ಚಾಮರಾಜನಗರ: ಮಲೆನಾಡು , ಮೈಸೂರು  ಹಾಗೂ ಅನೇಕ ಕಡೆಗಳಲ್ಲಿ  ಕೆಲವು ದಿನಗಳಿಂದ ಕಾಡಾನೆ ಹಾವಳಿ ಕಡಿಮೆ ಆಗಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಮತ್ತೆ ಕಾಡು ಪ್ರಾಣಿ ಮನು ಸಂಘರ್ಷದ ಘಟನೆಯೊಂದು ಬೆಳಕಿಗೆ ಬಂದಿದೆ. ಜಮೀನಿನಲ್ಲಿದ್ದ ರೈತನ ಮೇಲೆ ಆನೆಯೊಂದು ದಾಳಿ ಮಾಡಿದ್ದು ರೈತನ ಎರಡೂ ಕಾಲುಗಳು ಮುರಿದಿವೆ.


COMMERCIAL BREAK
SCROLL TO CONTINUE READING

ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯದ ಗೋಪಾಲಪುರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಗರದ ಗೋಪಾಲಪುರ ಗ್ರಾಮದ ಮಹಾದೇವಪ್ಪ ಎಂಬವರು ತಮ್ಮ ಹೊಲದಲ್ಲಿ ಕೆಲಸ ಮಾಡುತಿದ್ದ ವೇಳೆಯಲ್ಲಿ  ಏಕಾಏಕಿ ಆನೆಯೊಂದು ಮೇಲೆರಗಿದೆ. ಆನೆಯಿಂದ ಜೀವ ಉಳಿಸಿಕೊಳ್ಳುವ ಬರದಲ್ಲಿ ರೈತನ ಎರಡೂ ಕಾಳುಗಳು ಮುರಿದಿವೆ ಎಂದು ವರದಿ ಆಗಿದೆ. 


ಇದನ್ನೂ ಓದಿ- ಪದ್ಮವಿಭೂಷಣ- ಪದ್ಮಭೂಷಣ ಪ್ರಶಸ್ತಿ ಹಿಂದೆ ಇದೆಯಾ ಈ ರಾಜಕೀಯ ಲೆಕ್ಕಾಚಾರಗಳು!?


ಈ ದುರ್ಘಟನೆಯಲ್ಲಿ ಕಾಲು ಕಳೆದುಕೊಂಡಿರುವ ರೈತನಿಗೆ ಗುಂಡ್ಲುಪೇಟೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.  


ಇದನ್ನೂ ಓದಿ-Chitradurga : ಮದುವೆ ಮುಹೂರ್ತದಲ್ಲಿ ಅಕ್ಷತೆ ಜೊತೆ ಅರಳಿದ ಸಂವಿಧಾನ! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.