ಚಾಮರಾಜನಗರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶ ಮಾಡಿದೆ. ಚಿಂತಕ ಮತ್ತು ಸಾಹಿತಿ ದೇವನೂರು ಮಹಾದೇವ ಯಾತ್ರೆಗೆ ಬೆಂಬಲ ಕೊಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ ಭಾಗಿಯಾಗಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ದೇವನೂರು ಮಹಾದೇವ  ಭಾರತೀಯ ಸಂವಿಧಾನ ಪುಸ್ತಕ ಹಾಗೂ ಪೀಠಿಕೆ ಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.  


ಇದನ್ನೂ ಓದಿ : ಮನೆಯಲ್ಲಿಯೇ ಪೇಪರ್‌ Recycling :ಪರಿಸರ ಕಾಳಜಿ ಹೊಂದಿರುವ ಆರ್ಕಿಡ್ಸ್‌ಶಾಲಾ ವಿದ್ಯಾರ್ಥಿ ಕರಣ್‌


ಇನ್ನು, ವೇದಿಕೆ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಲಾಯಿತು. ಒಂದು ನಗಾರಿಯನ್ನು ಡಿಕೆಶಿ, ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಒಟ್ಟಿಗೆ ಬಾರಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದರು. 


ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಿಂದ ಜಾನಪದ ಕಲಾತಂಡಗಳೊಂದಿಗೆ ಪಾದಯಾತ್ರೆ ಆರಂಭವಾಯಿತು. 12 ಗಂಟೆ ಹೊತ್ತಿಗೆ ಕೆಬ್ಬೆಕಟ್ಟೆ ಬಳಿ ಸೋಲಿಗರು ಮತ್ತು ಆ್ಯಕ್ಸಿಜನ್ ಸಂತ್ರಸ್ತರೊಟ್ಟಿಗೆ ಸಂವಾದ ಏರ್ಪಡಿಸಲಾಗಿದೆ. 


ಇದನ್ನೂ ಓದಿ : ತೀವ್ರ ಹೃದಯಾಘಾತದಿಂದ ವಾಕಿಂಗ್ ಮಾಡುವಾಗಲೇ ಯುವ ಕುಸ್ತಿಪಟು ಸಾವು!


20 ಸಾವಿರಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದು ರಾಹುಲ್ ಗಾಂಧಿ ಜೊತೆ ನಾಯಕರುಗಳು ಮುಂಚೂಣಿಯಲ್ಲಿ ನಡೆಯುತ್ತಿದ್ದಾರೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.