ಶಿರಸಿ: ಆನೆಯೊಂದು ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ದೇಹಳ್ಳಿಯಲ್ಲಿ ಇಡ್ಡೆಮನೆಯಲ್ಲಿ ನಡೆದಿದೆ. ವಿದ್ಯುತ್ ತಂತಿ ತಗುಲಿ ಆನೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. 


COMMERCIAL BREAK
SCROLL TO CONTINUE READING

ಕಾಡು ಪ್ರಾಣಿಗಳು ತೋಟಕ್ಕೆ ಬಾರದೆಂದು ದೇಹಳ್ಳಿಯಲ್ಲಿ ವ್ಯಕ್ತಿಯೊಬ್ಬರು ತೋಟದ ಸುತ್ತ ವಿದ್ಯುತ್ ಲೈನ್ ಹಾಕಿದ್ದರು ಎನ್ನಲಾಗಿದೆ. ಈ ವೇಳೆ ಕಾಡು ಆನೆಯೊಂದು ತೋಟಕ್ಕೆ ನುಗ್ಗಿದ್ದು, ಪರಿಣಾಮ‌ ಅಲ್ಲಿ ಹಾಕಲಾಗಿರುವ ವಿದ್ಯುತ್ ತಂತಿ ತಗುಲಿ ಆನೆ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.


ಆನೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಯಲ್ಲಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಮಗ್ರವಾಗಿರುವ ತನಿಖೆ‌ ಮಾಡುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ಐಐಟಿ ಧಾರವಾಡದಲ್ಲಿ ₹35,000 ಸಂಬಳದ ಹುದ್ದೆಗೆ ಅರ್ಜಿ ಆಹ್ವಾನ-ಮಾಹಿತಿ, ವಿವರ ಇಲ್ಲಿದೆ 


ಕಾಡಾನೆ ತೋಟಕ್ಕೆ ಹಾಕಿರುವ ವಿದ್ಯುತ್ ಲೈನ್ ತಗುಲಿ ಮೃತಪಟ್ಟಿದೇಯೋ ಅಥವಾ ಆನೆ ನಡೆದುಕೊಂಡು ಹೋಗುವ ಮಾರ್ಗದಲ್ಲೆನಾದರೂ ವಿದ್ಯುತ್‌ ಲೈನ್‌ ಹರಿದು ಬಿದ್ದು, ಆನೆಗೆ ತಗುಲಿ ‌ಮೃತಪಟ್ಟಿದೇಯಾ ಎನ್ನುವ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ. 


ಒಂದು ವೇಳೆ ತೋಟಕ್ಕೆ ಹಾಕಿರುವ ವಿದ್ಯುತ್ ಲೈನ್ ತಗುಲಿ ಆನೆ ಮೃತಪಟ್ಟಿದ್ದರೆ, ತೋಟದ ಮಾಲೀಕರ ವಿರುದ್ಧ ಕ್ರಮ‌ ಕೈಗೊಳ್ಳು ಭರವಸೆಯನ್ನು ಅರಣ್ಯ ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿದೆ. 


ಇದನ್ನೂ ಓದಿ: ಖ್ಯಾತ ವೈದ್ಯ ಸತ್ಯ ಪ್ರಸಾದ್‌ ಶೆಟ್ಟಿ ಯವರ ಮುಡಿಗೆ ಜೀ ನ್ಯೂಸ್‌ ʼಯುವರತ್ನ ಪ್ರಶಸ್ತಿʼಯ ಗರಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.