Ravindra Jadeja: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿಗೆ ಅರ್ಪಿಸಿದ ರವೀಂದ್ರ ಜಡೇಜಾ!

India vs England, 3rd Test: ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ 434 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈ ಗೆಲುವಿನಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾರ ಕೊಡುಗೆ ಪ್ರಮುಖವಾಗಿತ್ತು.

Written by - Puttaraj K Alur | Last Updated : Feb 19, 2024, 04:36 PM IST
  • ರವೀಂದ್ರ ಜಡೇಜಾ ಪತ್ನಿ ವಿರುದ್ಧ ತಂದೆ ಅನಿರುಧ್‌ಸಿನ್ಹ ಜಡೇಜಾ ಗಂಭೀರ ಆರೋಪ
  • ರಾಜ್‌ಕೋಟ್‌ನಲ್ಲಿ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿಗೆ ಅರ್ಪಿಸಿದ ರವೀಂದ್ರ ಜಡೇಜಾ
  • ನನಗೆ ಮಾನಸಿಕ ಬೆಂಬಲ ನೀಡಿದ ಪತ್ನಿಗೆ ಈ ಪ್ರಶಸ್ತಿ ಅರ್ಪನೆ ಎಂದ ರವೀಂದ್ರ ಜಡೇಜಾ
Ravindra Jadeja: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿಗೆ ಅರ್ಪಿಸಿದ ರವೀಂದ್ರ ಜಡೇಜಾ! title=
ಪತ್ನಿಗೆ ಪಂದ್ಯಶ್ರೇಷ್ಠ ಅರ್ಪಿಸಿದ ಜಡೇಜಾ

ನವದೆಹಲಿ: ಟೀಂ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ತಂದೆ ಅನಿರುಧ್‌ಸಿನ್ಹ ಜಡೇಜಾ ಅವರು ತಮ್ಮ ಸೊಸೆ ರಿವಾಬಾ ಜಡೇಜಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನನ್ನ ಮಗನ ಮೇಲೆ ಸೊಸೆ ಏನು ಮಾಟ ಮಾಡಿದ್ದಾಳೆ ಎಂಬುದು ಗೊತ್ತಿಲ್ಲ ಅಂತಾ ಕಿಡಿಕಾರಿದ್ದರು. ತಮ್ಮ ಕುಟುಂಬದಲ್ಲಿನ ಬಿರುಕಿಗೆ ಸೊಸೆ ರಿವಾಬಾನೇ ಕಾರಣವೆಂದು ಆರೋಪಿಸಿದ್ದರು. ಆದರೆ ತಂದೆಯ ಈ ಆರೋಪವನ್ನು ಸ್ವತಃ ರವೀಂದ್ರ ಜಡೇಜಾ ಅವರೇ ತಳ್ಳಿಹಾಕಿದ್ದರು.

ಈ ವಿವಾದದ ಕೆಲವು ದಿನಗಳ ನಂತರ ರವೀಂದ್ರ ಜಡೇಜಾ ರಾಜ್‌ಕೋಟ್‌ನಲ್ಲಿ ತನಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನ ಪತ್ನಿ ರಿವಾಬಾಗೆ ಅರ್ಪಿಸಿದ್ದಾರೆ. ತನಗೆ ಮಾನಸಿಕ ಬೆಂಬಲ ನೀಡಿದ ಅವರು ಉತ್ತಮ ಪ್ರದರ್ಶನ ನೀಡಲು ನನಗೆ ಪ್ರೇರೇಪಿಸಿದ್ದಾಳೆ ಎಂದು ಹೇಳಿದ್ದಾರೆ.   

ಇದನ್ನೂ ಓದಿ: IND vs ENG: ರಾಜ್‌ಕೋಟ್ ಟೆಸ್ಟ್‌ನಲ್ಲಿ ದಾಖಲಾದ ಟಾಪ್-10 ವಿಶ್ವ ದಾಖಲೆಗಳಿವು!

ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ 434 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈ ಗೆಲುವಿನಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾರ ಕೊಡುಗೆ ಪ್ರಮುಖವಾಗಿತ್ತು. ಆರ್.ಅಶ್ವಿನ್ ಬಳಿಕ ಟೆಸ್ಟ್ ಪಂದ್ಯವೊಂದರಲ್ಲಿ ಶತಕ ಬಾರಿಸಿ 5 ವಿಕೆಟ್ ಪಡೆದ ಭಾರತದ ೨ನೇ ಆಟಗಾರನೆಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾದರು.

ಜಡೇಜಾ ತವರಿನ ಪ್ರೇಕ್ಷಕರ ಮುಂದೆ ಆಡಿದ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು 2ನೇ ಇನ್ನಿಂಗ್ಸ್‌ನಲ್ಲಿ  5 ವಿಕೆಟ್‌ ಪಡೆದ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಯುವ ಆಟಗಾರ ಯಶಸ್ವಿ ಜೈಸ್ವಾಲ್ ದ್ವಿಶತಕ ಬಾರಿಸಿದರೆ, ರೋಹಿತ್ ಶರ್ಮಾ ನಾಯಕನ ಆಟವಾಡಿದರು. ಆದರೆ ಪಂದ್ಯದ ತೀರ್ಪುಗಾರರು ಜಡೇಜಾರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಿದರು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ತಂಡಕ್ಕೆ ಆಲ್‌ರೌಂಡರ್ ಕೊಡುಗೆ ನೀಡಿದ ಹಿನ್ನೆಲೆ ಜಡೇಜಾ ಈ ಗೌರವಕ್ಕೆ ಪಾತ್ರರಾದರು.

ಇದನ್ನೂ ಓದಿ: Rohit Sharma: ಸರ್ಫರಾಜ್-ಗಿಲ್ ಇವರ್ಯಾರೂ ಅಲ್ಲ.. ಈ ಇಬ್ಬರೂ ಆಟಗಾರರೇ ಟೀಂ ಇಂಡಿಯಾದ ಹೀರೋಗಳು ಎಂದ ರೋಹಿತ್‌ ಶರ್ಮಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News