ಬೆಂಗಳೂರು : ರಾಹುಲ್ ಗಾಂಧಿ ನ್ಯಾಯ ಯಾತ್ರೆಗೆ ಬಿಜೆಪಿ ಅಡ್ಡಿಪಡಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪ್ರತಿಪಕ್ಷ ನಾಯಕರನ್ನ ಹತ್ತಿಕ್ಕುವುದು ರಾಮ ರಾಜ್ಯದ ಪರಿಕಲ್ಪನೆಯೇ ಎಂದು ಬಿಜೆಪಿ ನಾಯಕರನ್ನ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು ಅವರು, ಧರ್ಮದ ವಿಚಾರದಲ್ಲಿ ಅನವಶ್ಯಕ ರಾಜಕಾರಣ ಮಾಡುವುದು ಒಳ್ಳೆಯದಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ಸರ್ಕಾರ ಬಹಳ ಕೆಲಸ ಮಾಡಿದೆ ಎಂದರು. 


COMMERCIAL BREAK
SCROLL TO CONTINUE READING

ಧರ್ಮ ಎಲ್ಲರನ್ನೂ ಉಳಿಸುತ್ತಿದೆ ಯಾರೋ ಒಬ್ಬರಿಂದ ಧರ್ಮ ಅಲ್ಲ. ದೇಶದಲ್ಲಿ ಬಿಜೆಪಿ ರಾಮ ರಾಜ್ಯದ ಪರಿಕಲ್ಪನೆ ಬಗ್ಗೆ ಮಾತಾಡ್ತಿದೆ. ಆದರೆ, ಹಿಂಸೆ ಸೃಷ್ಟಿ ಮಾಡುವುದು, ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕುವುದು ಯಾವ ರಾಮ ರಾಜ್ಯದ ಪರಿಕಲ್ಪನೆ ಎಂದು ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರನ್ನ ಪ್ರಶ್ನಿಸಿದರು. ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಗೆ ಬಿಜೆಪಿ ಸರ್ಕಾರ ಅಡ್ಡಿಪಡಿಸುತ್ತಿದೆ. ಪ್ರತಿಪಕ್ಷಗಳು ಹೋರಾಟ ನಡೆಸುವುದು ಅವರ ಹಕ್ಕು. ಇದಕ್ಕೆ ಅಡ್ಡಿಪಡಿಸುವ ಬಿಜೆಪಿ ಮನಸ್ಥಿತಿ ರಾಮ ರಾಜ್ಯ ಕಟ್ಟುವ ರೀತಿಯಲ್ಲಿ ಇಲ್ಲ ಎಂದರು. 


ಇದನ್ನೂ ಓದಿ:ಆಲಿಯಾ ಭಟ್‌ ಧರಿಸಿರುವ ಈ 'ರಾಮಾಯಣ' ಸೀರೆಯ ವಿಶೇಷತೆ ಏನ್‌ ಗೊತ್ತಾ?


ಅಯೋಧ್ಯೆಗೆ ನಾವು ಹೋಗುವುದಕ್ಕೆ ಯಾರ ಪರ್ಮಿಷನ್ ಬೇಕಾಗಿಲ್ಲ. ಭವ್ಯವಾದ ರಾಮ ಮಂದಿರ ಕಟ್ಟಲಾಗಿದೆ. ಅದನ್ನು ನೋಡಲು ನಾವು ಅಯೋಧ್ಯೆಗೆ ಹೋಗ್ತೇವೆ. ತೋರಿಕೆಗಾಗಿ ದೇವಸ್ಥಾನಕ್ಕೆ ಹೋಗಬೇಕಾಗಿಲ್ಲ. ನಮ್ಮ ಭಕ್ತಿ ತೋರಿಕೆಯಾಗಬಾರದು.  ಧರ್ಮ ಎಲ್ಲರನ್ನೂ ಒಳಗೊಳ್ಳಬೇಕು.‌ ಶ್ರೀ ರಾಮ, ಭಕ್ತಿಗೋಸ್ಕರ ಇರಬೇಕೇ ಹೊರತು ಮತಗಳಿಕೆಗೋಸ್ಕರ ಇರಬಾರದು. ಸ್ವಾರ್ಥಕ್ಕೋಸ್ಕರ ಶ್ರೀರಾಮನ ಬಳಸಯವುದು ಎಷ್ಟರ ಮಟ್ಟಕ್ಕೆ ಸರಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.


ಸಹಮತದಿಂದ ನಿಗಮ‌ ಮಂಡಳಿ ನೇಮಕಾತಿ ಆಗಬೇಕು : ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಎಲ್ಲರನ್ನ ತೃಪ್ತಿ ಪಡಿಸುವುದು ಕಷ್ಟ. ಆದರೆ ಚರ್ಚೆಯ ಮೂಲಕ ಸಹಮತದಿಂದ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಆಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.  ಯಾರು ಪಕ್ಷಕ್ಕೆ ನಿಷ್ಟೆಯಿಂದ ಕೆಲಸ ಮಾಡಿದ್ದಾರೆ ಅವರಿಗೆ ಅವಕಾಶಗಳು ಸಿಗಬೇಕು. ಆಕಾಂಕ್ಷಿಗಳು ತುಂಬಾ ಜನ ಇದ್ದಾರೆ. ಹೀಗಾಗಿ ಯಾರಿಗೆ ಕೊಡಬೇಕು ಅನ್ನೋದು ಚರ್ಚೆಯಲ್ಲಿದೆ. ಪಕ್ಷದ ವರಿಷ್ಠರು ಈ ನಿಟ್ಟಿನಲ್ಲಿ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. 


ಇದನ್ನೂ ಓದಿ:ನಟಿ ಸಾಯಿ ಪಲ್ಲವಿ ಸಹೋದರಿಯ ಅದ್ಧೂರಿ ನಿಶ್ಚಿತಾರ್ಥ..! ಫೋಟೋಸ್ ನೋಡಿ


ಜಿ. ಪರಮೇಶ್ವರ್ ಅವರು ಪಕ್ಷದ ಹಿರಿಯ ನಾಯಕರು. ಅವರ ಅಭಿಪ್ರಾಯಗಳನ್ನ ಹೈಕಮಾಂಡ್ ನಾಯಕರು ಆಲೀಸಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ನಿರ್ಣಯಗಳನ್ನ ಕೈಗೊಂಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಸಮಿತಿಗಳಿಗೆ ನೇಮಕಾತಿಗಳು ನಡೆಯುತ್ತಿದೆ. ರಾಜ್ಯ ಮಟ್ಟದ ನಿಗಮ ಮಂಡಳಿಗಳ ನೇಮಕಾರಿ ವಿಚಾರದಲ್ಲಿ ಮಾತ್ರ ತೀರ್ಮಾನ ಆಗಬೇಕಿದೆ. ಈಗಾಗಲೇ ಪಕ್ಷದ ವರಿಷ್ಠರು ಚರ್ಚೆ ನಡೆಸಿ ಬಹುತೇಕ ಪಟ್ಟಿ ಅಂತಿಮಗೊಳಿಸಿದ್ದಾರೆ. ಇದು ಪಕ್ಷದ ಚೌಕಟ್ಟಿನಲ್ಲಿ ತೀರ್ಮಾನ ಆಗುತ್ತದೆ. ಸಹಮತದಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಇದೇ ವೇಳೆ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.