ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಟೇಬಲ್ ಟೆನಿಸ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತೀಯ ಆಟಗಾರ್ತಿ ಭಾವಿನಾಬೆನ್ ಪಟೇಲ್ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಶನಿವಾರ ನಡೆದ ಮಹತ್ವದ ಪಂದ್ಯದಲ್ಲಿ ಭಾವಿನಾಬೆನ್ ಪಟೇಲ್ ನೈಜೀರಿಯಾದ ಇಫೆಚುಕ್ವುಡೆ ಕ್ರಿಸ್ಟಿಯಾನಾ ಇಕ್ಪಿಯೋಯಿ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
ಇದನ್ನೂ ಓದಿ: CWG 2022: ಫೈನಲ್ನಲ್ಲಿ ಪಾಕಿಸ್ತಾನದ ಕುಸ್ತಿಪಟುವನ್ನು ಮಣಿಸಿ ಚಿನ್ನ ಗೆದ್ದ ನವೀನ್..!
BHAVINA WINS G🤩LD
History Maker at #Tokyo2020 Paralympics @BhavinaOfficial wins her maiden medal at #CommonwealthGames 😍😍
With a straight 3-0 victory over 🇳🇬's I. Ikpeoyi, Bhavina maintains her unbeaten streak at #B2022 🔥
Phenomenal effort 💙
Congratulations!#Cheer4India pic.twitter.com/kctTdvLXIl— SAI Media (@Media_SAI) August 6, 2022
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಸಾಧನೆ ಮಾಡಿದ್ದ ಗುಜರಾತ್ ಮೂಲದ 35 ವರ್ಷದ ಭಾವಿನಾಬೆನ್ ಅವರು ನೈಜೀರಿಯಾದ ಇಫೆಚುಕ್ವುಡೆ ಕ್ರಿಸ್ಟಿಯಾನಾ ಇಕ್ಪಿಯೋಯಿ ವಿರುದ್ಧ 3-0 (12-10, 11-2, 11-9) ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಸಂಭ್ರಮಿಸಿದರು.
ಭಾವಿನಾ ಅವರು 2011ರ ಪಿಟಿಟಿ ಥಾಯ್ಲೆಂಡ್ ಓಪನ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ವಿಶ್ವದ ನಂ.2 ಶ್ರೇಯಾಂಕ ತಲುಪಿದ ಸಾಧನೆ ಮಾಡಿದ್ದರು. ಚಿನ್ನದ ಪದಕ ಗೆಲ್ಲುತ್ತಿದ್ದಂತೆಯೇ ತಮ್ಮ ಭಾವಿನಾ ಅವರು ತಮ್ಮ ಪತಿಯನ್ನು ತಬ್ಬಿಕೊಂಡು ಆನಂದಭಾಷ್ಪ ಸುರಿಸಿದರು.
Bhavina Patel does it !!!
What a TT🏓 player wins gold medal 🥇 in para C3-5 TT against Ikpeoyi 🇳🇬 in straight sets.
Tears of Joy 🥲 pure true emotions.
13 gold medal🥇for Bharat🇮🇳
Many congrats 👏
Billion Indians proud of you 👏 #BhavinaPatel#CommonwealthGames pic.twitter.com/laolSyJH0y
— Soug (@sbg1936) August 6, 2022
ಇದನ್ನೂ ಓದಿ: IND vs WI: ಮುಂದುವರೆದ ರೋ‘ಹಿಟ್’ ಪಾರುಪತ್ಯ! ಮತ್ತೊಂದು ಸರಣಿ ಗೆದ್ದ ಟೀಂ ಇಂಡಿಯಾ
ಭಾರತೀಯ ಮತೊಬ್ಬ ಆಟಗಾರ್ತಿ ಸೋನಾಲ್‌ಬೆನ್ ಮನುಭಾಯ್ ಪಟೇಲ್ ಕೂಡ ಭಾರತಕ್ಕೆ ಪದಕ ತಂದುಕೊಟ್ಟಿದ್ದು, ಮಹಿಳೆಯರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 34 ವರ್ಷದ ಭಾರತೀಯ ಆಟಗಾರ್ತಿ ಇಂಗ್ಲೆಂಡ್‌ನ ಸ್ಯೂ ಬೈಲಿ ಅವರನ್ನು 11-5 11-2 11-3 ಸೆಟ್‌ಗಳಿಂದ ಸೋಲಿಸಿ ಕಂಚಿನ ಪದಕಕ್ಕೆ ಮುತ್ತಿಕ್ಕಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.