ಬೆಂಗಳೂರು : ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡರ (  SL Dharmegowda) ಆತ್ಮಹತ್ಯೆ ಪ್ರಕರಣ  ಈಗ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.  ಧರ್ಮೇಗೌಡರ ಸಾವಿಗೆ ಕಾರಣ ಏನು ಎನ್ನುವುದು ಕೂಡಾ ಈಗ ಚರ್ಚೆಯ ಸಂಗತಿಯಾಗಿದೆ.  ಈ ನಡುವೆ, ಧರ್ಮೇಗೌಡರ ಆತ್ಮೀಯ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ  ಮಾಡಿರುವ ಟ್ವೀಟ್ ಕೂಡಾ ಚರ್ಚೆಗೆ ಗ್ರಾಸವಾಗಿದೆ. 


COMMERCIAL BREAK
SCROLL TO CONTINUE READING

ಕುಮಾರಸ್ವಾಮಿ ಟ್ವೀಟ್ ನಲ್ಲಿ ಏನಿದೆ..?


ಧರ್ಮೇಗೌಡರ  ಆತ್ಮಹತ್ಯೆಯು ಇವತ್ತಿನ ಕಲುಷಿತ, ತತ್ವರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ. ಸಭಾಪತಿ ಸ್ಥಾನಕ್ಕಾಗಿ ಜೆಡಿಎಸ್ ನ (JDS) ಜಾತ್ಯತೀತತೆ ಪರೀಕ್ಷೆ ಮಾಡಲಾಯಿತು. ಈ ಪರೀಕ್ಷೆಯಲ್ಲಿ ಧರ್ಮೇಗೌಡ ಎಂಬ ಹೃದಯವಂತನ ಬಲಿಯಾಗಿದೆ. ಪರೀಕ್ಷೆ ಮಾಡಿದವರಿಗೆ ಈಗ  ಉತ್ತರ ಸಿಕ್ಕಿರಬಹುದು. ಫಲಿತಾಂಶದಿಂದಲಾದರೂ ಅವರ ಆತ್ಮಾವಲೋಕನವಾಗಲಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. 


ವಿಧಾನ ಪರಿಷತ್ತಿನ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ


ಡಿಸೆಂಬರ್ 15ರಂದು ವಿಧಾನ ಪರಿಷತ್ ನಲ್ಲಿ ನಡೆದ ಜಟಾಪಟಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ, ಕುಮಾರಸ್ವಾಮಿ (Kumaraswamy) ಈ ಹೇಳಿಕೆ ನೀಡಿದ್ದಾರೆ.  ಈ ಜಟಾಪಟಿಯಲ್ಲಿ ರಾಜಕೀಯ ನಾಯಕರು ನಡೆದುಕೊಂಡ ರೀತಿ ಎಲ್ಲರ ಟೀಕೆಗೆ ಗುರಿಯಾಗಿತ್ತು. ಪರಿಷತ್ ಸಭಾಪತಿ ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ಜೆಡಿಎಸ್ ನ ಜಾತ್ಯತೀತ ನಿಲುವು ಬಹಿರಂಗವಾಗಲಿದೆ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದರು. 


ಇದೇ ವೇಳೆ, ಹೇಳಿಕೆ ನೀಡಿರುವ ಜೆಡಿಎಸ್ ಶಾಸಕ ಬಿ ಎಂ ಫಾರೂಖ್, ಪರಿಷತ್ ಘಟನೆಯ ಬಳಿಕ ಎಸ್ ಎಲ್ಧರ್ಮೇಗೌಡರು (S L Dharmegowda) ತೀವ್ರ ನೊಂದಿದ್ದರು. ಅದರಿಂದಾಗಿಯೇ ಖಿನ್ನತೆಗೆ ಒಳಗಾಗಿದ್ದರು ಎಂದಿದ್ದಾರೆ.


ALSO READ : ಪರಿಷತ್ ಜಟಾಪಟಿಯಿಂದ ನೊಂದಿದ್ದರೆ ಉಪಸಭಾಪತಿ ಎಸ್ ಎಲ್ ಧರ್ಮೇಗೌಡರು..? ಶುರುವಾಗಿದೆ ಹೀಗೊಂದು ರಾಜಕೀಯ ಚರ್ಚೆ


ಧರ್ಮೇಗೌಡರ ನಿಧನಕ್ಕೆ ರಾಜಕೀಯ ವಲಯದ ಗಣ್ಯರು, ಅಪಾರ ಅಭಿಮಾನಿಗಳು ಶೋಕ ವ್ಯಕ್ತ ಪಡಿಸಿದ್ದಾರೆ. ಅವರ ನಿಧನಕ್ಕೆ ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ಕೂಡಾ ಸಂತಾಪ ವ್ಯಕ್ತ ಪಡಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.