ಬೆಂಗಳೂರು: ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗುತ್ತಿದ್ದಂತೆ ಡಿಕೆಶಿ ಫುಲ್ ಆಕ್ಟಿವ್ ಆಗಿದ್ದಾರೆ. ಇಲ್ಲಿಯವರೆಗೆ ಕಚೇರಿಯೊಳಗೆ ಮೀಟಿಂಗ್ ಮಾಡಿದ್ದಾಯ್ತು. ಇದೀಗ ಫೀಲ್ಡ್‌ಗೆ ಎಂಟ್ರಿ ಕೊಟ್ಟಿರೋ ಡಿ.ಕೆ.ಶಿವಕುಮಾರ್‌ ಮಳೆಗಾಲದಲ್ಲಿ ಹಾನಿಯಾಗೋ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಸಿಎಂ ಆದ ಬಳಿಕ ಮೊದಲ ಬಾರಿಗೆ ರಾಜಧಾನಿ ರೌಂಡ್ಸ್‌ ಹಾಕಿದ ಡಿಕೆಶಿ, ಒತ್ತುವರಿದಾರರಿಗೆ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತಂತಾದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ


COMMERCIAL BREAK
SCROLL TO CONTINUE READING

ರಾಜ್ಯಕ್ಕೆ ಮುಂಗಾರು ಎಂಟ್ರಿಯಾಗಲು ಕೌಂಟ್‌ಡೌನ್‌ ಶುರುವಾಗೋ ಹೊತ್ತಲ್ಲೇ, ಇದೇ ಮೊದಲ ಬಾರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ್ದಾರೆ. ಕಳೆದ ಬಾರಿ ಮಳೆಯಿಂದ ಹಾನಿಯಾಗಿದ್ದ ಪ್ರದೇಶಗಳನ್ನ ಗುರ್ತಿಸಿದ್ದ ಡಿಕೆಶಿ ಬಿಡಿಎ, ಪಾಲಿಕೆ ಅಧಿಕಾರಿಗಳ ಜೊತೆ ಬೆಳ್ಳಬೆಳಗ್ಗೆ ಬಿಎಂಟಿಸಿ ಬಸ್‌ ಏರಿ ಸಿಟಿ ರೌಂಡ್ಸ್‌ ನಡೆಸಿದ್ದಾರೆ. ಮಳೆಹಾನಿಗೆ ತುತ್ತಾಗುವ ಮಹಾದೇವಪುರ ವಲಯ ವ್ಯಾಪ್ತಿ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಯಮಲೂರು ಕೆರೆ, ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆ, ಸೇರಿದಂತೆ ಹೂಳೆತ್ತುವ ಜಾಗ, ಒಳಚರಂಡಿ ಕಾಮಗಾರಿ ಜಾಗಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.


ಒತ್ತುವರಿಯಾದ್ರೂ ಅಧಿಕಾರಿಗಳು ಮೌನ- ಡಿಕೆಶಿವಕುಮಾರ್ ಕೆಂಡ;


ಇನ್ನು ಸಿಟಿ ರೌಂಡ್ಸ್‌ ವೇಳೆ ಯಮಲೂರಿನ ದಿವ್ಯಶ್ರೀ ಅಪಾರ್ಟ್‌ಮೆಂಟ್‌ ಬಳಿ ರಾಜಕಾಲುವೆ ಒತ್ತುವರಿ ಯಾಗಿರೋದನ್ನ ಕಂಡ ಡಿಕೆಶಿ ಅಧಿಕಾರಿಗಳ ವಿರುದ್ಧ ಕೆಂಡಕಾರಿದ್ರು. ನಿಮ್ಮ ಅನುಕೂಲಕ್ಕೆ ರಾಜಕಾಲುವೆ ಜಾಗ ಚಿಕ್ಕದು ಮಾಡಕ್ಕಾಗಲ್ಲ ಎಂದು ಗರಂ ಆದ ಡಿಕೆಶಿ ಬಿಬಿಎಂಪಿ ಅಧಿಕಾರಿಗಳಿಗೆ ಕೂಡಲೇ ಒತ್ತುವರಿ ತೆರವಿಗೆ ಸೂಚಿಸಿದ್ರು. ಕಳೆದ ವರ್ಷ ಮಳೆ ಅವಾಂತರಕ್ಕೆ ತುತ್ತಾಗಿದ್ದ ವರ್ತೂರಿನ ದೊಡ್ಡಕನ್ನಹಳ್ಳಿಯ ರೈನ್‌ಬೋ ಡ್ರೈವ್‌ ಅಪಾರ್ಟ್‌ಮೆಂಟ್‌ ಮುಂದಿನ ರಾಜಕಾಲುವೆ, ವರ್ತೂರು ಕೆರೆಕೋಡಿ ಬಳಿಯ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದ್ರು. ಸಿಟಿ ರೌಂಡ್ಸ್‌ ಬಳಿಕ ಮಾತನಾಡಿದ ಡಿಕೆಶಿ, ಒತ್ತುವರಿ ಮಾಡಿರೋರಿಗೆ ಖಡಕ್‌ ಎಚ್ಚರಿಕೆ ನೀಡಿದ್ರು, ಮಳೆಗಾಲ ಬಂದಾಗ ಸಮಸ್ಯೆಯಾಗುತ್ತೆ, ಯಾರ ಒತ್ತಡಕ್ಕೂ ಒಳಗಾಗದೇ ಒತ್ತುವರಿ ತೆರವಾಗಬೇಕೆಂದ ಡಿಸಿಎಂ, ಒತ್ತುವರಿದಾರರು ಕಾನೂನಿನ ಮೊರೆ ಹೋದ್ರೆ ನಾವು ಕಾನೂನು ಅಸ್ತ್ರ ಪ್ರಯೋಗಿಸುತ್ತೇವೆ ಅಂತಾ ಎಚ್ಚರಿಕೆ ಕೊಟ್ಟರು.


ಸ್ಥಳದಿಂದ ಕಾಲ್ಕಿತ್ತ ಶಾಸಕಿ ಮಂಜುಳಾ ಅರವಿಂದ್;


ರಾಜಧಾನಿ ರೌಂಡ್ಸ್‌ ವೇಳೆ ದಾರಿಯುದ್ದಕ್ಕೂ ಅಧಿಕಾರಿಗಳು ಕಾಮಗಾರಿಗಳ ಮಾಹಿತಿ ನೀಡಿದ್ರು. ಈ ವೇಳೆ ಡಿಸಿಎಂ ಜೊತೆ ಸಾಥ್‌ ನೀಡಿದ ಮಹದೇವಪುರ ಶಾಸಕಿ ಮಂಜುಳಾ ಅರವಿಂದ್ ಲಿಂಬಾವಳಿ ನಾವು ಸರ್ಕಾರಕ್ಕೆ ಎಲ್ಲಾ ಮಾಹಿತಿ ನೀಡಿದ್ದೇವೆ. ಈ ಭಾಗದಲ್ಲಿ ಮಳೆಯ ಸಮಸ್ಯೆ ಇದೆ ಆದ್ರೆ ಈ ಬಾರಿ ಮಳೆಯಿಂದ ಅವಾಂತರವಾಗದಂತೆ ಕ್ರಮ ವಹಿಸುತ್ತೇವೆ ಎಂದರು, ಒತ್ತುವರಿದಾರರು ಕಳೆದ 14 ವರ್ಷದಿಂದ ಹಾಗೇ ಇದ್ರೂ ಕ್ರಮ ಯಾಕಾಗಿಲ್ಲ ಅನ್ನೋ ಪ್ರಶ್ನೆಗೆ ತಬ್ಬಿಬ್ಬಾದ ಶಾಸಕಿ ನಿರುತ್ತರರಾಗಿ ಕಾಲ್ಕಿತ್ತರು


ಸದ್ಯ ಮಳೆ ಬಂದಾಗ ಮನೆ ಮೇಲೆ ಧ್ಯಾನ ಅನ್ನೋ ಹಾಗೇ ಹೊಸ ಸರ್ಕಾರ ರಚನೆಯಾದ ಕೆಲ ದಿನಗಳಲ್ಲಿ ಸುರಿದ ಮಳೆಯಿಂದ ಎಚ್ಚೆತ್ತ ಡಿಸಿಎಂ, ಸಿಟಿ ರೌಂಡ್‌ ನಡೆಸಿದ್ದಾರೆ. ಪಾಲಿಕೆ, ಜಲಮಂಡಳಿ, ಮೆಟ್ರೋ ಅಧಿಕಾರಿಗಳ ಜೊತೆ ಮಳೆಯಿಂದ ಸಮಸ್ಯೆಗೆ ಒಳಗಾಗೋ ಭಾಗಗಳಿಗೆ ಭೇಟಿ ನೀಡಿದ ಡಿಸಿಎಂ ಅಧಿಕಾರಿಗಳಿಗೆ ಕೆಲ ಸೂಚನೆ ನೀಡಿರೋದಾಗಿ ಹೇಳಿದ್ದಾರೆ. ಸದ್ಯ ಸಿಟಿ ರೌಂಡ್ಸ್‌ ಎಷ್ಟು ಫಲಕಾರಿಯಾಗುತ್ತೆ ಅನ್ನೋದನ್ನ ಮಳೆ ಬಂದಾಗಷ್ಟೇ ಕಾದುನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.