Basavaraj Bommai Cabinet Reshuffel: ಸಿಎಂ ದೆಹಲಿ ಪ್ರವಾಸ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಸೇರಲು ಲಾಬಿ ಶುರು!

ಅದಷ್ಟು ಬೇಗ ಸಂಪುಟ ಪುನರ್ರಚನೆ ಮಾಡುವಂತೆ ಸಿಎಂ ಮೇಲೆ ಒತ್ತಡ: 2023 ರ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಕೆಲವೇ ತಿಂಗಳು ಬಾಕಿಯಿದೆ. ಹೀಗಾಗಿ ಶೀಘ್ರವೇ ಸಂಪುಟ ಪುನರ್ರಚನೆ ಮಾಡಿ ಎಂದು ಬಿಜೆಪಿ ಶಾಸಕರು ಸಿಎಂ ಬಸವರಾಜ ಬೊಮ್ಮಯಿ (Basavaraj Bommai) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದ್ದಾರೆ.

Edited by - Yashaswini V | Last Updated : Feb 4, 2022, 07:28 AM IST
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಯಾತ್ರೆ ನಿಗದಿ
  • ಸಿಎಂ ದೆಹಲಿ ಪ್ರವಾಸ ನಿಗದಿಯಾಗುತ್ತಿದ್ದಂತೆ, ಈ ಕಡೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಜೋರಾಗಿದೆ
  • ಇಷ್ಟು ದಿನ ಮಂತ್ರಿಗಿರಿಗಾಗಿ ರಾಜ್ಯದಲ್ಲಿ ಸರ್ಕಸ್ ಮಾಡ್ತಾಯಿದ್ದವರು ಈಗ ಲಾಬಿಗೆ ಮುಂದಾಗಿದ್ದಾರೆ
Basavaraj Bommai Cabinet Reshuffel: ಸಿಎಂ ದೆಹಲಿ ಪ್ರವಾಸ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಸೇರಲು ಲಾಬಿ ಶುರು! title=
Basavaraj Bommai Cabinet Reshuffel

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಯಾತ್ರೆ ನಿಗದಿಯಾಗುತ್ತಿದ್ದಂತೆ, ಈ ಕಡೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಜೋರಾಗಿದೆ. ಇಷ್ಟು ದಿನ ಮಂತ್ರಿಗಿರಿಗಾಗಿ ರಾಜ್ಯದಲ್ಲಿ ಸರ್ಕಸ್ ಮಾಡ್ತಾಯಿದ್ದವರು ಈಗ ದೆಹಲಿ ಸೇರಿದಂತೆ ನಾನಾ ಕಡೆಗಳಿಂದ ಲಾಬಿಗೆ ಮುಂದಾಗಿದ್ದಾರೆ.

ಅದಷ್ಟು ಬೇಗ ಸಂಪುಟ ಪುನರ್ರಚನೆ ಮಾಡುವಂತೆ ಸಿಎಂ ಮೇಲೆ ಒತ್ತಡ:
2023 ರ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಕೆಲವೇ ತಿಂಗಳು ಬಾಕಿಯಿದೆ. ಹೀಗಾಗಿ ಶೀಘ್ರವೇ ಸಂಪುಟ ಪುನರ್ರಚನೆ ಮಾಡಿ ಎಂದು ಬಿಜೆಪಿ ಶಾಸಕರು ಸಿಎಂ ಬಸವರಾಜ ಬೊಮ್ಮಯಿ (Basavaraj Bommai) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದ್ದಾರೆ.

ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಮಾಡುವ ವಿಚಾರ ಕುರಿತು ಯಾರು ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಹೈ ಕಮಾಂಡ್ ನಾಯಕರು ಸಹ ಈ ಬಗ್ಗೆ  ಬಾಯಿ ಬಿಡ್ತಾಯಿಲ್ಲ. ಇದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಪುಟ ಸರ್ಜರಿ ವಿಳಂಬವಾದಷ್ಟೂ‌ ಸಮಸ್ಯೆಯಾಗಲಿದೆ ಎಂಬುದು ಹಲವು ಶಾಸಕರ ಅಭಿಪ್ರಾಯವಾಗಿದೆ. ಇನ್ನೂ ಕೆಲವು ಶಾಸಕರು ಮಂತ್ರಿಗಿರಿಗಾರಿ ನಾನಾ ಕಡೆಯಿಂದ ಲಾಬಿ ಆರಂಭಿಸಿದ್ದಾರೆ.

ಇದನ್ನೂ ಓದಿ- ಅರಣ್ಯ ವಾಸಿಗಳಿಗೆ ಆಗುತ್ತಿರುವ ಕಿರುಕುಳ ನಿಲ್ಲಬೇಕು: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ

ಸಂಪುಟ ಸೇರಲು ದೆಹಲಿ ಮಟ್ಟದಲ್ಲಿ ಲಾಬಿ ಶುರು ಮಾಡಿದ ಶಾಸಕರು:
ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಮುಂದಿನ ಸೋಮವಾರ ದೆಹಲಿಗೆ ತೆರೆಳುವ ವಿಚಾರ ಸ್ಪಷ್ಟ ಆಗ್ತಾಯಿದ್ದಂತೆ ಶಾಸಕರು ತಮ್ಮ ತಮ್ಮ ಗಾಡ್ ಫಾದರ್ಗಳ ಮೂಲಕ ಸಂಪುಟ ಸೇರಲು ಸರ್ಕಸ್ ಶುರು ಮಾಡಿದ್ದಾರೆ. ಈಗಾಗಲೇ ಶ್ರೀರಾಮಲು ಡಿಸಿಎಂ ಸ್ಥಾನಕ್ಕಾಗಿ ಲಾಬಿ ಆರಂಭ ಮಾಡಿದ್ದು, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ (SA Ramdas) ಸಚಿವ ಸ್ಥಾನಕ್ಕೆ ದೆಹಲಿಗೆ ತೆರೆಳಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಳೆ ಅಥವಾ ನಾಳಿದ್ದು ರೇಣುಕಾಚಾರ್ಯ , ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ , ಸಿ.ಪಿ. ಯೋಗೇಶ್ವರ್ ದೆಹಲಿಗೆ ತೆರಳಲಿದ್ದಾರೆ ಎಂಬ ಮಾಹಿತಿಯೂ ಇದೆ. ಮತ್ತೊಂದು ಕಡೆ ರಮೇಶ್ ಜಾರಕಿಹೊಳಿ, ಗೋವಾದಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಪಡ್ನಾವೀಸ್ ಮೂಲಕ ಸಚಿವ ಸಂಪುಟದ ಸೇರುವ ಪ್ರಯತ್ನ ಮುಂದುವರೆಸಿದ್ದಾರೆ.‌ ಇವರ ಜೊತೆಗೆ ವಿಜೆಯೇಂದ್ರ‌ ಹೆಸರು ಜೋರಾಗಿ ಕೇಳಿ ಬರ್ತಾಯಿದೆ. ಇವರುಗಳ ಮಧ್ಯೆ ತಿಪ್ಪಾರೆಡ್ಡಿ , ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ದತ್ತಾತ್ರೇಯ ಪಾಟೀಲ್ , ಕುಡುಚಿ‌ರಾಜೀವ್, ಎಂ.ಪಿ.ಕುಮಾರಸ್ವಾಮಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ‌. 

ಇದನ್ನೂ ಓದಿ- ಅತಿಥಿ ಉಪನ್ಯಾಸಕರ ಬಿಕ್ಕಟ್ಟು ಪರಿಹರಿಸಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ಇವರ ನಂತರ ಇನ್ನೂ ನಾಲ್ಕೈದು ಹೊಸ ಶಾಸಕರು ಸಹ ನಮಗೂ ಮಂತ್ರಿ ಸ್ಥಾನ ಬೇಕು ಎಂಬ ಬೇಡಿಕೆ  ಇಟ್ಟಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಹೀಗಾಗಿ ಇವರಲ್ಲಿ ಯಾರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂಬ ಯಕ್ಷ ಪ್ರಶ್ನೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಎದುರಾಗಿದೆ.

ಮೂಲಗಳ ಪ್ರಕಾರ ಹೈ ಕಮಾಂಡ್ ಗೆ ತಮ್ಮ ಈ ಆರು ತಿಂಗಳುಗಳ ಅಧಿಕಾರಾವಧಿಯಲ್ಲಿ ನಡೆದಿರುವ ಕೆಲಸಗಳ ಬಗ್ಗೆ ವರದಿ ಸಲ್ಲಿಸಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, 2023ರ ಚುನಾವಣೆ,  ಸಂಪುಟ ಪುನರ್ರಚನೆ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಏನೇ ಆದರೂ ಅದು ಬಜೆಟ್ ಅಧಿವೇಶನ ಬಳಿಕವೇ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News