ಐಐಟಿ ಧಾರವಾಡದಲ್ಲಿ ₹35,000 ಸಂಬಳದ ಹುದ್ದೆಗೆ ಅರ್ಜಿ ಆಹ್ವಾನ-ಮಾಹಿತಿ, ವಿವರ ಇಲ್ಲಿದೆ

Dharwad : IIT ಧಾರವಾಡ (Indian Institute of Technology Dharwad) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಈ ಕುರಿತು ಮಾಹಿತಿ ಇಲ್ಲಿದೆ. 

Written by - Zee Kannada News Desk | Last Updated : Mar 22, 2024, 10:03 PM IST
  • ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
  • ಐಐಟಿ ಧಾರವಾಡದಲ್ಲಿ 1 ಯಂಗ್ ಪ್ರೊಫೆಶನಲ್- II (IT) ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ
  • ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಧಾರವಾಡ ಸಂಸ್ಥೆಯಲ್ಲಿ ಯಂಗ್ ಪ್ರೊಫೆಶನಲ್- II (IT) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಐಐಟಿ ಧಾರವಾಡದಲ್ಲಿ ₹35,000 ಸಂಬಳದ ಹುದ್ದೆಗೆ ಅರ್ಜಿ ಆಹ್ವಾನ-ಮಾಹಿತಿ, ವಿವರ ಇಲ್ಲಿದೆ  title=

ಐಐಟಿ ಧಾರವಾಡದಲ್ಲಿ 1 ಯಂಗ್ ಪ್ರೊಫೆಶನಲ್- II (IT) ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ತಿಳಿಸಲಾಗಿದೆ. 

ಮಾರ್ಚ್ 23, 2024ರಂದು ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಆಯ್ಕೆಯಾದವರಿಗೆ ಧಾರವಾಡದಲ್ಲಿ ಹುದ್ದೆ ನೀಡಲಾಗುತ್ತದೆ.

ಇದನ್ನು ಓದಿ : RCBಗೆ "ಜಿಂಗಲ ಜೈ" ಅಂದ್ರು ಧ್ರುವ ಸರ್ಜಾ.! ತಂಡವನ್ನು ಹುರಿದುಂಬಿಸಲು ಹಾಡು ಬರೆದರು ಯೋಗರಾಜ್ ಭಟ 

ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಧಾರವಾಡ ಸಂಸ್ಥೆಯಲ್ಲಿ ಯಂಗ್ ಪ್ರೊಫೆಶನಲ್- II (IT) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಪಡೆದವರು ಅರ್ಹತೆ ಹೊಂದಿರುತ್ತಾರೆ. ಇನ್ನು ಆಯ್ಕೆಯಾದವರಿಗೆ ಮಾಸಿಕ ವೇತನ ₹35,000 ನೀಡಲಾಗುತ್ತದೆ.

ವಿದ್ಯಾರ್ಹತೆ :
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಕಂಪ್ಯೂಟರ್ ಅಪ್ಲಿಕೇಶನ್/ಇನ್ಫರ್ಮೇಶನ್ ಟೆಕ್ನಾಲಜಿ/ಕಂಪ್ಯೂಟರ್ ಸೈನ್ಸ್​/ಆರ್ಟಿಫಿಸಿಯಲ್ ಇಂಟೆಲಿಜೆನ್ಸ್​/ಆಪರೇಟಿಂಗ್ ಸಿಸ್ಟಮ್ಸ್​/ಸಾಫ್ಟ್‌​ವೇರ್ ಇಂಜಿನಿಯರಿಂಗ್/ಕಂಪ್ಯೂಟರ್ ಗ್ರಾಫಿಕ್ಸ್‌​ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕಾಗುತ್ತದೆ 

ವಯೋಮಿತಿ :
ಅರ್ಜಿ ಸಲ್ಲಿರುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 36 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಇನ್ನು ಆಸಕ್ತ ಅಭ್ಯರ್ಥಿಗಳು ವೆಬ್-ಸೈಟ್, ಪೋರ್ಟಲ್ ಡೆವಲಪ್​ಮೆಂಟ್​ ಮತ್ತು ನಿರ್ವಹಣೆ, MySQLನಲ್ಲಿ ಅನುಭವಿಯಾಗಿರಬೇಕು. ಅಭ್ಯರ್ಥಿಗಳು Java/C++/PHP/Python ಆಧಾರಿತ ಅಪ್ಲಿಕೇಶನ್ ಡೆವಲಪ್​ಮೆಂಟ್‌​​ನಲ್ಲಿ ಅನುಭವ ಹೊಂದಿರಬೇಕಾಗುತ್ತದೆ.

ಇದನ್ನು ಓದಿ : RCB Vs CSK :  ಉದ್ಘಾಟನಾ ಸಮಾರಂಭದಲ್ಲಿ ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್, ಪ್ರೇಕ್ಷಕರನ್ನು ಬೆರಗುಗೊಳಿಸಿದ ಪವರ್ ಫುಲ್ ಪ್ರದರ್ಶನ

ಶುಲ್ಕ:
 ಅಭ್ಯರ್ಥಿಗಳು ಅರ್ಜಿ ಅಲ್ಲಿಕೆಗೆ ಯಾವುದೇ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. 

ಇನ್ನು ಅರ್ಜಿ ಸಲ್ಲಿಸಿದವರಿಗೆ ಆನ್​​ಲೈನ್ ಟೆಸ್ಟ್​ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕೆಂದು ನೋಟಿಫಿಕೇಶನ್‌​ನಲ್ಲಿ ತಿಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News