Cyclone Effect : ಚಂಡಮಾರುತ ಚಲನೆ ಇಂದಿನಿಂದ ಮೇ 6 ರವರೆಗೆ ರಾಜ್ಯದಲ್ಲಿ ಭಾರೀ ಮಳೆ..!
ಕೇರಳ ಮತ್ತು ದಕ್ಷಿಣ ಕನ್ನಡದ ಭಾಗಗಳಲ್ಲಿ ಇಂದಿನಿಂದ ಮೇ 6 ರವರೆಗೆ ಭಾರೀ ಮಳೆ
ಬೆಂಗಳೂರು : ವಾಯುವ್ಯ ಮಧ್ಯಪ್ರದೇಶದ ಮೇಲೆ ಚಂಡಮಾರುತದ ಚಲನೆಯಿರುವ ಹಿನ್ನೆಲೆ, ಮೇ 6 ರವರೆಗೆ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ.
ಕೇರಳ ಮತ್ತು ದಕ್ಷಿಣ ಕನ್ನಡದ ಭಾಗಗಳಲ್ಲಿ ಇಂದಿನಿಂದ ಮೇ 6 ರವರೆಗೆ ಭಾರೀ ಮಳೆಯಾಗಲಿದ್ದು, ತಮಿಳುನಾಡು, ಕೇರಳ, ಕರ್ನಾಟಕ ಕರಾವಳಿ ಪ್ರದೇಶ(Coastal Area)ಗಳಲ್ಲಿ ಅಲೆಗಳು ಹೆಚ್ಚಾಗಲಿವೆ.
ಇದನ್ನೂ ಓದಿ : ಚಾಮರಾಜನಗರದಲ್ಲಿ ಶಾಕಿಂಗ್ ನ್ಯೂಸ್.! ಆಕ್ಸಿಜನ್ ಸಿಗದೇ 24 ಕರೋನಾ ರೋಗಿಗಳ ಸಾವು
ಇನ್ನೂ ಭಾರೀ ಮಳೆ ಹಿನ್ನೆಲೆ ಕರ್ನಾಟಕದ ಶಿವಮೊಗ್ಗ, ಕೊಡಗು ಹಾಸನ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಯೆಲ್ಲೋ ಅಲರ್ಟ್(Yellow Alert) ಘೋಷಿಸಲಾಗಿದೆ.
ಇದನ್ನೂ ಓದಿ : SSLC, ಪಿಯುಸಿ ಪರೀಕ್ಷೆ ನಡೆಸುವ ಬಗ್ಗೆ ಇಂದು ನಿರ್ಧಾರ!
ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವಡೆ ಗುಡುಗು ಸಹಿತ ಮಳೆಯಾಗಿದೆ. ಅಲ್ಲದೆ ಕೆಲವು ಕಡೆ ಆಣೆಕಲ್ಲು ಕೂಡ ಬಿದ್ದಿವೆ. ಉತ್ತರ ಕರ್ನಾಟಕ(North Karnataka)ದ ಕಲಬುರ್ಗಿ, ರಾಯಚೂರು, ಬಾಗಲಕೋಟಿ ಜಿಲ್ಲೆಗಳಲ್ಲಿ ಮಳೆಯಾಗಿದೆ.
ಇದನ್ನೂ ಓದಿ : ಮೇ 5 ರಿಂದ 3 ದಿನ ಭಾರಿ ಮಳೆ : ರಾಜ್ಯದ ಕೆಲವು ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್' ಘೋಷಣೆ!
ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮೇ 5 ರಿಂದ 3 ದಿನ ಭಾರಿ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ : "ದೇಶದಲ್ಲಿ ಬಿಜೆಪಿಯ ಅವನತಿ ಪರ್ವ ಶುರುವಾಗಿದೆ"-ಸಿದ್ಧರಾಮಯ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.