ಬೆಂಗಳೂರು : ಕೊರೋನಾ ಲಸಿಕೆ (Corona Vaccine) ಪಡೆದ ನಂತರ ದೆಹಲಿಯಲ್ಲಿ 52 ಮಂದಿಗೆ ಅಡ್ಡ ಪರಿಣಾಮಗಳು ಉಂಟಾಗಿವೆ ಎನ್ನಲಾಗುತ್ತಿದೆ. ದೇಶದ ಇತರೆ ಭಾಗಗಳಿಂದಲೂ ದೂರ ಬರುತ್ತಿವೆ. ನಾರ್ವೆ (Norway) ದೇಶದಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಲಸಿಕೆ ಪಡೆದಿದ್ದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ (Manipal Hospital) ಚೇರಮನ್ ಡಾ. ಸುದರ್ಶನ್ ಬಲ್ಲಾಳ್ (Dr. Sudarshan Ballal) ಪ್ರತಿಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮಣಿಪಾಲ್ ಆಸ್ಪತ್ರೆಯಲ್ಲಿ ಒಂದೇ ದಿನ 4 ಸಾವಿರ ಮಂದಿಗೆ ವ್ಯಾಕ್ಸಿನ್ ವಿತರಿಸುವ ಕಾರ್ಯ ಎರಡು ಸೆಷನ್ ಗಳಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಣಿಪಾಲ್ ಆಸ್ಪತ್ರೆಗಳ ಸಮೂಹದ ಮುಖ್ಯಸ್ಥರಾದ ಸುದರ್ಶನ್ ಬಲ್ಲಾಳ್, 'ನಿನ್ನೆಯಿಂದ ವ್ಯಾಕ್ಸಿನ್ ರಿಲೀಸ್ ಮಾಡಿದ್ದಾರೆ. ನಿನ್ನೆಯೇ ನನಗೆ ವ್ಯಾಕ್ಸಿನ್ ಪಡೆಯಲು ಅವಕಾಶ ಸಿಕ್ಕಿದ್ದಕ್ಕೆ ಅಬಾರಿಯಾಗಿದ್ದೇನೆ. ನಾನು ವ್ಯಾಕ್ಸಿನ್ ತೆಗೆದುಕೊಂಡು ಒಂದು ದಿನ ಕಳೆಯಿತು. ಏನೇನು ಸೈಡ್ ಎಫೆಕ್ಟ್ ಆಗಿಲ್ಲ. ವ್ಯಾಕ್ಸಿನ್ ಸುರಕ್ಷಿತವಾಗಿದೆ ಎಂದು ಹೇಳಬಹುದು' ಎಂದಿದ್ದಾರೆ.


ಇಂಗ್ಲೆಂಡ್ (England) ದೇಶದಲ್ಲೂ ಇದೇ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದಾರೆ. ಯಾರು ಕೂಡ ಭಯಪಡದೇ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ಇದರ ಜೊತೆಗೆ ಮಾಸ್ಕ್ ಧರಿಸುವುದನ್ನು ಮತ್ತು ಸಾಮಾಜಿಕ ಅಂತರವನ್ನ ಮುಂದುವರಿಸಬೇಕು. ಇವತ್ತು ನಮ್ಮ ಮಣಿಪಾಲ್ ಆಸ್ಪತ್ರೆಯಲ್ಲೇ ಲಸಿಕೆ ನೀಡಲಾಗುತ್ತಿದೆ.‌ ಇಲ್ಲಿಗೆ ಆರೋಗ್ಯ ಸಚಿವ ಸುಧಾಕರ್ ಭೇಟಿ ನೀಡಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.


ಇದನ್ನೂ ಓದಿ - ವಿದೇಶಗಳಿಗೂ Corona Vaccine ನೀಡಲು ನಿರ್ಧಾರ !


ಮಣಿಪಾಲ್ ಆಸ್ಪತ್ರೆಯಲ್ಲಿ 4200 ಮಂದಿಯಷ್ಟು ಜನ‌ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ. ದೇಶದಲ್ಲೇ ನಮ್ಮ ಆಸ್ಪತ್ರೆಯಲ್ಲೇ ಅತಿಹೆಚ್ಚು ಜನರ ಹೆಸರು ‌ನೊಂದಣಿ ಆಗಿದೆ ಎಂದುಕೊಂಡಿದ್ದೇನೆ. ನಾವೂ ಬಹಳ ಶಿಸ್ತಾಗಿ ವ್ಯಾಕ್ಸಿನ್ ನೀಡುವ ಕೆಲಸ ಮಾಡುತ್ತಿದ್ದೇವೆ. ಯಾರು ಕೂಡ ಊಹಾಪೋಹಗಳಿಗೆ ಕಿವಿಗೂಡದೇ ಲಸಿಕೆ ತೆಗೆದುಕೊಳ್ಳಬೇಕು
ಇದರಿಂದ ತುಂಬಾ ಜನರ ಜೀವನ ಉಳಿಯುತ್ತೆ ಎಂದು ಸುದರ್ಶನ್  ಬಲ್ಲಾಳ್ ವಿವರಿಸಿದರು.


ಲಸಿಕೆ ಪಡೆದಾಗ ಆಲ್ಕೋಹಾಲ್ ಬೇಡ :
ಕೊರೋನಾ ಲಸಿಕೆ ಪಡೆದವರು ಆಲ್ಕೋಹಾಲ್ ಸೇವನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಾ.‌ ಸುದರ್ಶನ್  ಬಲ್ಲಾಳ್, ಯಾರೂ ಆಲ್ಕೊಹಾಲ್ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಉತ್ತಮವಾದ ಜೀವನ ಕ್ರಮವನ್ನು ಅಳವಡಿಸಿಕೊಳ್ಳಬೇಕು.‌ ರಷ್ಯಾ (Russia) ದೇಶ ಲಸಿಕೆ‌ ಪಡೆದವರು ಆಲ್ಕೋಹಾಲ್ ಸೇವನೆ ಮಾಡಬಾರದು ಎಂದು ಕಟ್ಟಪ್ಪಣೆ ವಿಧಿಸಿದೆ. ಅಮೆರಿಕಾದಲ್ಲಿ (America) ಇಂಥ ಯಾವುದೇ ನಿರ್ಬಂಧ ಇಲ್ಲ. ಆಲ್ಕೋಹಾಲ್ ಸೇವನೆಯಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಹೇಳಿದರು.


ಇದನ್ನೂ ಓದಿ - Corona Vaccine ಪಡೆದ ಬಳಿಕ ಹಲವರಲ್ಲಿ ಅಡ್ಡಪರಿಣಾಮ, ಇಲ್ಲಿದೆ ಸಂಪೂರ್ಣ ವಿವರ


ಲಸಿಕೆ ಹಾಕಿಸಿಕೊಂಡವರಿಗೆ ಜ್ವರ ಅಥವಾ ನೋವು ಬರುವುದು ಸಹಜ. ಅಂಥ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು‌ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.