ದಾವಣಗೆರೆ: ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ತುಮಕೂರಿನ ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಮಾತನಾಡಿರುವ ಅವರು ವಿಶ್ವಗುರು ಬಸವಣ್ಣನವರ ವಚನಗಳ ತಿದ್ದುವ ಪ್ರಯತ್ನ ಮಾಡಬಾರದು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪಠ್ಯಪುಸ್ತಕದ ವಿಷಯ ಈಗಾಗಲೇ ಬಹಳಷ್ಟು ತಿರುವು ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ವಾತಾವರಣ ಸೃಷ್ಟಿಯಾಗಬಾರದು. ಮಕ್ಕಳಿಗೆ ಯಾವುದೇ ವಿಷಯ ಭೋದನೆ ಮಾಡಿದರೂ ನೈತಿಕ ಶಿಕ್ಷಣದ ಅಗತ್ಯವಿದೆ. ಪಠ್ಯಪುಸ್ತಕದಲ್ಲಿ ನೈತಿಕ ಕೊರತೆ ಹೆಚ್ಚು ಕಾಣ್ತಾ ಇದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಅತಂತ್ರವಾದಲ್ಲಿ ಖರ್ಗೆ ಮುಖ್ಯಮಂತ್ರಿಯಾಗುವ ಭಯವೇ?: ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ


ಮಕ್ಕಳಿಗೆ ಮೂಲ ವಿಚಾರವನ್ನು ತಿದ್ದದೆ ವಾಸ್ತವವಾಗಿ ಕೊಡಬೇಕು. ವಾದ-ವಿವಾದಗಳು ಪೂರ್ಣಗೊಂಡು ಶಾಂತಿ ವಾತವರಣ ನಿರ್ಮಾಣ ಆಗಬೇಕು. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಉಂಟಾಗಬೇಕು. ಬಸವಣ್ಣನವರು ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಬಸವಣ್ಣನವರ ತತ್ವಗಳು ಪ್ರತಿಯೊಬ್ಬ ವ್ಯಕ್ತಿಗೂ ಬೇಕಾಗಿವೆ. ಅವರ ವಚನಗಳೇ ನಮಗೆ ಆಧಾರ ಆಗಿದ್ದು, ಆದ್ದರಿಂದ ಅದನ್ನು ತಿರುಚುವ ಪ್ರಯತ್ನ ಆಗಬಾರದು ಎಂದು ಹೇಳಿದ್ದಾರೆ.


ಪಠ್ಯದಲ್ಲಿ ವಾಸ್ತವ ವಿಚಾರಗಳನ್ನು ಪ್ರಕಟ ಮಾಡುವುದು ಒಳ್ಳೆಯದು. ಮಾನವ ಬದುಕಿಗೆ ಬೇಕಾದ ತತ್ವವನ್ನು ಕೊಡುವುದು ಮುಖ್ಯ. ನಮ್ಮನ್ನು ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡಿದರೆ ಅದು ಬಸವಣ್ಣನವರಿಗೆ ಕೊಡುವ ಗೌರವವೆಂದು ದಾವಣಗೆರೆಯಲ್ಲಿ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.


ಇದನ್ನೂ ಓದಿ: ಪ್ಲಾಸ್ಟಿಕ್ ಬಳಕೆ ಕುರಿತ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ ಸರ್ಕಾರ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.