ಬೆಂಗಳೂರು: ಟಿಪ್ಪು ಕೇವಲ ಮತಾಂಧನಷ್ಟೇ ಅಲ್ಲ, ಬದಲಾಗಿ ಕನ್ನಡ ದ್ವೇಷಿ ಕೂಡ ಎಂದು ಬಿಜೆಪಿ ಕಿಡಿಕಾರಿದೆ. #ಟಿಪ್ಪುಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಸೋಮವಾರ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘ಟಿಪ್ಪು ಕೇವಲ ಮತಾಂಧನಷ್ಟೇ ಅಲ್ಲ, ಬದಲಾಗಿ ಕನ್ನಡ ದ್ವೇಷಿ ಕೂಡ. ಕನ್ನಡ ಅಸ್ಮಿತೆಯ ಬಗ್ಗೆ ಮಾತನಾಡುವ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಇಬ್ಬಂದಿತನಕ್ಕೆ ಔಷಧಿ ಕಂಡುಕೊಳ್ಳಲಿ. ಕಂದಾಯ ದಾಖಲೆಗಳಿಂದಲೂ ಕನ್ನಡ ಅಳಿಸಿ ಪರ್ಷಿಯನ್ ಜಾರಿಗೊಳಿಸಿದ ಜಿಹಾದಿ ಮನಸ್ಥಿತಿಯ ಟಿಪ್ಪುವಿನ ಬಗ್ಗೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಪ್ರೀತಿ?’ ಎಂದು ಪ್ರಶ್ನಿಸಿದೆ.
ಟಿಪ್ಪು ಕೇವಲ ಮತಾಂಧನಷ್ಟೇ ಅಲ್ಲ, ಬದಲಾಗಿ ಕನ್ನಡ ದ್ವೇಷಿ ಕೂಡ.
ಕನ್ನಡ ಅಸ್ಮಿತೆಯ ಬಗ್ಗೆ ಮಾತನಾಡುವ ಮುನ್ನ @siddaramaiah ತಮ್ಮ ಇಬ್ಬಂದಿತನಕ್ಕೆ ಔಷಧಿ ಕಂಡುಕೊಳ್ಳಲಿ.
ಕಂದಾಯ ದಾಖಲೆಗಳಿಂದಲೂ ಕನ್ನಡ ಅಳಿಸಿ ಪರ್ಷಿಯನ್ ಜಾರಿಗೊಳಿಸಿದ ಜಿಹಾದಿ ಮನಸ್ಥಿತಿಯ ಟಿಪ್ಪುವಿನ ಬಗ್ಗೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಪ್ರೀತಿ?#ಟಿಪ್ಪುಕಾಂಗ್ರೆಸ್
— BJP Karnataka (@BJP4Karnataka) May 23, 2022
ಇದನ್ನೂ ಓದಿ: ವೈದ್ಯರಂತೆ ಪಶುವೈದ್ಯರಿಗೂ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡಿ: ರಾಜ್ಯ ಪಶುವೈದ್ಯಕೀಯ ಸಂಘ ಒತ್ತಾಯ
‘ಟಿಪ್ಪು ಸುಲ್ತಾನ್ ಮತಾಂಧನಲ್ಲ ಎನ್ನುವ "ಜಾಣಕುರುಡುತನ ಮತ್ತು ಜಾಣಕಿವುಡುತನ" ಕಾಂಗ್ರೆಸ್ ನಾಯಕರನ್ನು ಆವರಿಸಿಕೊಂಡಿದೆ. ಕೊಡಗಿನ ನರಮೇಧ, ಮೇಲುಕೋಟೆಯ ಮಂಡ್ಯ ಅಯ್ಯಂಗಾರರ ಹತ್ಯೆ, ನೆತ್ತರಕೆರೆಯ ಹತ್ಯಾಕಾಂಡ, ಮೈಸೂರು ಒಡೆಯರ ಮೇಲಿನ ದಾಳಿ, ದುರ್ಗದ ಪಾಳೆಯಗಾರರ ಮೇಲಿನ ದಾಳಿ - ಇವೆಲ್ಲ ಯಾವುದರ ಸಂಕೇತ?’ವೆಂದು ಪ್ರಶ್ನಿಸಿ ಬಿಜೆಪಿ ಟೀಕಿಸಿದೆ.
ಟಿಪ್ಪು ಸುಲ್ತಾನ್ ಮತಾಂಧನಲ್ಲ ಎನ್ನುವ "ಜಾಣಕುರುಡುತನ ಮತ್ತು ಜಾಣಕಿವುಡುತನ" ಕಾಂಗ್ರೆಸ್ ನಾಯಕರನ್ನು ಆವರಿಸಿಕೊಂಡಿದೆ.
ಕೊಡಗಿನ ನರಮೇಧ, ಮೇಲುಕೋಟೆಯ ಮಂಡ್ಯ ಅಯ್ಯಂಗಾರರ ಹತ್ಯೆ, ನೆತ್ತರಕೆರೆಯ ಹತ್ಯಾಕಾಂಡ, ಮೈಸೂರು ಒಡೆಯರ ಮೇಲಿನ ದಾಳಿ, ದುರ್ಗದ ಪಾಳೆಯಗಾರರ ಮೇಲಿನ ದಾಳಿ - ಇವೆಲ್ಲ ಯಾವುದರ ಸಂಕೇತ?#ಟಿಪ್ಪುಕಾಂಗ್ರೆಸ್
— BJP Karnataka (@BJP4Karnataka) May 23, 2022
ಟಿಪ್ಪು ಓರ್ವ ದೇಶ ಭಕ್ತ- ಸಿದ್ದರಾಮಯ್ಯ
ಭಾನುವಾರ ತುಮಕೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ‘ಟಿಪ್ಪು ಸುಲ್ತಾನ್ ಓರ್ವ ದೇಶ ಭಕ್ತ. ಟಿಪ್ಪು ಮತಾಂಧ ಆಗಿದ್ದರೆ ಹಿಂದೂ ದೇವಾಲಯಗಳು ಉಳಿಯುತ್ತಿದ್ವಾ? ಎಂದು ಪ್ರಶ್ನಿಸಿದ್ದರು. ‘ನಮಗೆ ಗಾಂಧಿ ಹೇಳಿರುವ ಹಿಂದೂವಾದ ಬೇಕು. ನಾಥೂರಾಮ್ ಗೋಡ್ಸೆ ಹೇಳಿರುವ ಹಿಂದೂವಾದ ಬೇಡ’ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ಡ್ಯಾಮ್ ಗೋಡೆ ಮೇಲೆ ಯುವಕನ ಚೆಲ್ಲಾಟ: ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ದೃಶ್ಯ ನೋಡಿ!
‘ಅಲ್ಪಸಂಖ್ಯಾತರ ಪರವಾಗಿ ನಾನು ಮಾತಾಡಿದರೆ ಸಂಘ ಪರಿವಾರವರು ನನಗೆ ನೀನೇನು ಮುಸ್ಲಿಂ ಜಾತಿಗೆ ಹುಟ್ಟಿದವನಾ? ಎನ್ನುತ್ತಾರೆ. ಧರ್ಮ ಧರ್ಮಗಳ ನಡುವೆ ಗೋಡೆ ಕಟ್ಟುವ ಕೆಲಸವನ್ನು ಸಂಘಪರಿವಾರ ಮಾಡುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಮಾತ್ರ ಹಿಂದೂ ಅಲ್ಲ. ನಾನೂ ಸಹ ಹಿಂದೂ, ನನ್ನ ಅಪ್ಪ ಕೂಡ ಹಿಂದೂ. ಹಿಂದೂಗಳು, ಕ್ರಿಶ್ಚಿಯನ್ ಕೂಡ ಗೋಮಾಂಸ ತಿನ್ನುತ್ತಾರೆ. ಹಿಂದೆ ಗೋಮಾಂಸ ತಿಂತೀರಾ ಎಂದು ನನಗೆ ಕೇಳಿದ್ದರು. ಆ ವೇಳೆ ಆಹಾರ ನಮ್ಮ ಹಕ್ಕು ಅದನ್ನು ಕೇಳಲು ನೀವ್ಯಾರು ಅಂತಾ ಕೇಳಿದ್ದೆ’ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.