ಬೆಂಗಳೂರು: 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಹೊತ್ತುರಿದು, #CongressMukthKarnataka ಆಗಲಿದೆ ಎಂದು ಬಿಜೆಪಿ ಟೀಕಿಸಿದೆ. #ಕಾಂಗ್ರೆಸ್‌ಕಲಹ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕೈ’ ಪಕ್ಷದ ವಿರುದ್ಧ ಕಿಡಿಕಾರಿದೆ.
‘ನವ ಸಂಕಲ್ಪ ಶಿಬಿರಕ್ಕೆ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಕೈಕೊಟ್ಟಿದ್ದಾರೆ. ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ ಅಸಮಾಧಾನದ ಬೆಂಕಿ ಹತ್ತಿಕೊಂಡಿದೆ. ಈ ಬೆಂಕಿಯ ಕಾವಿನಿಂದ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಹೊತ್ತುರಿದು, #CongressMukthKarnataka ಆಗಲಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ನವ ಸಂಕಲ್ಪ ಶಿಬಿರಕ್ಕೆ @INCKarnataka ಪಕ್ಷದ ಅನೇಕ ನಾಯಕರು ಕೈಕೊಟ್ಟಿದ್ದಾರೆ.
ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ ಅಸಮಾಧಾನದ ಬೆಂಕಿ ಹತ್ತಿಕೊಂಡಿದೆ.
ಈ ಬೆಂಕಿಯ ಕಾವಿನಿಂದ 2023 ಚುನಾವಣೆಯಲ್ಲಿ ಕಾಂಗ್ರೆಸ್ ಹೊತ್ತುರಿದು, #CongressMukthKarnataka ಆಗಲಿದೆ.#ಕಾಂಗ್ರೆಸ್‌ಕಲಹ
— BJP Karnataka (@BJP4Karnataka) June 3, 2022
ಇದನ್ನೂ ಓದಿ: ಕಲಬುರಗಿಯಲ್ಲಿ ಬಸ್ ಅಪಘಾತ: ಮೃತರಿಗೆ ಪರಿಹಾರದ ಬಗ್ಗೆ ಸಿಎಂ ಜೊತೆ ಚರ್ಚೆ- ಶ್ರೀರಾಮುಲು
‘ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಿಎಂ ಇಬ್ರಾಹಿಂ ಮಾತುಗಳನ್ನು ಕಾಂಗ್ರೆಸ್ ನಾಯಕರು ನಿರ್ಲಕ್ಷಿಸಿದರು. ಇಂದು ಅದೇ ಇಬ್ರಾಹಿಂ ಮಾತಿಗೆ ಬೆಲೆಕೊಡಲೇ ಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಂಗ್ರೆಸ್ ಈಗ, ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸುತ್ತದೋ ಅಥವಾ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷರ ಮಾತನ್ನು ತಿರಸ್ಕರಿಸುತ್ತದೋ?’ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಿಎಂ ಇಬ್ರಾಹಿಂ ಮಾತುಗಳನ್ನು ಕಾಂಗ್ರೆಸ್ ನಾಯಕರು ನಿರ್ಲಕ್ಷಿಸಿದರು. ಇಂದು ಅದೇ ಇಬ್ರಾಹಿಂ ಮಾತಿಗೆ ಬೆಲೆಕೊಡಲೇ ಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ಕಾಂಗ್ರೆಸ್ ಈಗ, ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸುತ್ತದೋ ಅಥವಾ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷರ ಮಾತನ್ನು ತಿರಸ್ಕರಿಸುತ್ತದೋ?#ಕಾಂಗ್ರೆಸ್‌ಕಲಹ
— BJP Karnataka (@BJP4Karnataka) June 3, 2022
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಜೆಡಿಎಸ್ ಪಕ್ಷದ ಪರವಾಗಿ ವಕಾಲತ್ತು ಆರಂಭಿಸಿದಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ವೈಮನಸ್ಸು ಮರೆಯುವ ಮಾತುಗಳನ್ನಾಡುತ್ತಿದ್ದಾರೆ. ಅತಂತ್ರವಾದಲ್ಲಿ ಖರ್ಗೆ ಮುಖ್ಯಮಂತ್ರಿಯಾಗುವ ಭಯವೇ? ದಲಿತರನ್ನು ಕಟ್ಟಿ ಹಾಕಲು ಈಗಲೇ ರಣ ತಂತ್ರವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಖರ್ಗೆ ಜೆಡಿಎಸ್ ಪಕ್ಷದ ಪರವಾಗಿ ವಕಾಲತ್ತು ಆರಂಭಿಸಿದಾಗಲೇ @DKShivakumar ಮತ್ತು @siddaramaiah ತಮ್ಮ ವೈಮನಸ್ಸು ಮರೆಯುವ ಮಾತುಗಳನ್ನಾಡುತ್ತಿದ್ದಾರೆ.
ಅತಂತ್ರವಾದಲ್ಲಿ ಖರ್ಗೆ ಮುಖ್ಯಮಂತ್ರಿಯಾಗುವ ಭಯವೇ?
ದಲಿತರನ್ನು ಕಟ್ಟಿ ಹಾಕಲು ಈಗಲೇ ರಣ ತಂತ್ರವೇ?#ಕಾಂಗ್ರೆಸ್‌ಕಲಹ— BJP Karnataka (@BJP4Karnataka) June 3, 2022
ಇದನ್ನೂ ಓದಿ: KCET ಪ್ರವೇಶ ಕಾರ್ಡ್ 2022 ಬಿಡುಗಡೆ: ಈ ರೀತಿ ಡೌನ್‌ಲೋಡ್ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.