದು ಹಣ, ಒಂದು ಪ್ಲಾಟ್ ಸೇರಿದಂತೆ ಅವಳ ಓದಿಗಾಗಿ ಎಲ್ಲವನ್ನು ಮಾರಿ ಹಣ ಕಳಿಸುತ್ತಿದ್ದ. ಆದರೆ ಸುಮಾರು  40 ಲಕ್ಷ ದಷ್ಟು ‌ಹಣ ಕಳಿಸಿದರೂ ಅವಳಿಗೆ ಆತ ಬೇಟಿ ಆಗಿರಲಿಲ್ಲ, ಮತ್ತೆ ಹಣ ಕೇಳಲು ಮುಂದಾದ ಆಕೆ ಈತ ಸ್ನಾನ ಮಾಡುವ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿ ಅದನ್ನು ರಿಕಾರ್ಡ ಮಾಡಿಕೊಂಡು ಮತ್ತೆ ಹಣಕ್ಕೆ ಆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೆಲ್ ಮಾಡಲು ಮುಂದಾದಳು. ಇದರಿಂದ ರೋಸಿ ಹೋದ ಯುವಕ ತನಗೆ ಆಗಿರುವ ಮೋಸದ ಕುರಿತು ದಿನಾಂಕ 15.11.2022 ರಂದು ದೂರು ಸಿಂದಗಿ ಠಾಣೆಯಲ್ಲಿ ದೂರು‌ ನೀಡಿದ. ಅದರಲ್ಲಿ ಅವನಿಗಾದ ಮೋಸದ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. ಮೋಸ ಹೋಗಿರುವ ಯುವಕ ತನ್ನ ಮೊಬೈಲ್ ಮೂಲಕ ತನ್ನ ಅಕೌಂಟ್ ನಿಂದ ಫೋನ್ ಪೇ ಮಾಡಿರುವುದಾಗಿ ದೂರು ನೀಡಿದ್ದ.

ಇದನ್ನೂ ಓದಿ : Notice to Roger Binny: ಬಿಸಿಸಿಐ ಮುಖ್ಯಸ್ಥ ರೋಜರ್ ಬಿನ್ನಿಗೆ ನೋಟಿಸ್ ಜಾರಿ: ಇದಕ್ಕೆ ಸೊಸೆ ಮಯಾಂತಿಯೇ ಕಾರಣ!!

ಮೋಸ ಹೋದ ಯುವಕ ನೀಡಿರುವ ದೂರಿನ ಪ್ರಕಾರ, ಜೂನ್ ತಿಂಗಳ 29 ರಂದು ಈ ಯುವಕನಿಗೆ, Manjula.K.R ಎಂಬ ಪೇಸ್ ಬುಕ್ ಐಡಿಯಿಂದ ಪ್ರೇಂಡ ರಿಸ್ಟ್ ಬಂದಿರುತ್ತದೆ. ಆಗ ಈ ಯುವಕ ರಿಕ್ವೆಸ್ಟ್ ಅನ್ನು Confirm ಮಾಡುತ್ತಾನೆ. ನಂತರ ಮೆಸೆಂಜರ್ ನಲ್ಲಿ Hi ಅಂತಾ ಮೆಸೇಜ್ ಮಾಡಿ, ಇಬ್ಬರ ನಡುವೆ ಫೇಸ್ ಬುಕ್ ಮೂಲಕ ಸಂಪರ್ಕ್ ಬೆಳೆಯುತ್ತದೆ.  ಇದನ್ನೇ ಉಪಯೋಗಿಸಿಕೊಂಡ  ಆ ಯುವತಿ, ನಮ್ಮ ತಾಯಿಗೆ ಆರೋಗ್ಯ ಸರಿ ಇಲ್ಲ, ಅದಕ್ಕೆ 700/- ರೂ ಫೋನ್ ಪೇ ಮಾಡಿ ಅಂತಾ ಮನವಿ ಮಾಡುತ್ತಾಳೆ. ಇದಕ್ಕೆ ಕರಗಿದ ಆತನ ಹೃದಯ ಫೋನ್ ಪೇ ಮಾಡುವಂತೆ ಮಾಡುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಆ ಮಹಿಳೆ ಪದೇ ಪದೇ ಫೋನ್ ಪೇ ಮಾಡಿ, ಯುಪಿಎಸ್ಸಿ ಪರೀಕ್ಷೆ ಬರೆಯುತ್ತಿದ್ದು ಹಣ ನೀಡುವಂತೆ ಕೇಳುತ್ತಿರುತ್ತಾಳೆ. ಅದನ್ನೇ ನಂಬಿದ ಈ ಯುವಕ ಇಲ್ಲಿಯವರೆಗೆ ಸುಮಾರು 40 ಲಕ್ಷಕ್ಕೂ‌ ಅಧಿಕ ಹಣ ಅವಳಿಗೆ ಕಳಿಸಿದ್ದಾನೆ. ಅದೂ ಕೂಡಾ ಒಂದು ದಿನವೂ ಅವಳ ಮುಖ ನೋಡಿಲ್ಲ, ಕನಿಷ್ಠ ಪಕ್ಷ ಒಂದು ವಿಡಿಯೋ ಕಾಲ್ ಕೂಡಾ ಮಾಡಿಲ್ಲ. ಮುಖವನ್ನೂ ಕೂಡಾ ಒಬ್ಬರನೊಬ್ಬರು ನೋಡಿಲ್ಲ ಎನ್ನುವುದೇ ಆಶ್ಚರ್ಯ. ಯಾವಾಗ ಈತನಿಗೆ ಆಕೆ ಬ್ಲ್ಯಾಕ್ ಮಾಡಲು ಮುಂದಾದಳೋ ಆಗ ಈತ ದೂರು ನೀಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ ಪಿ ಆನಂದಕುಮಾರ ವಿಶೇಷ ತಂಡವೊಂದನ್ನು ರಚಿಸಿ ಆರೋಪಿ ಮಂಜುಳಾನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಾಸರಳ್ಳಿ ಗ್ರಾಮದಿಂದ ಕರೆ ತಂದಿದ್ದಾರೆ. ಪೋಲಿಸರ ಬಂದ ಮಾಹಿತಿ ತಿಳಿದ ಮಂಜುಳಾ ಗಂಡ ಎಸ್ಕೇಪ್ ಆಗಿದ್ದಾನೆ. ಇನ್ನೂ ಈ ಮಂಜುಳಾಗೆ ಮಕ್ಕಳು ಸಹ ಇವೆ, ಇವಳು ತಾನು ಫೇಸ್ ಬುಲ್ ನಲ್ಲಿ‌ ಹಾಕಿದ ಪೊಟೋ ಬೆರೇನೇ ಇದೆ ಇವಳ ನಿಜವಾದ ಪೊಟೋ ಬೆರೆಯೇ ಇದೆ. ಹೀಗೆ‌ ಅಂದವಾದ ಮಾಡಲ್ ಗಳ ಪೊಟೋ ಹಾಕಿಕೊಂಡು ಈ ಯುವಕನಿಗೆ ಈಕೆ ವಂಚಿಸಿ ಪೋಲಿಸರ ಅತಿಥಿಯಾಗಿದ್ದಾಳೆ. ಇದೇ ರೀತಿ ಬೇರೆ ಯಾರಿಗಾದರು ವಂಚಿಸಿದ್ದಾಳಾ ಎಂಬುದರ ಕುರಿತು ಪೋಲಿಸರ ತನಿಖೆ ಆರಂಭಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News