ಜಲ ಸಂರಕ್ಷಣೆಯ ಜೊತೆ ಹೆದ್ದಾರಿಗಳ ಅಭಿವೃದ್ಧಿ ಪರ್ವ: ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ
ರಾಜ್ಯದ 1038 ಕೆರೆಗಳ ಹೂಳೆತ್ತಿ, ಅದರ ಮಣ್ಣನ್ನು ಅಕ್ಕಪಕ್ಕದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಬಳಸಿಕೊಳ್ಳುವ ವಿನೂತನ ಯೋಜನೆ ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ ಹಾಗೂ ನಮ್ಮ ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವರಾದ ಸಿ.ಸಿ ಪಾಟೀಲ್ ಅವರು ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದ 1038 ಕೆರೆಗಳ ಹೂಳೆತ್ತಿ, ಅದರ ಮಣ್ಣನ್ನು ಅಕ್ಕಪಕ್ಕದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಬಳಸಿಕೊಳ್ಳುವ ವಿನೂತನ ಯೋಜನೆ ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ ಹಾಗೂ ನಮ್ಮ ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವರಾದ ಸಿ.ಸಿ ಪಾಟೀಲ್ ಅವರು ತಿಳಿಸಿದ್ದಾರೆ.
ಹೆದ್ದಾರಿ ಅಕ್ಕಪಕ್ಕದ ಕೆರೆಗಳಲ್ಲಿ ಹೂಳು ತುಂಬಿ ಉಂಟಾಗುತ್ತಿದ್ದ ನೀರಿನ ಲಭ್ಯತೆಗೆ ಸಮಸ್ಯೆಯಾಗುತ್ತಿತ್ತು.. ಗುತ್ತಿಗೆದಾರರು ಈವರೆಗೆ ಹೆದ್ದಾರಿ ಅಭಿವೃದ್ಧಿಗೆ ಅವಶ್ಯವಿರುವ ಮಣ್ಣನ್ನು ಸ್ಥಳೀಯವಾಗಿ ಖರೀದಿಸುತ್ತಿದ್ದರು.
ಈ ಯೋಜನೆಯಿಂದ ಹೆದ್ದಾರಿ ಅಭಿವೃದ್ಧಿಗೆ ಅವಶ್ಯವಿರುವ ಮಣ್ಣನ್ನು, ಇಂತಹ ಕೆರೆಗಳಿಂದಲೇ ತೆಗೆಸಿ ರಸ್ತೆಗೆ ಬಳಸಿದರೆ ಒಂದೆಡೆ ಕೆರೆಯ ಹೂಳಿನ ಸಮಸ್ಯೆ ಪರಿಹಾರವಾಗುವದರ ಜೊತೆಗೆ, ಹೆದ್ದಾರಿ ನಿರ್ಮಾಣಕ್ಕೆ ಅಗತ್ಯವಾದ ಮಣ್ಣು ಕೂಡಾ ಸುಲಭವಾಗಿ ದೊರೆತಂತಾಗುತ್ತದೆ.. ಅಷ್ಟೇ ಅಲ್ಲದೇ ಹೆದ್ದಾರಿಯ ಅಕ್ಕಪಕ್ಕ ಕೆರೆ, ಸರೋವರಗಳು ನಿರ್ಮಾಣಗೊಂಡು ಉತ್ತಮ ಪರಿಸರ ಸೃಷ್ಟಿಗೂ ಕಾರಣವಾಗುತ್ತದೆ, ಪ್ರವಾಸಿಗರಿಗೂ ಆಕರ್ಷಣೆಯಾಗುತ್ತದೆ.
ಇದನ್ನೂ ಓದಿ: Viral Video: ಮೊಸಳೆಯನ್ನು ಕೊಂದು ಹಾಕಿದ ದೈತ್ಯ ಹಾವು.. ಭಯಾನಕ ಕಾದಾಟ ಕ್ಯಾಮೆರಾ ಕಣ್ಣಲ್ಲಿ ಸೆರೆ
"ಆಜಾದೀ ಕಾ ಅಮೃತ ಮಹೋತ್ಸವ"ದ ಆಚರಣೆಯ ಅಂಗವಾಗಿ “ಅಮೃತ ಸರೋವರ ನಿರ್ಮಾಣ” ಯೋಜನೆಯನ್ನು ನಿರ್ವಹಿಸಲು ನಮ್ಮ ರಾಜ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವನ್ನು ಅನುಷ್ಠಾನ ಸಂಸ್ಥೆಯನ್ನಾಗಿ ನೇಮಿಸಿದೆ..
ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳ್ಳುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಭೂ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ವಿಶೇಷ ಆಸಕ್ತಿ ವಹಿಸಿದ್ದು, ರಾಜ್ಯಕ್ಕೆ ಆಗಮಿಸಿದಾಗ ಈ ಯೋಜನೆ ಅನುಷ್ಠಾನಗೊಳಿಸುವದಾಗಿ ಘೋಷಿಸಿದ್ದರು.ಗುರಾಯಿಸಿದ್ದಕ್ಕೆ ರೌಡಿಗಳ ನಡುವೆ ಮಾರಾಮಾರಿ: ಎಣ್ಣೆ ಬಾಟಲ್‌ನಲ್ಲಿ ಬಡಿದಾಟ
ಗುತ್ತಿಗೆದಾರರು ಅಥವಾ ರಸ್ತೆ ನಿರ್ಮಾಣ ಪ್ರಾಧಿಕಾರವು ಕೆರೆಗಳಿಂದ ಕೆರೆಯ ಸಂರಕ್ಷಣೆಗೆ ಅಪಾಯವಾಗದಂತೆ ಹೂಳು ತೆಗೆಯಲು ಸರ್ಕಾರಕ್ಕೆ ಯಾವುದೇ ಶುಲ್ಕ ನೀಡಬೇಕಾಗಿಲ್ಲ ಮತ್ತು ಈ ಹೂಳನ್ನು ರಸ್ತೆ ನಿರ್ಮಾಣಕ್ಕಲ್ಲದೇ ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.