ಬೆಂಗಳೂರು: ಗ್ಯಾರಂಟಿ ಹುಳುಕುಗಳನ್ನು ಮುಚ್ಚಿಡಲು ಸಿಎಂ ಸಿದ್ದರಾಮಯ್ಯನವರು ಬೋಗಸ್ ವಾದ ಮಂಡಿಸುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಿರ್ಮಲಾರವರು ಸುಳ್ಳು ಹೇಳುವುದರಲ್ಲಿ ಇತ್ತೀಚೆಗೆ ಮೋದಿಯವರನ್ನೇ ಮೀರಿಸುತ್ತಿದ್ದಾರೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಟೀಕಿಸಿದ್ದಾರೆ. ಈ ಬಗ್ಗೆ ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಅವರು, ʼಕರ್ನಾಟಕಕ್ಕೆ ಕೇಂದ್ರದಿಂದ ತೆರಿಗೆ ಅನ್ಯಾಯವಾಗುತ್ತಿರುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ತೆರಿಗೆ ಅನ್ಯಾಯದ ಬಗ್ಗೆ ನಾವು ಸಾಕ್ಷಿ ಸಮೇತ ತೋರಿಸಿದ್ದೇವೆ. ಆದರೂ ಅನ್ಯಾಯ ಮಾಡಿಲ್ಲವೆಂದು ನಿರ್ಮಲಾರವರು ವಿತಂಡ ವಾದ ಮಾಡುವುದ್ಯಾಕೆ.?ʼ ಎಂದು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ʼನಮ್ಮ ಸರ್ಕಾರದ ಪಂಚ ಗ್ಯಾರಂಟಿಗಳು ಅಬಾಧಿತವಾಗಿ ಮುಂದುವರೆಯಲಿವೆ. ಗ್ಯಾರಂಟಿ ಯೋಜನೆಗಳಲ್ಲಿ ಯಾವ ಹುಳುಕುಗಳು ಇಲ್ಲ. ಸಚಿವೆ ನಿರ್ಮಲಾರವರು ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಹುಳುಕು ಕಂಡು ಹಿಡಿಯುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ. ನಾವು ಕೇಂದ್ರದ ಬಳಿ ಕೇಳುತ್ತಿರುವುದು ನ್ಯಾಯಯುತವಾಗಿ ನಮಗೆ ಸೇರಬೇಕಾದ ತೆರಿಗೆ ಹಣವನ್ನು. ನಾವು ಮೋದಿಯವರ ತಿಜೋರಿಯಿಂದಾಗಲಿ, ಅಮಿತ್ ಶಾರವರ ಬ್ಯಾಂಕ್ ಖಾತೆಯಿಂದಾಗಲಿ ಅನುದಾನ ಕೇಳುತ್ತಿಲ್ಲ. ಈ ಸಾಮಾನ್ಯ ಜ್ಞಾನ ನಿರ್ಮಲಾರವರಿಗೆ ಇದ್ದರೆ ಸಾಕುʼ ಎಂದು ಕುಟುಕಿದ್ದಾರೆ.


ಕಾಟನ್‌ ಕ್ಯಾಂಡಿ ಮಾರಾಟಕ್ಕೆ ನಿಷೇಧ ಹೇರಿದ ಸರ್ಕಾರ..! ಏಕೆ ಗೊತ್ತೆ..?


ʼ6 ತಿಂಗಳ ಹಿಂದೆ BJP ಸರ್ಕಾರವಿದ್ದಾಗ ತೆರಿಗೆ ಅನ್ಯಾಯದ ಪ್ರಸ್ತಾಪವೇ ಇರಲಿಲ್ಲ ಎಂಬರ್ಥದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಮಾತಾಡಿದ್ದಾರೆ. ಅದು ಸತ್ಯ ಕೂಡ. ಯಾಕೆಂದರೆ ಮೋದಿಯವರ ಮುಂದೆ ನಡು ಬಗ್ಗಿಸಿ ನಿಲ್ಲಲು ಹೆದರುವ ಕರ್ನಾಟಕದ ಬಿಜೆಪಿ ನಾಯಕರು ತೆರಿಗೆ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವೇ.? ಪ್ರಸ್ತಾಪಿಸಲು ಸಾಧ್ಯವೇ.? ಆದರೆ ನಾವು ಹಿಂದೆ ಪ್ರತಿಪಕ್ಷ ಸ್ಥಾನದಲ್ಲಿದ್ದಾಗಲೂ ತೆರಿಗೆ ಅನ್ಯಾಯದ ಬಗ್ಗೆ ಪ್ರಶ್ನಿಸುತ್ತಲೇ ಇದ್ದೇವೆ. ಹಿಂದಿನ BJP ಸರ್ಕಾರಕ್ಕೂ ಕೇಂದ್ರವನ್ನು ಪ್ರಶ್ನಿಸುವಂತೆ ಒತ್ತಾಯಿಸಿದ್ದೇವೆ‌. ಈ ಬಗ್ಗೆ ನಿರ್ಮಲಾ ಸೀತಾರಾಮನ್‌ರವರಿಗೆ ಅನುಮಾನಗಳಿದ್ದರೆ ಪರಿಶೀಲಿಸಬಹುದು‌ʼ ಎಂದು ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ. 


ವಾಹನಗಳ ಗ್ರೀನ್ ಟ್ಯಾಕ್ಸ್: ಬಂಡೀಪುರಕ್ಕೆ 10 ತಿಂಗಳಲ್ಲಿ 4.5 ಕೋಟಿ ಆದಾಯ


ಕರ್ನಾಟಕದ ಬಿಜೆಪಿ ನಾಯಕರು ಒಪ್ಪಿಕೊಳ್ಳಲಿ. ಕನಿಷ್ಟಪಕ್ಷ ಸತ್ಯ ಒಪ್ಪಿಕೊಂಡ ಕಾರಣಕ್ಕಾದರೂ ಕನ್ನಡಿಗರು ನಿಮ್ಮನ್ನು ಕ್ಷಮಿಸಬಹುದು‌ʼ ಎಂದು ಟ್ವೀಟ್‌ ಮಾಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.