ಬೆಂಗಳೂರು: ಅಸಾನಿ ಚಂಡಮಾರುತದ ಪರಿಣಾಮದಿಂದ ರಾಜಧಾನಿಯಲ್ಲಿ ಬೇಸಿಗೆಯ ಸಮಯದಲ್ಲಿ ಮೈ ಕೊರೆಯುವ ಚಳಿಯ ಅನುಭವ ಉಂಟಾಗುತ್ತಿದೆ. ಇದಕ್ಕೆ ಕಾರಣ ಗರಿಷ್ಠ ಉಷ್ಣಾಂಶ ಅತ್ಯಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದೆ. ಇಂದು ನಗರದಲ್ಲಿ ಗರಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Arecanut Today Price: ವಾಣಿಜ್ಯ ಬೆಳೆ ಅಡಿಕೆಯ ಇಂದಿನ ಪೇಟೆ ಧಾರಣೆ


ವಾತಾವರಣದಲ್ಲಿ 50 ವರ್ಷಗಳ ದಾಖಲೆಯ ಅತ್ಯಂತ ಕಡಿಮೆ ಉಷ್ಣಾಂಶ ಇದಾಗಿದೆ. 1972ರ ನಂತರ ಇದೇ ಮೊದಲು ಇಷ್ಟು ಪ್ರಮಾಣದ ಚಳಿ ವಾತಾವರಣ ಇದ್ದು, ಇದು ಸಾಮಾನ್ಯಕ್ಕಿಂತ 10 ಡಿಗ್ರಿ ಕಡಿಮೆ ಉಷ್ಣಾಂಶ ಎಂದು ಹವಾಮಾನ ಇಲಾಖೆಯ ತಜ್ಞರಾದ ಸದಾನಂದ ಅಡಿಗ ತಿಳಿಸಿದ್ದಾರೆ. 


ಬೆಂಗಳೂರಲ್ಲಿ ನಾಳೆಯೂ ಮಳೆ: ಇಂದು ಮತ್ತು ನಾಳೆಯೂ ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಗುಡುಗು ಸಹಿತ ಮಳೆಯಾಗಲಿದೆ ಎಂದಿದ್ದಾರೆ. 


ಮೇ 17 ರ ನಂತರ ಮತ್ತೆ ಮಳೆ : ಇಂದು ಮತ್ತು ನಾಳೆಯೂ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಪಶ್ಚಿಮ ಘಟ್ಟದ ಜಿಲ್ಲೆಗಳಿಗೆ ಭಾರೀ ಮಳೆಯ ಮುನ್ಸೂಚನೆ ಇದ್ದು, ಗುಡುಗು ಹಾಗೂ ಸಿಡಿಲಿನ ಮುನ್ನೆಚ್ಚರಿಕೆ ನೀಡಲಾಗಿದೆ.  ಮೇ 15 ,16 ರಂದು ಹಲವೆಡೆ ಮಳೆಯಾಗುವ ಸಾಧ್ಯತೆ ಇದ್ದು, ಮೇ 17 ರಂದು ಮಳೆ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದಿದ್ದಾರೆ. 


​ಇದನ್ನು ಓದಿ: Coffee Side Effects: ಕಾಫಿ ಪ್ರಿಯರೇ... ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿದ್ರೆ ಅಪಾಯ ಕಟ್ಟಿಟ್ಟ


ಈ ಬಾರಿ ಮುಂಗಾರು ಬೇಗ ಪ್ರವೇಶ: 
ಮುಂಗಾರು ಮಾರುತವು ದಕ್ಷಿಣ ಅಂಡಮಾನ್ ಸಮುದ್ರ ಹಾಗೂ ಆಗ್ನೇಯ ಬಂಗಾಳ ಕೊಲ್ಲಿಯತ್ತ ಮೇ 15 ನೇ ತಾರೀಕಿನ ವೇಳೆಗೆ ಪ್ರವೇಶಿಸುವ ಸಾಧ್ಯತೆ ಎಂದು ಹವಾಮಾನ ವರದಿ ತಿಳಿಸಿದ್ದು, ಆ ಪ್ರಕಾರ ದೇಶಕ್ಕೆ ಮುಂಗಾರು ಈ ವರ್ಷ ನಾಲ್ಕೈದು ದಿನ ಬೇಗ ಪ್ರವೇಶಿಸುವ ಸಾಧ್ಯತೆ ಇದ್ದು, ಮೇ 25 ರ ನಂತರದಲ್ಲೇ ಮಳೆಗಾಲ ಆರಂಭವಾಗುವ ಸಾಧ್ಯತೆ ಇದೆ ಎಂದಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.