ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವುದು ಚಾಳಿಯಾಗಿದೆ: ಎಚ್‌ಡಿಕೆ

ಬಿಜೆಪಿಯ ನಯವಂಚಕ & ಅನೈತಿಕ ರಾಜಕಾರಣದ ಮುಖವನ್ನು ಬೆಂಗಳೂರು ನಗರದ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಮುನಿರಾಜು ಎಂಬ ಮಹಾಶಯರೇ  ಬಹಿರಂಗಪಡಿಸಿದ್ದಾರೆ.

Written by - Zee Kannada News Desk | Last Updated : May 22, 2022, 08:52 AM IST
  • ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಭದ್ರಗೊಳಿಸಿದೆ
  • ಬಿಜೆಪಿ ಅಧಿಕಾರಕ್ಕೆ ಬರುವುದು ಅಡ್ಡದಾರಿಯಲ್ಲೇ ಎನ್ನುವುದು ಈಗ ರುಜುವಾತಾಗಿದೆ
  • ಆರ್.ಅಶೋಕ್ ಸಾಮ್ರಾಟರಾಗಿ ಬೆಳೆಯಲು ಕಾರಣವಾದ ‘ಬೆತ್ತಲೆ ಸತ್ಯʼದ ಹುತ್ತ ಬಿಚ್ಚಿಕೊಂಡಿದೆ
ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವುದು ಚಾಳಿಯಾಗಿದೆ: ಎಚ್‌ಡಿಕೆ title=
ಬಿಜೆಪಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿ

ಬೆಂಗಳೂರು: 2006ರಲ್ಲಿ ಜೆಡಿಎಸ್ ದೆಸೆಯಿಂದ ಅಧಿಕಾರದ ರುಚಿ ಕಂಡ ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವುದು ಚಾಳಿ ಆಗಿಬಿಟ್ಟಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಆಪರೇಷನ್ ಕಮಲʼ ಎಂಬ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಬಿಜೆಪಿ ಅಭದ್ರಗೊಳಿಸಿದೆ’ ಎಂದು ಟೀಕಿಸಿದ್ದಾರೆ.

‘ಬಿಜೆಪಿಯ ನಯವಂಚಕ & ಅನೈತಿಕ ರಾಜಕಾರಣದ ಮುಖವನ್ನು ಬೆಂಗಳೂರು ನಗರದ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಮುನಿರಾಜು ಎಂಬ ಮಹಾಶಯರೇ  ಬಹಿರಂಗಪಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದು ಅಡ್ಡದಾರಿಯಲ್ಲೇ ಎನ್ನುವುದು ಈಗ ರುಜುವಾತಾಗಿದೆ. 1998ರ ವಿಧಾನಸಭೆ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಹಾಲಿ ಕಂದಾಯ ಸಚಿವ ಆರ್.ಅಶೋಕ್ ಸ್ಪರ್ಧಿಸಿದಾಗ ಯಲಹಂಕದಿಂದ ಬಂದಿದ್ದ 1,000 ಕಾರ್ಯಕರ್ತರು ತಲಾ 5ರಿಂದ 10 ಕಳ್ಳವೋಟು ಹಾಕಿ ಅವರನ್ನು ಗೆಲ್ಲಿಸಿದ್ದರು!!’ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ!

‘ಇಂತಹ ಕೃತ್ಯಗಳಿಂದಲೇ ಇಂದು ಬಿಜೆಪಿ 119 ಕ್ಷೇತ್ರ ಗೆದ್ದು ಬಹುಮತದಿಂದ ಅಧಿಕಾರಕ್ಕೆ ಬಂದಿದೆ ಎಂದು ಮುನಿರಾಜು ತಮ್ಮ ಪಂಚೇಂದ್ರಿಯಗಳ ಸಾಕ್ಷಿಯಾಗಿ ತುಂಬಿದ ಕಾರ್ಯಕರ್ತರ ಸಭೆಯಲ್ಲೇ ಹೇಳಿದ್ದಾರೆ. ಆರ್.ಅಶೋಕ್ ಅವರು ಸಾಮ್ರಾಟರಾಗಿ ಬೆಳೆಯಲು ಕಾರಣವಾದ ‘ಬೆತ್ತಲೆ ಸತ್ಯʼದ ಹುತ್ತ ಬಿಚ್ಚಿಕೊಂಡಿದ್ದು, ಇದಕ್ಕೇನು ಹೇಳುತ್ತೀರಿ ಸಾಮ್ರಾಟರೇ?’ ಎಂದು ಪ್ರಶ್ನಿಸಿದ್ದಾರೆ.

‘ರಾಜ್ಯದ ಮೇಲೆ ರಾಜ್ಯ ಗೆಲ್ಲುತ್ತಿರುವ ಬಿಜೆಪಿ ಗೆಲುವಿನ ಗುಟ್ಟು ಈಗ ರಟ್ಟು. ಅಡ್ಡದಾರಿಯ ಕೊಚ್ಚೆಯಲ್ಲಿ ಅರಳುವ ಕಮಲವನ್ನು ಮುಡಿದುಕೊಂಡು ಬೀಗುವವರ ‘ಕಳ್ಳವೋಟಿನ ಕಥೆʼ ನಿಮ್ಮ ಮಾಜಿ ಶಾಸಕರೇ ಬಯಲು ಮಾಡಿದ್ದರೂ ಇನ್ನೂ ಕುರ್ಚಿಯಲ್ಲಿರಲು ಅದ್ಹೇಗೆ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆ ಸಾಮ್ರಾಟರೇ? ಅಶೋಕನ ಹೆಸರಿಗಾದರೂ ಮರ್ಯಾದೆ ಬೇಡವೇ?’ ಎಂದು ಕುಟುಕಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ತಲೆ ನೋವಾದ ಬೆಳಗಾವಿ ‘ಬಣ’ ರಾಜಕಾರಣ..!

‘ಕರ್ನಾಟಕದಲ್ಲಿ ಆಪರೇಷನ್ ಕಮಲಕ್ಕೆ ಜನ್ಮಕೊಟ್ಟು ಅದನ್ನು ನಿರ್ಲಜ್ಜವಾಗಿ ‘ರಾಷ್ಟ್ರೀಕರಣʼ ಮಾಡಿದ ಬಿಜೆಪಿ, ಭಾರತಕ್ಕೆ ಅಂಟಿದ ಕಳಂಕ. ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ. ಸಂಸತ್ತಿನಲ್ಲಿ ಸಂವಿಧಾನಕ್ಕೆ ಶಿರಸಾಷ್ಟಾಂಗ ನಮಸ್ಕಾರ. ಕರ್ನಾಟಕದಲ್ಲಿ ಅದೇ ಸಂವಿಧಾನದ ಶಿರಚ್ಛೇಧ!!’ ಎಂದು ಎಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News