ಬೆಂಗಳೂರು: ಮೇ 16ರಿಂದ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನರಾರಂಭಗೊಂಡಿವೆ. ಶಾಲೆ ಶುರುವಾಗುತ್ತಿದ್ದಂತೆಯೇ ಪಠ್ಯ ಪುಸ್ತಕದ ತಲೆನೋವು ಸಹ ಶುರುವಾಗಿದೆ. ಮಕ್ಕಳ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನೂರೆಂಟು ತಪ್ಪುಗಳಾಗಿವೆ. ಹೀಗಾಗಿ ನೂತನ ಪಠ್ಯ ಪರಿಷ್ಕರಣೆ ದಿನಕ್ಕೊಂದು ವಿವಾದಕ್ಕೆ ಕಾರಣವಾಗುತ್ತಿದೆ.


COMMERCIAL BREAK
SCROLL TO CONTINUE READING

ಈ ಬಾರಿ ಶಿಕ್ಷಣ ಇಲಾಖೆ ಕೆಲವರ ಪಾಠವನ್ನು ಪಠ್ಯದಿಂದ ತೆಗೆದುಹಾಕಿ ಹೊಸ ಪಾಠಗಳನ್ನು ಸೇರಿಸಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈಗಾಗಲೇ 10ನೇ ತರಗತಿಯ ಪಠ್ಯದಲ್ಲಿ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ ಪಠ್ಯ ಕೈಬಿಟ್ಟು RSS ಸಂಸ್ಥಾಪಕ ಕೇಶವ ಬಲರಾಮ್ ಹೆಡ್ಗೇವಾರ್ ಅವರ ಭಾಷಣ ಸೇರಿಸಿದ್ದು ದೊಡ್ಡ ವಿವಾಧವನ್ನೇ ಸೃಷ್ಟಿಸಿದೆ. ಇದೀಗ ಶಿಕ್ಷಣ ಇಲಾಖೆಯಿಂದ ಮತ್ತೊಂದು ಎಡವಟ್ಟಾಗಿದ್ದು, ನಾಡಕವಿ, ಜ್ಞಾನಪೀಠ ಪುರಷ್ಕೃತ ರಾಷ್ಟ್ರಕವಿ ಕುವೆಂಪುರವರಿಗೂ ಅವಮಾನ ಮಾಡಲಾಗಿದೆ.


ಇದನ್ನೂ ಓದಿ: ಶಾಲೆಗಳಿಗೆ ಹುಸಿ ಬಾಂಬ್ ಪ್ರಕರಣ: ಸಾಫ್ಟ್ ವೇರ್ ಸಿದ್ದಪಡಿಸಿದ್ದು 17 ವರ್ಷದ ಬಾಲಕ ?


4ನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಕುವೆಂಪುರವರಿಗೆ ಕಥೆ, ಕವನ ಬರೆಯುವ, ಪುಸ್ತಕ ಓದುವ ಅಭ್ಯಾಸವಿತ್ತು. ಆದರೆ, ಕುವೆಂಪು ಅನೇಕರ ಪ್ರೋತ್ಸಾಹದಿಂದ ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಪರಿಚಯಿಸಲಾಗಿದೆ. ಇದರಿಂದ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪುರವರು ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತರಾದರಾ? ಅನ್ನೋ ಪ್ರಶ್ನೆ ಮೂಡಿದೆ. ದಿನಕ್ಕೊಂದು ತಪ್ಪುಗಳು ಹೊರಬರುತ್ತಿರುವುದರಿಂದ ಶಿಕ್ಷಕರೂ ಸಹ ಬೇಸರಗೊಂಡಿದ್ದಾರೆ.


ಪಠ್ಯ ಪರಿಷ್ಕರಣೆಯು ಶಾಲಾ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ನೂತನ ಪರಿಷ್ಕರಣಾ ಸಮಿತಿಯ ನೂರೆಂಟು ತಪ್ಪು ವಿವಾದಗಳು ಈಗ ತೀವ್ರ ಚರ್ಚೆಗೆ ಕಾರಣವಾಗ್ತಿದೆ. ಶಿಕ್ಷಕರು ಸೇರಿದಂತೆ ಅನೇಕರು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಿರುವ ಮಹಾ ಪ್ರಮಾದವನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಟಿಪ್ಪು ಕೇವಲ ಮತಾಂಧನಷ್ಟೇ ಅಲ್ಲ, ಕನ್ನಡ ದ್ವೇಷಿ ಕೂಡ: ಬಿಜೆಪಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.