ಹುಬ್ಬಳ್ಳಿ: 2021-22 ನೇ ಸಾಲಿನಲ್ಲಿ ಪದವಿ, ಡಿಪ್ಲೋಮಾ, ಸ್ನಾತಕೋತ್ತರ, ವೃತ್ತಿಪರ ಹಾಗೂ ಸಂಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಈಗಾಗಲೇ ಪಾಸುಗಳನ್ನು ಪಡೆದಿರುವ ವಿದ್ಯಾರ್ಥಿಗಳ ಬಸ್ ಪಾಸ್ ಮಾನ್ಯತಾ ಅವಧಿ ಜೂ. 30 ರಂದು ಮುಕ್ತಾಯಗೊಂಡಿರುತ್ತದೆ.


COMMERCIAL BREAK
SCROLL TO CONTINUE READING

ತರಗತಿಗಳು ಹಾಗೂ ಪರೀಕ್ಷೆಗಳು ಬಾಕಿ ಇರುವದರಿಂದ ಬಸ್ ಪಾಸ್ ಅವಧಿಯನ್ನು ವಿಸ್ತರಿಸಲು ವಿದ್ಯಾರ್ಥಿಗಳು ಕಾಲಾವಕಾಶ ನೀಡುವಂತೆ ಕೋರಿದ್ದರು.


ಇದನ್ನೂ ಓದಿ: ಗೊಂಬೆಯಂತಿದ್ದ ನಟಿ ಪಾಲಿಗೆ ವಿಲನ್ ಆದ ವೈದ್ಯರು! ದಂತ ಚಿಕಿತ್ಸೆ ಪಡೆದ ಯುವನಟಿಗೆ ಇಂದೆಂಥ ಸ್ಥಿತಿ?


ಸಂಸ್ಥೆಯ ನಿಯಮಾನುಸಾರ ನಿಗದಿತ ಮೊತ್ತ ಆಕರಣೆಯೊಂದಿಗೆ ಒಂದು ಹಾಗೂ ಎರಡು ತಿಂಗಳು ಅವಧಿಯೊಂದಿಗೆ ಬಸ್ ಪಾಸುಗಳನ್ನು ವಿಸ್ತರಿಸಿಕೊಳ್ಳಬಹುದು. 


ಜು.10 ರೊಳಗಾಗಿ ಬಸ್ ಪಾಸುಗಳನ್ನು ನವೀಕರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.


ಈ ಹಿಂದೆ ಜು.3ರವರೆಗೆ ಅವಕಾಶ ನೀಡಲಾಗಿತ್ತು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.