ಪಟ್ಟದಕಲ್ಲು-ಶಿರೂರು ಹೆದ್ದಾರಿ ವಿಸ್ತರಣೆಗೆ 264.15 ಕೋಟಿ ಮಂಜೂರು: ಗಡ್ಕರಿಗೆ ಸಿಎಂ ಧನ್ಯವಾದ
ಶೀಘ್ರವೇ ಈ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಆರಂಭವಾಗಲಿದೆ. ಯೋಜನೆಯ ಒಂದನೇ ಪ್ಯಾಕೇಜ್ನಲ್ಲಿ 24 ಕಿಮೀ. ಬಾದಾಮಿಯಲ್ಲಿ ಹಾದು ಹೋಗಲಿದೆ. 2ನೇ ಪ್ಯಾಕೇಜ್ನಲ್ಲಿ ಶಿರೂರುವರೆಗೆ 15. ಕಿಮೀ. ರಸ್ತೆ ಅಭಿವೃದ್ಧಿ ಆಗಲಿದೆ.
ನವದೆಹಲಿ: ರಾಷ್ಟ್ರೀಯ ಹೆದ್ದಾರಿ 367(National Highway 367)ರ ಪಟ್ಟದಕಲ್ಲು-ಶಿರೂರು ನಡುವಿನ ರಸ್ತೆಯನ್ನು 2 ಲೇನ್ ಗೆ ವಿಸ್ತರಿಸಲು ಕೇಂದ್ರ ಸರ್ಕಾರ(Central government)ವು 264.15 ಕೋಟಿ ರೂ. ಮಂಜೂರು ಮಾಡಿದೆ. ಈ ಬಗ್ಗೆ ಕೇಂದ್ರದ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಶುಕ್ರವಾರ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಪಟ್ಟದಕಲ್ಲು-ಶಿರೂರು ಹೆದ್ದಾರಿ ವಿಸ್ತರಣೆ(NH-367)ಗೆ 264.15 ಕೋಟಿ ಮಂಜೂರು ಮಾಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai)ಯವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಗಡ್ಕರಿಯವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅವರು, ‘ಹೆದ್ದಾರಿ ವಿಸ್ತರಣೆಗೆ ಅನುದಾನ ನೀಡಿದ್ದಕ್ಕೆ ಧನ್ಯವಾದಗಳು’ ಎಂದು ಹೇಳಿದ್ದಾರೆ.
ಅರಣ್ಯ ವಾಸಿಗಳಿಗೆ ಆಗುತ್ತಿರುವ ಕಿರುಕುಳ ನಿಲ್ಲಬೇಕು: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ
ಗಡ್ಕರಿಗೆ ಧನ್ಯವಾದ ತಿಳಿಸಿದ್ದ ಸಿದ್ದರಾಮಯ್ಯ
ಈ ಹಿಂದೆ ರಾಷ್ಟ್ರೀಯ ಹೆದ್ದಾರಿ(National Highway 367) ಅಭಿವೃದ್ಧಿ ಮಾಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ನವರು ಕೂಡ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಮಾಡಿದ್ದರು. ಇವರ ಪ್ರಯತ್ನದ ಫಲವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಇದೀಗ 264.15 ಕೋಟಿ ಹಣ ಮಂಜೂರಾಗಿದೆ. ಹೀಗಾಗಿ ಸಿದ್ದರಾಮಯ್ಯ ಕೂಡ ಗಡ್ಕರಿಯವರಿಗೆ ಧನ್ಯವಾದ ತಿಳಿಸಿದ್ದರು.
ಮೂಲ ಸೌಕರ್ಯ ಅಭಿವೃದ್ಧಿ ವಿಷಯದಲ್ಲಿ ಐತಿಹಾಸಿಕ ಬಾದಾಮಿ(Badami) ಕ್ಷೇತ್ರ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿರುವ ಬಾದಾಮಿ, ಪಟ್ಟದಕಲ್ಲು, ಐಹೊಳೆಗೆ ನಿತ್ಯ ದೇಶ-ವಿದೇಶದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಉತ್ತಮ ರಸ್ತೆ ಸೌಲಭ್ಯ ಇಲ್ಲದಿರುವುದು ಕ್ಷೇತ್ರದ ಅಭಿವೃದ್ಧಿಗೆ ಹಿನ್ನೆಡೆಯಾಗಿತ್ತು. ರಸ್ತೆ ಕಿರಿದಾಗಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಪಟ್ಟದಕಲ್ಲು, ಶಿರೂರು, ಗದ್ದನಕೇರಿ ಕ್ರಾಸ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮತ್ತು ಉನ್ನತೀಕರಣಕ್ಕೆ 264.15 ಕೋಟಿ ರೂ.ಗಳ ಯೋಜನೆ ಮಂಜೂರಾಗಿದ್ದು ಖುಷಿಯ ವಿಚಾರ ಅಂತಾ ಹೇಳಿದ್ದರು.
ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಬಿಕ್ಕಟ್ಟು ಪರಿಹರಿಸಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
ಶೀಘ್ರವೇ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪೂರ್ಣ
ಶೀಘ್ರವೇ ಈ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಆರಂಭವಾಗಲಿದೆ. ಯೋಜನೆಯ ಒಂದನೇ ಪ್ಯಾಕೇಜ್ನಲ್ಲಿ 24 ಕಿಮೀ. ಬಾದಾಮಿಯಲ್ಲಿ ಹಾದು ಹೋಗಲಿದೆ. 2ನೇ ಪ್ಯಾಕೇಜ್ನಲ್ಲಿ ಶಿರೂರುವರೆಗೆ 15. ಕಿಮೀ. ರಸ್ತೆ ಅಭಿವೃದ್ಧಿ ಆಗಲಿದೆ. ಇದರಿಂದ ಹುಬ್ಬಳ್ಳಿ ಮೂಲಕ ಬಾದಾಮಿ, ಪಟ್ಟದಕಲ್ಲು ಮತ್ತಿತರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶ-ವಿದೇಶದ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 367 ಹಾಗೂ 218ಕ್ಕೆ ಸಂಪರ್ಕ ಕಲ್ಪಿಸಲಿದೆ. ಹೆದ್ದಾರಿ 10 ಮೀಟರ್ ವಿಸ್ತರಣೆಯಾಗಲಿದ್ದು, ರಸ್ತೆ ಪ್ರಯಾಣ ಸುಖಕರವಾಗಿರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.