Earthquake In Vijayapura: ಗಮ್ಮಟನಗರಿ ವಿಜಯಪುರದಲ್ಲಿ ನಿನ್ನೆ (28 ಜನವರಿ 2024) ತಡರಾತ್ರಿ ಮತ್ತೆ ಭೂಕಂಪದ ಅನುಭವವಾಗಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ನಿನ್ನೆ ರಾತ್ರಿ ವಿಜಯಪುರದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಮೊದಲಿಗೆ ರಾತ್ರಿ 12.22ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಮತ್ತೆ ರಾತ್ರಿ 01:20ರ ಸುಮಾರಿಗೆ ಭೂಕಂಪದ ಅನುಭವವಾಗಿದೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ, ವಿಜಯಪುರದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.9ರಷ್ಟು ದಾಖಲಾಗಿತ್ತು ಎಂದು ತಿಳಿದುಬಂದಿದೆ. ಭೂಮಿಯ 5 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಮನೆಯಲ್ಲಿನ ಸಾಮಗ್ರಿಗಳು ಚಲ್ಲಾಪಿಲ್ಲಿಯಾಗಿದ್ದವು. ಭಯಭೀತರಾದ ಜನ ಮನೆಗಳಿಂದ ಹೊರಗೆ ಓಡಿ ಬಂದಿದ್ದರು ಎಂದು ವರದಿಯಾಗಿದೆ. 


ಇದನ್ನೂ ಓದಿEarthquake: ಭಾರತದ ನೆರೆಯ ದೇಶದಲ್ಲಿ 7.2 ತೀವ್ರತೆಯ ಭೂಕಂಪ, ದೆಹಲಿ-ಎನ್‌ಸಿಆರ್‌ನಲ್ಲೂ ಕಂಪಿಸಿದ ಭೂಮಿ


ಗಮನಾರ್ಹವಾಗಿ, ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರ ವರದಿ ಮಾಡುವ ಮುನ್ನವೇ, ಯೂರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ವಿಜಯಪುರ ಭೂಕಂಪದ ಬಗ್ಗೆ ವರದಿ ಮಾಡಿತ್ತು. 


ಯೂರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ಪ್ರಕಾರ, ಸೋಲಾಪುರದಿಂದ ಸುಮಾರು 109 ಕಿಲೋಮೀಟರ್ ಹಾಗೂ ವಿಜಯಪುರ (ಬಿಜಾಪುರ)ದಿಂದ ಕೇವಲ 19 ಕಿಲೋಮೀಟರ್ ಆಗ್ನೇಯ ಭಾಗದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿತ್ತು. 


ಇದನ್ನೂ ಓದಿ- ರಾಷ್ಟ್ರ ರಾಜಧಾನಿಯಲ್ಲಿ ಪ್ರಬಲ ಭೂಕಂಪ : 6.1 ತೀವ್ರತೆ ದಾಖಲು


ಗಮನಾರ್ಹವಾಗಿ ಒಂದೂವರೆ ತಿಂಗಳ ಹಿಂದೆ ಡಿಸೆಂಬರ್ 08, 2023ರಂದು ವಿಜಯಪುರ ಜಿಲ್ಲೆಯಲ್ಲಿ ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.