ಬೆಂಗಳೂರು : ದಶಕಗಳ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ದಿ ಮೋಸ್ಟ್ ಅಟ್ರ್ಯಾಕ್ಷನ್ ಗೆ ಕಾರಣವಾಗಿದ್ದ ಡಬಲ್ ಡೇಕರ್ ಬಸ್ ಗಳು ನಗರೀಕರಣ ಆದಂತೆಲ್ಲಾ ಸಂಚಾರ ನಿಲ್ಲಿಸಿದ್ದವು. ಇದೀಗ ಮತ್ತೆ ಡಬಲ್ ಡೇಕರ್ ಬಸ್  ಸಂಚಾರವನ್ನ ಪುನರರಾಂಭ ನಡೆಸಲು ಸರ್ಕಾರ ಸಿದ್ದತೆ ನಡೆಸಿದೆ. 10 ಬಸ್ ಖರೀದಿಗೆ 15 ದಿನದಲ್ಲಿ ಟೆಂಡರ್ ಕರೆಯಲು ತಯಾರಿ ನಡೆಸಲಾಗಿದ್ದು, ಕೆಲವೇ ದಿನಗಳಲ್ಲಿ ಟೆಂಡರ್ ಬಿಡ್ ಕರೆಯಲು ಬಿಎಂಟಿಸಿ ತಯಾರಿ ನಡೆಸಿದೆ.


COMMERCIAL BREAK
SCROLL TO CONTINUE READING

1970/80 ರ ಕಾಲದಲ್ಲಿ ಸೇವೆ ಆರಂಭ ಮಾಡಿದ್ದ ಡಬಲ್ ಡೆಕ್ಕರ್ ಬಸ್  :
ಕಾಲ ಕಳೆದಂತೆ ನಗರ ಬೆಳೆದು ನಿಂತಿದೆ. ರಸ್ತೆಗಳ ವಿಸ್ತೀರ್ಣ, ಫ್ಲೈಓವರ್, ತಂತಿಗಳ ಅಳವಡಿಕೆ ಸೇರಿ ನಾನಾ‌ಕಾರಣಗಳಿಂದ 1997ರಲ್ಲಿ  ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಪ್ರಯಾಣಿಕರ ಬೇಡಿಕೆ ಮೇರೆಗೆ ಮತ್ತೆ ಡಬಲ್ ಡೆಕ್ಕರ್ ಬಸ್ ರಸ್ತೆಗಿಳಿಸಲು ಪ್ಲ್ಯಾನ್ ನಡೆಯುತ್ತಿದೆ.


ಇದನ್ನೂ ಓದಿ : ಗ್ಯಾಸ್‌ ಸಿಲಿಂಡರ್ ದರ ಇಳಿಕೆ : ಜಿಲ್ಲಾವಾರು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!


ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಟೆಂಡರ್ ಪ್ರಕ್ರಿಯೆ ಆರಂಭ ಆಗಿತ್ತು. ಆದ್ರೆ ಕೆಲವು ಕಾರಣಗಳಿಂದ ವರ್ಕ್ ಔಟ್ ಆಗದೇ ಬಿಡ್ ಪ್ರಕ್ರಿಯೆ ಅಂತ್ಯವಾಗಿತ್ತು. ಈ ಹಿನ್ನಲೆ ಈಗ ಮತ್ತೆ ಬಿಎಂಟಿಸಿ ಟೆಂಡರ್‌ ಕರೆದಿದೆ. ಈ ಬಾರಿ ಬಹುತೇಕ ಎಲೆಕ್ಟ್ರಿಕ್ ವಾಹನಗಳಿರುವ ಡಬಲ್ ಡೆಕ್ಕರ್ ಬಸ್ ಸಂಚಾರ ಆರಂಭ ಆಗುವ ಸಾಧ್ಯತೆ ಇದೆ.


ಡಬಲ್ ಡೆಕ್ಕರ್ ಬಸ್ ಸಂಚಾರ ನಿಲ್ಲಿಸಲು ಕಾರಣ; 
- ರಸ್ತೆಗಳ ವಿಸ್ತೀರ್ಣ 
- ರಸ್ತೆಗಳ ಮೇಲ್ಭಾಗದಲ್ಲಿ ತಂತಿ  ಹೆಚ್ಚಳ 
- ಬಸ್‌ಗಳ ನಿರ್ವಹಣೆ ಕೊರತೆ 
- ನಗರೀಕರಣ


ಇದನ್ನೂ ಓದಿ : ಶಕ್ತಿಯೋಜನೆಯ ಸಾಧಕ ಬಾಧಕಗಳು ನಿಮ್ಮಮುಂದೆ


ಡಬಲ್ ಡೆಕ್ಕರ್ ಬಸ್ ವಿಶೇಷತೆ :
- 1970-80 ರಲ್ಲಿ ಸೇವೆ ನೀಡುತ್ತಿದ್ದ ಡಬಲ್ ಡೆಕ್ಕರ್ ಬಸ್
- ಶಿವಾಜಿನಗರ, ಗಾಂಧಿಬಜಾರ್, ಶ್ರೀನಗರ, ಕೆ.ಆರ್.ಮಾರ್ಕೆಟ್ ನಿಂದ ಮೆಜೆಸ್ಟಿಕ್ ಗೆ ಓಡಾಡುತ್ತಿದ್ದ ಬಸ್
- ಪ್ರಸ್ತುತ ಚಾವಣಿ ಮುಚ್ಚಿರುವ ಡಬಲ್ ಡೆಕ್ಕರ್ ಬಸ್ ಗಳ ಖರೀದಿ
- ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ‌ಗಳ ಖರೀದಿಗೆ ಒತ್ತು
- ಪ್ರತಿ ಬಸ್ ಗೆ 2.2 ಕೋಟಿ ವೆಚ್ಚ ಸಾಧ್ಯತೆ
- ಪ್ರತಿ ಡಬಲ್ ಡೆಕ್ಕರ್ ಬಸ್ ಗಳಲ್ಲಿ 90 ಆಸನಗಳ  ಸಾಮರ್ಥ್ಯ
- ಹೊರ ವರ್ತುಲಗಳಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ
-ಈಗಾಗಲೇ ಡಬಲ್ ಡೆಕ್ಕರ್ ಸಂಚಾರಿಸಬೇಕಾದ ರಸ್ತೆ ಸರ್ವೇಯನ್ನ ಬಿಎಂಟಿಸಿ ನಡೆಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.