ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು: ಕಾಂಗ್ರೆಸ್

ಬಸನಗೌಡ ಪಾಟೀಲ್ ಯತ್ನಾಳ್ ಬಿಡುತ್ತೇನೆ ಎನ್ನುತ್ತಿರುವ ಹಾವು ಯಾವುದು? ಭ್ರಷ್ಟಾಚಾರದ ಹಾವೇ? ಅಥವಾ ಸಿಡಿ ಹಾವೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Oct 25, 2022, 12:50 PM IST
  • ಶಿಸ್ತಿನ ಪಕ್ಷ ಎಂದುಕೊಳ್ಳುವ ಬಿಜೆಪಿಗೆ ಬಸವನಗೌಡ ಯತ್ತಾಳ್‍ಗೆ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗಿಲ್ಲ
  • ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು ಎಂಬುದು ಸ್ಪಷ್ಟವಾಗಿದೆ
  • #BJPvsBJP ಕದನದಲ್ಲಿ ಕಾಂಗ್ರೆಸ್ ಕಿಟಿಕಿಯಲ್ಲಿ ಇಣುಕುತ್ತಿದ್ದ ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ
ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು: ಕಾಂಗ್ರೆಸ್  title=
ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಶಿಸ್ತಿನ ಪಕ್ಷ ಎಂದುಕೊಳ್ಳುವ ಬಿಜೆಪಿಗೆ ಕನಿಷ್ಠ ಪಕ್ಷ ಒಬ್ಬ ಬಸವನಗೌಡ ಪಾಟೀಲ್ ಯತ್ತಾಳ್‍ಗೆ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗಿಲ್ಲ. ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು ಎಂಬುದು ಸ್ಪಷ್ಟ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

#BJPvsBJP ಹ್ಯಾಶ್ ಟ್ಯಾಗ್ ಬಳಸಿ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಯತ್ನಾಳ್ ಆಡುವ ಮಾತುಗಳು ಬಿ.ಎಲ್.ಸಂತೋಷ್ ಅವರದ್ದು, ಬಾಯಿ ಮಾತ್ರ ಯತ್ನಾಳ್‌ರದ್ದು!’ ಅಂತಾ ಟೀಕಿಸಿದೆ.

ಇದನ್ನೂ ಓದಿ: BJP Minister slaps woman : ಸಚಿವ ಸೋಮಣ್ಣರಿಂದ ಕಪಾಳ ಮೋಕ್ಷ ಘಟನೆಗೆ ಟ್ವಿಸ್ಟ್: ತನಗೆ ಹೊಡೆದಿಲ್ಲ ಎಂದ ಮಹಿಳೆ!!

ನನ್ನ ತಂಟೆಗೆ ಬಂದರೆ ನಿಜವಾದ ಹಾವು ಬಿಡ್ತೀನಿ ಎಂದಿರುವ ಯತ್ನಾಳ್ ಹೇಳಿಕೆಗೆ ಲೇವಡಿ ಮಾಡಿರುವ ಕಾಂಗ್ರೆಸ್, ‘ಕಾಂಗ್ರೆಸ್ ಕಿಟಿಕಿ ಇಣುಕುವುದರಲ್ಲೇ ನಿರತರಾಗಿದ್ದ ಬಿಜೆಪಿಗೆ ತಮ್ಮಲ್ಲಿನ #BJPvsBJP ಕದನದಲ್ಲಿ ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ, ಅವರ ಹಾವುಗಳು ಎಲ್ಲೆಲ್ಲಿರುತ್ತವೆ, ಎಲ್ಲೆಲ್ಲಿ ಹೆಡೆ ಎತ್ತುತ್ತವೆ ಎಂಬುದು ಸ್ವತಃ ಬಿಜೆಪಿಗೇ ತಿಳಿಯುತ್ತಿಲ್ಲ! ಯತ್ನಾಳರ ಹಾವು ಯಾವುದು ಬಿಜೆಪಿ? ಭ್ರಷ್ಟಾಚಾರದ ಹಾವೇ? ಅಥವಾ ಸಿಡಿ ಹಾವೇ?’ ಎಂದು ಪ್ರಶ್ನಿಸಿದೆ.

ಹಸಿವನ್ನೂ ನಿಷೇದಿಸುತ್ತದೆಯೇ?

‘ಇಂದು ಊಟ ಮಾಡಲು ಇಂದೇ ದುಡಿಯಬೇಕು ಎನ್ನುವಂತಿದೆ ಮೀನುಗಾರರ ಸ್ಥಿತಿ. ಪ್ರಕೃತಿಯ ಪ್ರಕ್ಷುಬ್ಧ ವಾತಾವರಣವಿದ್ದಾಗ ಮೀನುಗಾರಿಕೆಯನ್ನು ನಿಷೇಧಿಸುವ ಸರ್ಕಾರ ಅವರ ಹಸಿವನ್ನೂ ನಿಷೇಧಿಸುತ್ತದೆಯೇ? ಮೀನುಗಾರಿಕೆ ನಿಷೇಧಿತ ದಿನಗಳಲ್ಲಿ 1,800 ರೂ. ಪರಿಹಾರ ನೀಡುವುದಾಗಿ ಹೇಳಿದ್ದ ಬಿಜೆಪಿ ಈಗ ಆ ಮಾತು ಮರೆತಿದ್ದೇಕೆ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: "ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಸುಗ್ರಿವಾಜ್ಞೆ ರಾಜ್ಯಪಾಲರ ಅಂಕಿತ ಸಂತಸದ ಸಂಗತಿ"

ಕಳಪೆ ರಸ್ತೆ ವಿಚಾರವಾಗಿ ಕಿಡಿಕಾರಿರುವ ಕಾಂಗ್ರೆಸ್, ‘ಸ್ವತಃ ಪ್ರಧಾನಿ ಕಚೇರಿಯ ಆದೇಶಕ್ಕೇ ಕ್ಯಾರೇ ಎನ್ನದಷ್ಟು ಬಂಡತನಕ್ಕೆ ತಲುಪಿದೆ #40PercentSarkaraದ ಭ್ರಷ್ಟಾಚಾರ. ಕರ್ನಾಟಕದ ಅಧಿಕಾರಿಗಳೇ ಪ್ರಧಾನಿಗೆ ಭಯಪಡಿವುದಿಲ್ಲ ಎಂದಮೇಲೆ ಚೀನಾ ಭಯಪಡುವುದೇ ಬಿಜೆಪಿ?! ಭ್ರಷ್ಟಾಚಾರಕ್ಕೆ ಪ್ರಧಾನಿ ಬಳಿ ಪರಿಹಾರವಿಲ್ಲ, ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಲಜ್ಜೆ ಇಲ್ಲವೆಂದು ಇದರಿಂದ ತಿಳಿಯುತ್ತಿದೆ’ ಎಂದು ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News