Halal certificate: ಬೆಳಗಾವಿ: ವಿಧಾನ ಪರಿಷತ್ ಕಲಾಪದಲ್ಲಿ ಹಲಾಲ್ ಪ್ರಮಾಣ ಪತ್ರ ಸರ್ಕಾರ ನೀಡುತ್ತಿದ್ಯಾ ಎಂದು ಸದಸ್ಯ ರವಿಕುಮಾರ್ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.


COMMERCIAL BREAK
SCROLL TO CONTINUE READING

ಬಿಜೆಪಿ ಸದಸ್ಯ ಎನ್ ರವಿಕುಮಾರ್ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದು, ರಾಜ್ಯದಲ್ಲಿ ಹಲಾಲ್ ಪ್ರಮಾಣೀಕೃತ ಆಸ್ಪತ್ರೆ ಅಂತ ಸರ್ಕಾರ ಪ್ರಮಾಣಪತ್ರ ಕೊಡ್ತಿದೆಯೇ? ಖಾಸಗಿ ಆಸ್ಪತ್ರೆಗಳು ಹಲಾಲ್ ಪ್ರಮಾಣಪತ್ರಗಳನ್ನು ಖಾಸಗಿ ಸಂಸ್ಥೆಗಳಿಂದ ಪಡೆಯುತ್ತಿವೆ. ಬಳಿಕ ಹಲಾಲ್ ಆಸ್ಪತ್ರೆ ಅಂತ ಆ ಖಾಸಗಿ ಆಸ್ಪತ್ರೆಗಳು ಜಾಹೀರಾತು ಕೊಡ್ತಿವೆ. ಹಲಾಲ್ ಪ್ರಮಾಣಪತ್ರ ಇರೋ ಆಸ್ಪತ್ರೆಗಳ ವಿರುದ್ದ ಕ್ರಮ ಏನು? ಸರ್ಕಾರವು ಹಲಾಲ್ ಪ್ರಮಾಣಪತ್ರ ನೀಡಲು ಯಾವ ಸಂಸ್ಥೆಗೆ ಅನುಮತಿ ನೀಡಿದೆ? ಹಾಗೂ ಹಲಾಲ್ ಪ್ರಮಾಣಪತ್ರ ಹೊಂದಿರುವ ಆಸ್ಪತ್ರೆಗಳ ಅನುಮತಿ ರದ್ದು ಮಾಡಲು ಸರ್ಕಾರ ಕ್ರಮ ಕೈಗೊಂಡಿದೆಯೇ? ಎಂದು ಪ್ರಶ್ನೆ ಕೇಳಿದರು.


ಇದನ್ನೂ ಓದಿ:  ಪ್ರೇಯಸಿ ಆಸೆ ತೀರಿಸಲು ಅಣ್ಣನ ಮನೆಗೆ ಕನ್ನ: ಹುಡುಗಿ ಜೊತೆ ಗೋವಾದಲ್ಲಿ ಮಜಾ ಮಾಡುತ್ತಿದ್ದವ ಅಂದರ್!                                              


ಇದಕ್ಕೆ ಸರ್ಕಾರ ಹಲಾಲ್ ಪ್ರಮಾಣ ಪತ್ರದ ಕುರಿತ ಲಿಖಿತ ಪ್ರಶ್ನೆಗೆ ಸರ್ಕಾರದಿಂದ ಲಿಖಿತ ಉತ್ತರ ನೀಡಿ, ಸರ್ಕಾರ ಹಲಾಲ್ ಪ್ರಮಾಣೀಕೃತ ಆಸ್ಪತ್ರೆ ಅಂತ ಯಾವುದೇ ಪ್ರಮಾಣ ಪತ್ರ ನೀಡ್ತಿಲ್ಲ. ಖಾಸಗಿ ಆಸ್ಪತ್ರೆಗಳು ಹಲಾಲ್ ಆಸ್ಪತ್ರೆಗಳು ಅಂತ ಪ್ರಮಾಣ ಪತ್ರ ಪಡೆಯುತ್ತಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿಲ್ಲ. ಹಲಾಲ್ ಪ್ರಮಾಣ ಪತ್ರವನ್ನು ಯಾವುದೇ ಆರೋಗ್ಯ ಸಂಸ್ಥೆಯಿಂದ ಪಡೆಯುತ್ತಿಲ್ಲ, ನೀಡುತ್ತಿಲ್ಲ ಎಂದಿದೆ.


ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಜಗಳ: ಕ್ರಿಕೆಟ್ ಆಡುತ್ತಿದ್ದ ಇಬ್ಬರು ಯುವಕರ ಬರ್ಬರ ಹತ್ಯೆ!                                              


ಬಿಜೆಪಿ ಶಾಸಕ ರವಿಕುಮಾರ್ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರವಿಕುಮಾರ್ ಹಲಾಲ್ ಮಾಂಸ ನಿಷೇಧ ಕುರಿತು ಖಾಸಗಿ ವಿಧೇಯಕ ಮಂಡಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರವನ್ನೂ ಬರೆದಿದ್ದರು. ಆದರೆ, ಈಗ ಅದನ್ನು ಸದನದಲ್ಲಿ ಮಸೂದೆಯಾಗಿ ಮಂಡಿಸಲು ಬಯಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಬಿಜೆಪಿಯ ಎಲ್ಲ ಶಾಸಕರು ಒಪ್ಪಿಗೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಂದು ಈ ವಿಚಾರದಲ್ಲಿ ಅವರು ತಮ್ಮ ಸಚಿವರು ಹಾಗೂ ಮುಖಂಡರ ಜೊತೆ ಸಭೆ ನಡೆಸಬಹುದು ಎನ್ನಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.