ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇನ್ನೇನು ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ. ಈ ಸಂಭ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿರುವುದು ಆನೆಗಳು ಮತ್ತು ಆನೆಯ ಮೇಲೆ ಸವಾರಿ ಮಾಡುವ ಅಂಬಾರಿ. ಇದೀಗ ಜಗತ್ಪ್ರಸಿದ್ಧ ಅಂಬಾರಿಯನ್ನು ಹೊತ್ತು ಸಾಗುವ ಗಜಪಡೆ ಮೈಸೂರಿಗೆ ಆಗಮಿಸಿವೆ. ಇಂದು ಕಾಡಿನಿಂದ ನಾಡಿಗೆ ಬರಲಿರುವ ಗಜಪಡೆಗೆ ಪೂಜೆ ಸಲ್ಲಿಸಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Vegetable Price: ಕರ್ನಾಟಕ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆಯಾಯ್ತಾ ತರಕಾರಿ ಬೆಲೆ!


ಸಚಿವ ಉಮೇಶ್ ಕತ್ತಿ ಸೇರಿ ಹಲವು ಗಣ್ಯರಿಂದ ಪುಷ್ಪಾರ್ಚನೆ ಸಲ್ಲಿಸಿ, ಗಜಪಡೆಯ ಮೊದಲ ತಂಡಕ್ಕೆ ಪೂಜೆ ನೆರವೇರಿಸಿ ಅಧಿಕೃತವಾಗಿ ಚಾಲನೆ ನೀಡಿದರು. ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಬೆಳಗ್ಗೆ 9.01 ರಿಂದ 9.30ರ ಶುಭ ಲಗ್ನದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಲಾಗಿದೆ. ಗಜಪಡೆಗಳಿಗೆ ಪೂಜೆ ಮಾಡುವುದು ಮೈಸೂರು ದಸರ ಸಂಪ್ರದಾಯ. ಇನ್ನೊಂದೆಡೆ ನಾಡಹಬ್ಬ ದಸರಾದ ಕಾರ್ಯಕ್ರಮಗಳಿಗೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 


ಇಂದು ಅಭಿಮನ್ಯು ನೇತೃತ್ವದಲ್ಲಿ ಮೈಸೂರಿಗೆ ಗಜಪಡೆ ಕಾಲಿಡಲಿದೆ. 57 ವರ್ಷದ ಅಭಿಮನ್ಯು, 22 ವರ್ಷದ ಭೀಮ, 38 ವರ್ಷದ ಮಹೇಂದ್ರ ಹಾಗೂ 39 ವರ್ಷದ ಗೋಪಾಲಸ್ವಾಮಿ ಈ ಬಾರಿ ದಸರಾದಲ್ಲಿ ಭಾಗಿಯಾಗಲಿದೆ. 


ಬಳ್ಳೆ ಆನೆ ಶಿಬಿರದಿಂದ 63 ವರ್ಷದ ಅರ್ಜುನ, ದುಬಾರೆ ಆನೆ ಶಿಬಿರದಿಂದ‌ 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ ಹಾಗೂ 63 ವರ್ಷದ ವಿಜಯಾ ಆನೆಯೂ ಸಹ ಭಾಗಿಯಾಗಲಿದೆ. 


ರಾಮಾಪುರ ಆನೆ‌ ಶಿಬಿರದಿಂದ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮಿ ಹಾಗೂ‌ 18 ವರ್ಷದ ಪಾರ್ಥಸಾರಥಿ ಆನೆಗಳು ಆಗಮನ ಸಹ ಆಗಮಿಸಲಿದೆ. 


ಇದನ್ನೂ ಓದಿ: Gold Price Today : ಅಬ್ಬಬ್ಬಾ ಇಷ್ಟೊಂದು ಇಳಿಕೆಯಾಯ್ತಾ ಚಿನ್ನದ ಬೆಲೆ!


ಇಂದು ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಿಂದ ಗಜಪಡೆಯ ಮೊದಲ‌ ತಂಡ ಆಗಮನವಾಗಿದೆ. ಮೊದಲ ತಂಡದಲ್ಲಿ‌ 9 ಆನೆಗಳು ಆಗಮಿಸಲಿವೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.