ಕಲುಷಿತ ನೀರಿಗೆ ಎರಡು ಬಲಿ:  ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜೀವ ಜಲವೇ ವಿಷವಾಗಿದ್ದು, ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟಿದ್ದರೆ, ಇಪ್ಪತ್ತಕ್ಕೂ ಅಧಿಕ ಜನ ವಾಂತಿ ಬೇಧಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಪಾಲಾಗಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹೊತಪೇಟ್ ಗ್ರಾಮದಲ್ಲಿ ನಡೆದಿದೆ. ಹೊತಪೇಟ್ ಗ್ರಾಮದ ಹೊನ್ನಪ್ಪಗೌಡ ಮತ್ತು ಈರಮ್ಮ ಎಂಬ ಮಹಿಳೆ ಕಲುಷಿತ ನೀರು ಸೇವಿಸಿ ವಾಂತಿ ಬೇಧಿಯಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕುಡಿಯುವ ನೀರಾಯಿತು ವಿಷ:
ಗ್ರಾಮದಲ್ಲಿ ಹಳೆ ಕಾಲದ ಕುಡಿಯುವ ನೀರಿನ ಬಾವಿಯಿದ್ದು,  ಇದೇ ಬಾವಿಯಿಂದ ಟ್ಯಾಂಕ್‌ಗೆ ನೀರು ಸರಬರಾಜು ಆಗಿ ಆ ನೀರನ್ನ ನಲ್ಲಿ ಮೂಲಕ ಜನರಿಗೆ ಸರಬರಾಜು ಮಾಡಲಾಗುತ್ತಿದೆ. ತೆರೆದ ಬಾವಿಯಾಗಿದ್ದರಿಂದ ಕಸಕಡ್ಡಿ ಬಿದ್ದು ನೀರು ಕಲುಷಿತಗೊಂಡಿದ್ದು, ಇದೀಗ ಅದೇ ನೀರು ಕುಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಿದೆ.


ಇದನ್ನೂ ಓದಿ- ದೀಪಾವಳಿ‌ ಸಂಭ್ರಮ: ಮಾದಪ್ಪನ ಬೆಟ್ಟದಲ್ಲಿ ಹಾಲರವಿ ಉತ್ಸವದ ಸಡಗರ


ಹೊತಪೇಟ್ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕಲುಷಿತ ನೀರು ಸೇವಿಸಿ ಜನ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಶುದ್ಧ ಕುಡಿಯುವ ನೀರು ಪೂರೈಸುವುದು ದೂರದ ಮಾತಾಗಿದೆ. ಕೊನೆ ಪಕ್ಷ ಇರೋ ಬಾವಿಗೆ ಮೇಲೆ ಆಶ್ರಯ ಕೂಡ ಕಲ್ಪಿಸಿಲ್ಲ. ಇದೀಗ ಇಬ್ಬರು ಗ್ರಾಮಸ್ಥರು ಕಲುಷಿತ ನೀರು ಕುಡಿದು ಸಾವನ್ನಪ್ಪಿದ ಹಿನ್ನಲೆಯಲ್ಲಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ದೌಡಾಯಿಸಿ ಬಿಡುಬಿಟ್ಟಿದ್ದು, ಗ್ರಾಮಸ್ಥರಿಗೆ ಸಕಲ ರೀತಿಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆಗಳನ್ನ ಕಲ್ಪಿಸಲಾಗುತ್ತಿದೆ. ಅಲ್ಪಪ್ರಮಾಣದಲ್ಲಿ ಅಸ್ವಸ್ಥಗೊಂಡವರಿಗೆ ಗ್ರಾಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚು ಆರೋಗ್ಯ ಹದಗೆಟ್ಟವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  


ಇದನ್ನೂ ಓದಿ- ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು: ಕಾಂಗ್ರೆಸ್


ಅದೆನೇ ಇರಲಿ ಅನೇಕ ವರ್ಷಗಳಿಂದ ಹೊತಪೇಟ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಜನ ಅಸ್ವಸ್ಥಗೊಂಡು ಇದೀಗ ಅದೇ ಕಲುಷಿತ ನೀರು ಸೇವಿಸಿ ಇಬ್ಬರೂ ಸಾವನ್ನಪ್ಪಿದ್ದು ಮಾತ್ರ ದುರಂತವೇ ಸರಿ.. ಇನ್ನಾದರೂ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೊತಪೇಟ್ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡ್ತಾರ ಅನ್ನೊದನನ ಕಾದು ನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.